Thursday, 12th December 2024

Devara Box Office Collection: 3 ದಿನಗಳಲ್ಲಿ 250 ಕೋಟಿ ರೂ. ದಾಟಿದ ʼದೇವರʼ ಕಲೆಕ್ಷನ್‌; ಗೆಲುವಿನ ನಗೆ ಬೀರಿದ ಜೂನಿಯರ್‌ ಎನ್‌ಟಿಆರ್‌

Devara Box Office Collection

ಹೈದರಾಬಾದ್‌: ಈ ವರ್ಷದ ಬಹು ನಿರೀಕ್ಷಿತ, ಟಾಲಿವುಡ್‌ ಸ್ಟಾರ್‌ ಜೂನಿಯರ್‌ ಎನ್‌ಟಿಆರ್‌ (Jr NTR) ಅಭಿನಯದ ‘ದೇವರ: ಪಾರ್ಟ್ 1’ (Devara: Part 1) ಚಿತ್ರ ರಿಲೀಸ್‌ ಆಗಿದೆ. ಎಲ್ಲೆಡೆ ಸಿನಿಮಾ ಬಗ್ಗೆ ಸಾಧಾರಣ ವಿಮರ್ಶೆ ಕೇಳಿ ಬಂದಿದೆ. ಆದರೂ ಈ ಸಿನಿಮಾ ಇದೀಗ ಬಾಕ್ಸ್‌ ಆಫೀಸ್‌ನಲ್ಲಿ ಅಬ್ಬರಿಸುತ್ತಿದೆ. ಪ್ಯಾನ್‌ ಇಂಡಿಯಾ ಮಟ್ಟದಲ್ಲಿ ತೆರೆಕಂಡ ಈ ಸಿನಿಮಾಕ್ಕೆ ಮಾಸ್‌ ನಿರ್ದೇಶಕ ಕೊರಟಾಲ ಶಿವ ಆ್ಯಕ್ಷನ್‌ ಕಟ್‌ ಹೇಳಿದ್ದಾರೆ. ಸೆಪ್ಟೆಂಬರ್‌ 27ರಂದು ಬಿಡುಗಡೆಯಾದ ಈ ಚಿತ್ರ 3 ದಿನಗಳಲ್ಲಿ ಭಾರತವೊಂದರಲ್ಲೇ ಸುಮಾರು 161 ಕೋಟಿ ರೂ. ಗಳಿಸಿ ಜೂನಿಯರ್‌ ಎನ್‌ಟಿಆರ್‌ ಅವರ ಮತ್ತೊಂದು ಹಿಟ್‌ ಚಿತ್ರ ಎನಿಸಿಕೊಂಡಿದೆ. ಜಾಗತಿಕ ಬಾಕ್ಸ್‌ ಆಫೀಸ್‌ ಕಲೆಕ್ಷನ್‌ ಸುಮಾರು 275 ಕೋಟಿ ರೂ. (Devara Box Office Collection)

ಸೆಪ್ಟೆಂಬರ್‌ 27ರಂದು ʼದೇವರʼ ಚಿತ್ರ ಭಾರತದಲ್ಲಿ ಸುಮಾರು 82.5 ಕೋಟಿ ರೂ. ಗಳಿಸಿ ಮೊದಲ ದಿನ ಅತಿ ಹೆಚ್ಚುಗಳಿಸಿದ ಟಾಪ್‌ 10 ಸಿನಿಮಾಗಳ ಪೈಕಿ ಒಂದು ಎನಿಸಿಕೊಂಡಿತ್ತು. ವಿಶೇಷ ಎಂದರೆ ತೆಲುಗೊಂದರಿಂದಲೇ 73.25 ಕೋಟಿ ಹೂ. ಹರಿದು ಬಂದಿತ್ತು. ಕನ್ನಡ, ಹಿಂದಿ, ತಮಿಳು ಮತ್ತು ಮಲಯಾಳಂ ಅವತರಣಿಕೆಗಳಿಂದ ಸುಮಾರು 10 ಕೋಟಿ ರೂ. ಕಲೆಕ್ಷನ್‌ ಆಗಿತ್ತು.

ಎಲ್ಲೆಡೆ ಸಾಧಾರಣ ವಿಮೆರ್ಶೆ ಕೇಳಿ ಬಂದ ಹಿನ್ನಲೆಯಲ್ಲಿ 2ನೇ ದಿನ ಗಳಿಕೆ ಗಣನೀಯ ಪ್ರಮಾಣದಲ್ಲಿ ಕುಸಿತ ಕಂಡಿತ್ತು. ಶನಿವಾರದ ಕಲೆಕ್ಷನ್‌ 38.2 ಕೋಟಿ ರೂ. ಈ ಪೈಕಿ ತೆಲುಗು 27.55 ಕೋಟಿ ರೂ. ಕಲೆಕ್ಷನ್‌ ಮಾಡಿತ್ತು. ಹಿಂದಿಯಿಂದ 9 ಕೋಟಿ ರೂ. ಹರಿದುಬಂದಿತ್ತು.

ಚಿತ್ರ ತೆರೆಕಂಡ 3ನೇ ದಿನ ಭಾನುವಾರ ಗಳಿಕೆಯಲ್ಲಿ ತುಸು ಚೇತರಿಕೆ ಕಂಡು ಬಂದಿತ್ತು. ನಿನ್ನೆಯ ಒಟ್ಟು ಕಲೆಕ್ಷನ್‌ 40.3 ಕೋಟಿ ರೂ. ತೆಲುಗು ಮತ್ತು ಹಿಂದಿ ಅವತರಣಿಕೆ ಕ್ರಮವಾಗಿ 27.65 ಕೋಟಿ ರೂ. ಮತ್ತು 11 ಕೋಟಿ ರೂ. ಬಾಚಿಕೊಂಡಿತ್ತು.

ಈ ಮೂಲಕ ʼದೇವರ: ಪಾರ್ಟ್‌ 1ʼ ದೇಶದಲ್ಲಿ ಒಟ್ಟು 161 ಕೋಟಿ ರೂ. ಗಳಿಸಿದೆ. ಈ 3 ದಿನಗಳಲ್ಲಿ ಅತೀ ಹೆಚ್ಚು ಸಂಗ್ರಹವಾಗಿದ್ದು ತೆಲುಗಿನಿಂದ. ತೆಲುಗಿನ ಕೊಡುಗೆ 128.45 ಕೋಟಿ ರೂ. ಹಿಂದಿಯಿಂದ 27.5 ಕೋಟಿ ರೂ. ಸಂಗ್ರಹವಾಗಿದೆ. ಜೂನಿಯರ್‌ ಎನ್‌ಟಿಆರ್‌ ಅಭಿಮಾನಿಗಳು ಈ ಚಿತ್ರವನ್ನು ಕೊಂಡಾಡಿದ್ದಾರೆ. ಜೂನಿಯರ್‌ ಎನ್‌ಟಿಆರ್‌ ಅಭಿನಯ, ಆ್ಯಕ್ಷನ್‌ ದೃಶ್ಯಗಳಿಗೆ ಮನ ಸೋತಿದ್ದಾರೆ. ಇನ್ನುಳಿದಂತೆ ಚಿತ್ರಕಥೆ ಬಗ್ಗೆ ಕೆಲವರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಚಿತ್ರವನ್ನು ಎಳೆದಾಡಿದಂತೆ ಭಾಸವಾಗುತ್ತಿದೆ, ಕಥೆಯಲ್ಲಿ ಹೊಸತನವಿಲ್ಲ ಎಂದು ಹಲವರು ದೂರಿದ್ದಾರೆ.

ಮೊದಲ ಬಾರಿ ಟಾಲಿವುಡ್‌ಗೆ ಕಾಲಿಟ್ಟ ಬಾಲಿವುಡ್‌ ಬೆಡಗಿ ಜಾನ್ವಿ ಕಪೂರ್‌ಗೆ ಹೆಚ್ಚಿನ ಸ್ಕ್ರೀನ್‌ ಸ್ಪೇಸ್‌ ಸಿಕ್ಕಿಲ್ಲ, ಹಾಡು, ಗ್ಲಾಮರ್‌ ಮತ್ತು ಒಂದೆರಡು ದೃಶ್ಯಕ್ಕೆ ಸೀಮಿತರಾಗಿದ್ದಾರೆ ಎಂದು ಅವರ ಅಭಿಮಾನಿಗಳು ಬೇಸರ ವ್ಯಕ್ತಪಡಿಸಿದ್ದಾರೆ. ‘ದೇವರ’ ಚಿತ್ರದಲ್ಲಿ ಜಾನ್ವಿ ಕಪೂರ್‌, ಸೈಫ್‌ ಆಲಿ ಖಾನ್‌, ಚೈತ್ರಾ ರೈ ಮತ್ತಿತರರು ಮುಖ್ಯ ಪಾತ್ರಗಳಲ್ಲಿ ನಟಿಸಿಸದ್ದಾರೆ.

ಈ ಸುದ್ದಿಯನ್ನೂ ಓದಿ: Devara Box Office Collection: ಮೊದಲ ದಿನದ ಕಲೆಕ್ಷನ್‌ನಲ್ಲಿ ಶಾರುಖ್‌ ಖಾನ್‌ ಹಿಂದಿಕ್ಕಿದ ಜೂನಿಯರ್‌ ಎನ್‌ಟಿಆರ್‌; ʼದೇವರʼ ಗಳಿಸಿದ್ದೆಷ್ಟು?