ಬಿಗ್ ಬಾಸ್ ಕನ್ನಡ ಸೀಸನ್ 11 (Bigg Boss Kannada 11) ಮಹತ್ವದ ಘಟ್ಟಕ್ಕೆ ಬಂದು ನಿಂತಿದೆ. ಟಾಸ್ಕ್ಗಳು ಕಠಿಣವಾಗುತ್ತಾ ಸಾಗುತ್ತಿದ್ದು, ಸಾಕಷ್ಟು ರೋಚಕತೆ ಸೃಷ್ಟಿಸಿದೆ. ಕಳೆದ ವಾರ ನೋ ಎಲಿಮಿನೇಷನ್ ವೀಕ್ ಆಗಿತ್ತು. ಹೀಗಾಗಿ ಈ ವಾರದ ಮಧ್ಯೆ ಶಾಕಿಂಗ್ ಎಲಿಮಿನೇಷನ್ ಇದೆಯೇ ಎಂಬುದು ನೋಡಬೇಕಿದೆ. ಇದರ ನಡುವೆ ಮನೆಯೊಳಗೆ ಸೀನಿಯರ್ ಸ್ಪರ್ಧಿಗಳು ಅತಿಥಿಯಾಗಿ ಬಂದರು. ಜೊತೆಗೆ ನಾಮಿನೇಷನ್ ಪ್ರಕ್ರಿಯೆ ಕೂಡ ನಡೆಯುತ್ತಿದೆ.
ನಿನ್ನೆ ಉಗ್ರಂ ಮಂಜು ಹಾಗೂ ಶಿಶಿರ್ ನಡುವೆ ನಾಮಿನೇಷನ್ ಪ್ರಕ್ರಿಯೆ ನಡೆಯುವಾಗ ಜಗಳ ಆಗಿತ್ತು. ಬಂದ ಅತಿಥಿಗಳ ಮುಂದೆಯೇ ಕಿತ್ತಾಡಿಕೊಂಡಿದ್ದರು. ಇದೀಗ ಧನರಾಜ್ ಆಚಾರ್ ಹಾಗೂ ರಜತ್ ಕಿಶನ್ ನಡುವೆ ಮತ್ತೊಂದು ದೊಡ್ಡ ಜಗಳ ನಡೆದಿದೆ. ಇದು ಮುಂದಿನ ಹಂತಕ್ಕೋಗಿ ಕೈ-ಕೈ ಮಿಲಾಯಿಸಿದ್ದಾರೆ.
ಧನರಾಜ್, ರಜತ್ ಅವರನ್ನು ನಾಮಿನೇಟ್ ಮಾಡಿದ್ದಾರೆ. ಇದೇ ವಿಚಾರಕ್ಕೆ ರಜತ್ ಧನರಾಜ್ ಜೊತೆಗೆ ಕೈ ಕೈ ಮಿಲಾಯಿಸಿದ್ದಾರೆ. ತನ್ನನ್ನು ನಾಮಿನೇಟ್ ಮಾಡಿದ್ದಕ್ಕೆ ಧನರಾಜ್ ವಿರುದ್ಧ ರೊಚ್ಚಿಗೆದ್ದ ರಜತ್, ಯಾವನೋ ನೀಡಿದ್ದ ಕಾರಣಕ್ಕೆ ನನ್ನನ್ನು ನಾಮಿನೇಟ್ ಮಾಡ್ತಾ ಇದ್ದಾನೆ ಗುಗ್ಗು ನನ್ನ ಮಗ. ನಾನು ಎಂಥ ತಲೆ ಕೆಟ್ಟ ನನ್ನ ಮಗ ಅಂತ ನಿನಗಿನ್ನೂ ಗೊತ್ತಿಲ್ಲ. ನನ್ನ ಹತ್ರ ಇವೆಲ್ಲಾ ಆಟಗಳನ್ನ ಆಡ್ಬೇಡ. ಅದಕ್ಕೆ ಕಣೋ ನಿನಗೆ ಮಗು ಅಂತ ಕರೆಯೋದು ಎಂದಿದ್ದಾರೆ.
ಇದಕ್ಕೆ ಕೌಂಟರ್ ಕೊಟ್ಟ ಧನರಾಜ್, ಅಂಕಲ್, ನಿಮ್ಮ ಲೆವೆಲ್ ನನಗೆ ಗೊತ್ತಾಗಿದೆ. ನಾನು ಆಟ ಆಡೋದಕ್ಕೆ ಬಂದಿರುವುದು ಇಲ್ಲಿಗೆ ಎಂದು ಹೇಳಿದ್ದಾರೆ. ನಂತರ ಇಬ್ಬರ ನಡುವಿನ ಗುದ್ದಾಟ ಕೈಕೈ ಮಿಲಾಯಿಸುವ ಹಂತಕ್ಕೆ ಹೋಗಿದೆ. ಮನೆಯವರು ಬಿಡಿಸಲು ಪ್ರಯತ್ನಿಸಿದರೂ, ಪರಸ್ಪರ ಕೈಮಾಡಲು ಇಬ್ಬರೂ ಮುಂದಾಗಿದ್ದಾರೆ. ಬಳಿಕ ಓಡಿ ಬಂದ ಮಂಜಣ್ಣ ಹಾಗೂ ಗೌತಮಿ ಗಲಾಟೆ ನಿಲ್ಲಿಸುವ ಪಯತ್ನ ಮಾಡಿದ್ದಾರೆ.