Wednesday, 18th September 2024

Deepika Padukone: ಕಪ್ಪು ಬಿಳುಪು ಫೋಟೋಗಳಲ್ಲಿ ಫಳಫಳ ಮಿಂಚಿದ ದೀಪಿಕಾ ಪಡುಕೋಣೆ ಬೇಬಿ ಬಂಪ್!‌

deepika padukone

ಮುಂಬಯಿ: ಬಾಲಿವುಡ್‌ (bollywood) ಹಾರ್ಟ್‌ಥ್ರೋಬ್‌ ದೀಪಿಕಾ ಪಡುಕೋಣೆ (Deepika Padukone) ಹಾಗೂ ರಣವೀರ್‌ ಸಿಂಗ್‌ (Ranveer Singh) ದಂಪತಿ ಶೀಘ್ರದಲ್ಲೇ ತಂದೆ ತಾಯಿ ಆಗಲಿದ್ದಾರೆ. ನಟಿ ದೀಪಿಕಾ ಈ ವರ್ಷದ ಸೆಪ್ಟೆಂಬರ್‌ನಲ್ಲಿ ಮಗುವಿಗೆ ಜನ್ಮ ನೀಡಲಿದ್ದು, ಇದೀಗ ಕಪ್ಪು ಬಿಳುಪು ಫೋಟೋಶೂಟ್‌ನಲ್ಲಿ (Photo Shoot) ದೀಪಿಕಾ ಮಿಂಚಿದ್ದಾಳೆ. ಜೊತೆಗೆ ರಣವೀರ್‌ ಸಿಂಗ್‌ ಕೂಡ ಸಾಥ್‌ ನೀಡಿದ್ದಾರೆ.

6 ವರ್ಷಗಳಿಗೂ ಹೆಚ್ಚು ಕಾಲ ಡೇಟಿಂಗ್ ಮಾಡಿದ್ದ ಈ ಜೋಡಿ ನವೆಂಬರ್ 2018ರಲ್ಲಿ ಮದುವೆಯಾಗಿದ್ದರು. ಮದುವೆಯಾಗಿ 6 ವರ್ಷ ಕಳೆದ ಬಳಿಕ ಈ ಸ್ಟಾರ್ ಜೋಡಿಯ ಮನೆಯಲ್ಲಿ ಪುಟ್ಟ ಕಂದನ ಹೆಜ್ಜೆಗಳು ಮೂಡಲಿದೆ. ದೀಪಿಕಾಗೆ ಗಂಡು ಮಗು ಹುಟ್ಟುತ್ತದಾ ಅಥವಾ ಹೆಣ್ಣು ಮಗುವಾ ಎಂದು ತಿಳಿಯಲು ಅಭಿಮಾನಿಗಳು ಕಾಯುತ್ತಿದ್ದಾರೆ.

ನಟಿ ದೀಪಿಕಾ ಈಗ ಬೇಬಿ ಬಂಪ್​ ಫೋಟೋಶೂಟ್ ಮೂಲಕ ಮಿಂಚುತ್ತಿದ್ದಾರೆ. ಬ್ಲ್ಯಾಕ್ ಥೀಮ್​ನಲ್ಲಿ ಫೋಟೋಶೂಟ್ ಮಾಡಿಸಿದ್ದಾರೆ ನಟಿ. ಬ್ಲ್ಯಾಕ್ ಡ್ರೆಸ್​ ತೊಟ್ಟ ದೀಪಿಕಾ ಪಡುಕೋಣೆ ಬೇಬಿ ಬಂಪ್ ತೋರಿಸುತ್ತಾ ಫೋಟೋಗೆ ಪೋಸ್​ ಕೊಟ್ಟಿದ್ದಾರೆ. ರಣವೀರ್​ ಸಿಂಗ್ ಜೊತೆ ದೀಪಿಕಾ ಪಡುಕೋಣೆ ಫೋಟೋಗೆ ಪೋಸ್​ ಕೊಟ್ಟಿದ್ದಾರೆ. ಪ್ರೆಗ್ನೆನ್ಸಿಯ ಅಪೂರ್ವ ಫೋಟೋಗಳನ್ನು ದೀಪಿಕಾ ಪಡುಕೋಣೆ ತಮ್ಮ ಇನ್ಸ್ಟಾಗ್ರಾಮ್‌ನಲ್ಲಿ ಹಂಚಿಕೊಂಡಿದ್ದಾರೆ. ನಟಿ ಫೋಟೋಗಳಿಗೆ ಲೈಕ್ಸ್​ ಜೊತೆಗೆ ನಾನಾ ಕಮೆಂಟ್ ಗಳು ಕೂಡ ಹರಿದು ಬರ್ತಿದೆ.

ದೀಪಿಕಾ ಪಡುಕೋಣೆ ಹಾಗೂ ರಣವೀರ್ ಸಿಂಗ್ ತಮ್ಮ ಮಗುವಿಗಾಗಿ ಭಾರೀ ಕುತೂಹಲದಿಂದ ಕಾಯುತ್ತಿದ್ದಾರೆ. ನಟಿಗೆ ಸೆಪ್ಟೆಂಬರ್ 28ಕ್ಕೆ ಡೆಲಿವರಿ ಆಗಲಿದೆ ಎನ್ನಲಾಗಿದೆ. ಪಂಡಿತ್ ಜಗನ್ನಾಥ್ ಗುರೂಜಿ ಎಂಬ ಜ್ಯೋತಿಷಿ, ದೀಪಿಕಾಗೆ ಗಂಡು ಮಗುವಾಗಲಿದೆ ಎಂದು ಭವಿಷ್ಯ ನುಡಿದಿದ್ದಾರೆ. ಈ ಹಿಂದೆ, 2024ರಲ್ಲಿ ದೀಪಿಕಾ ಗರ್ಭಿಣಿಯಾಗಲಿದ್ದಾರೆ ಎಂದು ಕೂಡ ಅವರು ಭವಿಷ್ಯ ನುಡಿದಿದ್ದರು.

ಈ ಮಗು ತನ್ನ ಹೆತ್ತವರಿಗೆ ರಾಜಕುಮಾರನಾಗ್ತಾನೆ. ಆ ಮಗು ತನ್ನ ತಂದೆ ತಾಯಿ ಇಬ್ಬರಿಗೂ ಅದೃಷ್ಟವನ್ನು ತರಲಿದ್ದಾನೆ. ಆ ಮಗು ರಣಬೀರ್-ದೀಪಿಕಾ ಪಾಲಿಗೆ ಅದೃಷ್ಟದ ಮಗುವಾಗಲಿದೆ ಎಂದು ಜ್ಯೋತಿಷಿ ಹೇಳಿದ್ದಾರೆ. ಸದ್ಯ ದೀಪಿಕಾ ಪಡುಕೋಣೆ ಕೆಲಸದಿಂದ ಬ್ರೇಕ್ ತೆಗೆದುಕೊಂಡಿದ್ದಾರೆ.

Leave a Reply

Your email address will not be published. Required fields are marked *