ಬಿಗ್ ಬಾಸ್ ಕನ್ನಡ ಸೀಸನ್ 11 (Bigg Boss Kannada 11) ಶತಕದ ದಿನದತ್ತ ದಾಪುಗಾಲಿಡುತ್ತಿದ್ದು, ಫಿನಾಲೆಗೆ ಕೂಡ ಹತ್ತಿರವಾಗುತ್ತಿದೆ. ಈ ವಾರ ಮನೆಯಲ್ಲಿ ಬಿಗ್ ಬಾಸ್ ರೆಸಾರ್ಟ್ ಟಾಸ್ಕ್ ನೀಡಲಾಗಿತ್ತು. ಕ್ಯಾಪ್ಟನ್ ಭವ್ಯಾ ಅವರ ಮಾರ್ಗದರ್ಶನದಲ್ಲಿ ಒಂದು ತಂಡ ಮತ್ತು ಚೈತ್ರಾ ಕುಂದಾಪುರ ನೇತೃತ್ವದಲ್ಲಿ ಮತ್ತೊಂದು ತಂಡ ಭಾಗವಹಿಸಿತು. ಇದರಲ್ಲಿ ಉತ್ತಮ ಪ್ರದರ್ಶನ ನೀಡಿದ ಸದಸ್ಯರು ಕ್ಯಾಪ್ಟನ್ಸಿ ಟಾಸ್ಕ್ಗೆ ಅರ್ಹತೆ ಪಡೆದಿದ್ದಾರೆ. ಇದರ ಜೊತೆಗೆ ಮನೆಯಲ್ಲಿ ಈ ವಾರದ ಉತ್ತಮ-ಕಳಪೆ ಪ್ರಕ್ರಿಯೆ ನಡೆದಿದೆ.
ಈ ವಾರದ ಕಳಪೆ ಸಿಂಗರ್ ಹನುಮಂತ ಅವರಿಗೆ ನೀಡಲಾಗಿದೆ. ಮೋಕ್ಷಿತಾ ಪೈ, ರಜತ್ ಕಿಶನ್, ಗೌತಮಿ ಜಾಧವ್, ಉಗ್ರಂ ಮಂಜು, ಧನರಾಜ್ ಆಚಾರ್, ಚೈತ್ರಾ ಕುಂದಾಪುರ ಅವರುಗಳು ಹನುಮಂತು ಅವರ ಹೆಸರನ್ನು ವಾರದ ಕಳಪೆಗೆ ತೆಗೆದುಕೊಂಡಿದ್ದಾರೆ. ಅದರಲ್ಲೂ ಆತ್ಮೀಯ ಸ್ನೇಹಿತ ಧನರಾಜ್ ಆಚಾರ್ ಅವರೇ ಹನುಮಂತು ಅವರ ಹೆಸರು ತೆಗೆದುಕೊಂಡಿದ್ದು ಬಹುತೇಕರ ಆಶ್ಚರ್ಯಕ್ಕೆ ಕಾರಣವಾಗಿದೆ.
ಹನುಮಂತು ಹಾಗೂ ಧನರಾಜ್ ಬಿಗ್ ಬಾಸ್ನಲ್ಲಿ ಬೆಸ್ಟ್ ಫ್ರೆಂಡ್ ಎಂದು ಹೇಳಬಹುದು. ಹನುಮಂತ ವೈಲ್ಡ್ ಕಾರ್ಡ್ ಮೂಲಕ ಬಂದಾಗಿನಿಂದ ಇಬ್ಬರೂ ಜೊತೆಯಾಗಿಯೇ ಇದ್ದಾರೆ. ಆದರೆ, ಸದ್ಯ ಕಳಪೆ ವಿಚಾರಕ್ಕೆ ಇವರಿಬ್ಬರ ಮಧ್ಯೆ ಮನಸ್ತಾಪ ಮೂಡಿದಂತಿದೆ. ಕಳಪೆ ನೀಡುವಾಗ ಧನರಾಜ್ ಅವರು, ತುಂಬಾ ತಪ್ಪು ಅಂತಾ ಕಾಣಿಸಿದ್ದು ಹನುಮಂತು ಅವರು. ಈ ವಾರ ಹನುಮಂತು ಚೆನ್ನಾಗಿ ಆಡಲಿಲ್ಲ ಎಂದು ತಿಳಿಸಿದ್ದಾರೆ.
ಈ ಎಲ್ಲ ಕಾರಣವನ್ನು ಕೇಳಿದ ಹನುಮಂತ ಸೋಫಾದಿಂದ ಎದ್ದು ನಿಂತು, ಥ್ಯಾಂಕ್ಸ್, ಧನ್ಯವಾದಗಳು ಎಂದು ಹೇಳುತ್ತ.. ನೀವು ಕಳಪೆ ಕೊಟ್ಟಿದ್ದೀರಿ ಎಂದು ಕುಗ್ಗೋದು ಇಲ್ಲ, ಬಗ್ಗೋದಿಲ್ಲ ಎಂದು ಪ್ರತ್ಯುತ್ತರ ಕೊಟ್ಟಿದ್ದಾರೆ. ಇಷ್ಟು ದಿನ ಕುಚುಕು ಸ್ನೇಹಿತರಾಗಿದ್ದ ಈ ಇಬ್ಬರು ಸದ್ಯ ಬೇಸರಲ್ಲಿದ್ದಾರೆ. ಹೀಗಾಗಿ ಇನ್ಮುಂದೆ ಹನುಮಂತು-ಧನರಾಜ್ ಆಚಾರ್ ಶತ್ರುಗಳು ಆಗ್ತಾರಾ ಎಂಬ ಅನುಮಾನ ಮೂಡಿದೆ.
BBK 11: ಕ್ಯಾಪ್ಟನ್ಸಿ ಟಾಸ್ಕ್ನಲ್ಲಿ ಭವ್ಯಾ ಗೌಡ ಮೋಸದಾಟ: ಕ್ಯಾಮೆರದಲ್ಲಿ ಎಲ್ಲವೂ ಸೆರೆ