Monday, 25th November 2024

Deepika-Ranveer: ಆ್ಯನಿವರ್ಸರಿ ದಿನ ದೀಪಿಕಾ ಪಡುಕೋಣೆ ಅನ್‌ಸೀನ್‌ ಫೋಟೊ ಹಂಚಿಕೊಂಡು ವಿಶ್‌ ಮಾಡಿದ ರಣ್‌ವೀರ್‌ ಸಿಂಗ್‌

Deepika-Ranveer

ಮುಂಬೈ: ಬಾಲಿವುಡ್‌ನ ಸ್ಟಾರ್‌ ಜೋಡಿ ದೀಪಿಕಾ ಪಡುಕೋಣೆ (Deepika Padukone) ಮತ್ತು ರಣ್‌ವೀರ್‌ ಸಿಂಗ್‌ (Ranveer Singh) ತಮ್ಮ 6ನೇ ವಿವಾಹ ವಾರ್ಷಿಕೋತ್ಸವವನ್ನು (Wedding anniversary) ಆಚರಿಸಿಕೊಂಡಿದ್ದಾರೆ.  2018ರಲ್ಲಿ ದಾಪಂತ್ಯ ಜೀವನಕ್ಕೆ ಕಾಲಿಟ್ಟ ಈ ಜೋಡಿ (Deepika-Ranveer) ಇತ್ತೀಚೆಗಷ್ಟೇ ಮುದ್ದಾದ ಹೆಣ್ಣು ಮಗುವಿನ ಪೋಷಕರಾಗಿದ್ದಾರೆ.

ಇನ್‌ಸ್ಟಾಗ್ರಾಂನಲ್ಲಿ ದೀಪ್‌ ವೀರ್‌ ಒಬ್ಬರಿಗೊಬ್ಬರು ಶುಭಾಶಯಗಳನ್ನು ಕೋರಿದ್ದಾರೆ. ವಿಶೇಷವಾಗಿ ರಣ್‌ವೀರ್‌ ಸಿಂಗ್‌ ತಮ್ಮ ಇನ್‌ಸ್ಟಾಗ್ರಾಂ ಖಾತೆಯಲ್ಲಿ ದೀಪಿಕಾರ ಅನ್‌ಸೀನ್‌ ಫೋಟೊಗಳನ್ನು ಶೇರ್‌ ಮಾಡಿದ್ದು, “Every day is Wife Appreciation Day, but today is the main day” ಎಂದು ಬರೆದುಕೊಂಡಿದ್ದಾರೆ.

ಈ ಪೋಸ್ಟ್‌ಗೆ ಪ್ರತಿಕ್ರಿಯಿಸಿರುವ ನಟಿ ಶಿಲ್ಪಾ ಶೆಟ್ಟಿ ವಿವಾಹ ವಾರ್ಷಿಕೋತ್ಸವಕ್ಕೆ ಶುಭ ಕೋರಿದ್ದಾರೆ. ಮತ್ತೊಂದೆಡೆ ದೀಪಿಕಾ ಕೂಡ ತಮ್ಮ ಇನ್‌ಸ್ಟಾಗ್ರಾಂ ಸ್ಟೋರಿಯಲ್ಲಿ ರಣ್‌ವೀರ್‌ಗೆ ಶುಭ ಕೋರಿದ್ದಾರೆ.

ದೀಪಿಕಾ ಪಡುಕೋಣೆ ಮತ್ತು ರಣವೀರ್ ಸಿಂಗ್  2012ರಲ್ಲಿ ʼಗೋಲಿಯೋನ್ ಕಿ ರಾಸ್‌ಲೀಲಾ ರಾಮಲೀಲಾʼ ಸೆಟ್‌ನಲ್ಲಿ ಇಬ್ಬರೂ ಪರಸ್ಪರ ಭೇಟಿಯಾಗಿದ್ದರು. ನಂತರ ಪರಿಚಯ ಪ್ರೀತಿಗೆ ತಿರುಗಿ 2015ರಲ್ಲಿ ಅವರು ರಹಸ್ಯವಾಗಿ ನಿಶ್ಚಿತಾರ್ಥ  ಮಾಡ್ಕೊಂಡಿದ್ದರು. ಇದಾದ 3 ವರ್ಷಗಳ ನಂತರ, 2018ರಲ್ಲಿ ಇಬ್ಬರೂ ಇಟಲಿಯಲ್ಲಿ ವಿವಾಹವಾಗಿದ್ದರು.

ಈ ವರ್ಷ ಸೆಪ್ಟೆಂಬರ್‌ನಲ್ಲಿ ದೀಪಿಕಾ ಮಗಳಿಗೆ ಜನ್ಮ ನೀಡಿದ್ದರು. ಈ ಜೋಡಿ ತಮ್ಮ ಮಗಳಿಗೆ ದುವಾ ಪಡುಕೋಣೆ ಸಿಂಗ್‌ ಎಂದು ಹೆಸರಿಟ್ಟಿದ್ದಾರೆ. ದುವಾ ಅಂದರೆ ಪ್ರಾರ್ಥನೆ. ಅವಳು ನಮ್ಮ ಪ್ರಾರ್ಥನೆಗೆ ಉತ್ತರವಾಗಿದ್ದಾಳೆ ಎಂದು ದೀಪಾವಳಿಯ ದಿನದಂದು ದೀಪಿಕಾ ಮಗಳ ಹೆಸರನ್ನು ರಿವೀಲ್‌ ಮಾಡಿದ್ದರು.

ರಣವೀರ್ ಹಾಗೂ ದೀಪಿಕಾ ವೃತ್ತಿ ಜೀವದಲ್ಲಿ ಬ್ಯುಸಿಯಿದ್ದಾರೆ. ಮಗುವಾದ ಮೇಲೆ ದೀಪಿಕಾ ಸಾರ್ವಜನಿಕವಾಗಿ ಕಾಣಿಸಿಕೊಂಡಿಲ್ಲ. ಹಾಗೆ ಮಗುವಿನ ಮುಖ ನೋಡುವ ಅವಕಾಶ ಅಭಿಮಾನಿಗಳಿಗೆ ಸಿಕ್ಕಿಲ್ಲ. ಕೆಲ ದಿನಗಳ ಹಿಂದೆ ಮಗುವಿನ ಕಾಲಿನ ಫೋಟೋವನ್ನು ಮಾತ್ರ ದೀಪಿಕಾ ಪೋಸ್ಟ್ ಮಾಡಿದ್ದರು. ಸದ್ಯ ಅಜಯ್‌ ದೇವಗನ್‌ ನಟನೆಯ ʼಸಿಂಗಂ ಅಗೇನ್‌ʼ ಬಿಡುಗಡೆಯಾಗಿದ್ದು ಈ ಜೋಡಿ ಅದರಲ್ಲಿ ಕಾಣಿಸಿಕೊಂಡಿದೆ.

ಇದನ್ನೂ ಓದಿ: Salman Khan : ಸಲ್ಮಾನ್‌ ಖಾನ್‌ ಜೊತೆ ಸಿಕಂದರ್‌ ಸಿನಿಮಾ ಲಿರಿಸಿಸ್ಟ್‌ಗೂ ಜೀವ ಬೆದರಿಕೆ; ಕರ್ನಾಟಕ ಮೂಲದ ಕಿಡಿಗೇಡಿ ಅರೆಸ್ಟ್‌