Saturday, 4th January 2025

BBK 11: ಧನರಾಜ್ ಇಡೀ ಕುಟುಂಬವನ್ನು ಮನೆಯೊಳಗೆ ಕಳುಹಿಸಿದ ಬಿಗ್ ಬಾಸ್: ಮಗಳನ್ನು ಕಂಡು ಎಮೋಷನಲ್

Dhanraj Achar Family BBK 11

ಬಿಗ್ ಬಾಸ್ ಕನ್ನಡ ಸಿಸನ್ 11 (Bigg Boss Kannada 11) ಇನ್ನು ಕೆಲವೇ ವಾರಗಳಲ್ಲಿ ಪೂರ್ಣಗೊಳ್ಳಲಿದೆ. ಸ್ಪರ್ಧಿಗಳ ಮಧ್ಯೆ ಕಾಂಪಿಟೇಷನ್ ಜೋರಾಗಿದೆ. ಸುಮಾರು 95 ದಿನಗಳ ಕಾಲ ಕುಟುಂಬವನ್ನು ಬಿಟ್ಟು ಬಿಗ್ ಬಾಸ್ ಮನೆಯಲ್ಲಿರುವ ಸ್ಪರ್ಧಿಗಳಿಗೆ ಕುಟುಂಬದವರನ್ನು ಭೇಟಿ ಮಾಡುವ ಅವಕಾಶ ಒದಗಿಸಲಾಗಿದೆ. ಈ ವಾರ ಫ್ಯಾಮಿಲಿ ವೀಕ್. ಸ್ಪರ್ಧಿಗಳ ಅಮ್ಮಂದಿರು, ಅಪ್ಪಂದಿರು ಮಡದಿ, ಮಕ್ಕಳು ಬಿಗ್ ಬಾಸ್​ಗೆ ಬಂದಿದ್ದಾರೆ.

ಬಿಗ್ ಬಾಸ್ ಮನೆಯಲ್ಲಿರುವ 9 ಸ್ಪರ್ಧಿಗಳ ಕುಟುಂಬದವರು ಆಗಮಿಸುತ್ತಿದ್ದಾರೆ. ಈಗಾಗಲೇ ಭವ್ಯಾ ಗೌಡ ಫ್ಯಾಮಿಲಿ, ತ್ರಿವಿಕ್ರಮ್ ಅವರ ತಾಯಿ, ರಜತ್ ಅವರ ಮಡದಿ ಮಕ್ಕಳು, ಉಗ್ರಂ ಮಂಜು ಅವರ ಕುಟುಂಬ, ಮೋಕ್ಷಿತಾ ಪೈ ಅವರ ಫ್ಯಾಮಿಲಿ ಹಾಗೂ ಗೌತಮಿ ಜಾಧವ್ ಅವರ ಗಂಡ ಬಿಗ್ ಬಾಸ್ ಮನೆಯೊಳಗೆ ಕಾಲಿಟ್ಟಿದ್ದಾರೆ.

ಇಂದು ಉಳಿದ ಸ್ಪರ್ಧಿಗಳ ಮನೆಯವರು ಬಿಗ್ ಬಾಸ್ ಒಳಗೆ ಕಾಲಿಡಲಿದ್ದಾರೆ. ಇದರಲ್ಲಿ ಮೊದಲಿಗರಾಗಿ ಧನರಾಚ್ ಆಚಾರ್ ಅವರ ಇಡೀ ಫ್ಯಾಮಿಲಿ ದೊಡ್ಮನೆಗೆ ಬಂದಿದೆ. ಜೊತೆಗೆ ಧನು ಅವರ ಮಗಳ ಆಗಮನ ಕೂಡ ಆಗಿದೆ. ಬಿಗ್​ ಬಾಸ್​ ಮನೆಯ ಮುಖ್ಯದ್ವಾರದ ಬಳಿ ಸರಿಸುಮಾರು 30 ಮಂದಿ ನಿಂತಿರೋ ದೃಶ್ಯದೊಂದಿಗೆ ಬಿಗ್​ ಬಾಸ್ ಪ್ರೋಮೋ ಅನಾವರಣಗೊಂಡಿದೆ. ಇದನ್ನು ಕಂಡು ಧನರಾಜ್​​​ ಅವರಿಗಾದ ಖುಷಿ ವರ್ಣನಾತೀತ. ಇಲ್ಲಿವರೆಗಿನ ಬಿಗ್ ಬಾಸ್ ಸರಣಿಯಲ್ಲಿ ಇಷ್ಟು ದೊಡ್ಡ ಫ್ಯಾಮಿಲಿ ಬಂದೇ ಇಲ್ಲ. ಆದರೆ, ಬಿಗ್ ಬಾಸ್ ಈ ಸಲ ಈ ಒಂದು ಚಾನ್ಸ್ ಮಾಡಿಕೊಟ್ಟಿದ್ದಾರೆ.

ದೊಡ್ಮನೆಯ ಗಾರ್ಡನ್ ಏರಿಯಾದಲ್ಲಿ ಧನರಾಜ್ ಫ್ಯಾಮಿಲಿಯ ಸದಸ್ಯರು ಹುಲಿ ಡ್ಯಾನ್ಸ್ ಮಾಡಿದ್ದಾರೆ. ಇದನ್ನ ನೋಡಿದ ಧನರಾಜ್ ಕೂಡ ಹುಲಿ ಡ್ಯಾನ್ಸ್ ಮಾಡಿದ್ದಾರೆ. ಈ ಒಂದು ಸಂತೋಷದಲ್ಲಿಯೇ ಪತ್ನಿ ಎಂಟ್ರಿ ಸಹ ಆಗುತ್ತದೆ. ಹಾಗೆ ಬಂದ ಪತ್ನಿ ಧನರಾಜ್‌ಗೆ ಅಷ್ಟೇ ಪ್ರೀತಿಯಿಂದ ಹೊಡೆದಿರೋದು ಇದೆ.

ಮನೆಯವರೊಂದಿಗಿನ ಹಾಸ್ಯ ಕ್ಷಣಗಳ ಬಳಿಕ ಟಿವಿಯಲ್ಲಿ ಧನರಾಜ್​ ಅವರ ಮಗಳನ್ನು ತೋರಿಸಲಾಗಿದೆ. ಎತ್ತಿಕೊಳ್ಳೋಕೆ ಬಿಡಿ ಬಿಗ್​ ಬಾಸ್​ ಎಂದು ಧನರಾಜ್​ ಕೇಳಿಕೊಂಡಿದ್ದಾರೆ. ಟಿವಿ ಮೇಲಿನ ಮಗಳ ಫೋಟೋಗೆ ಮುತ್ತಿಕ್ಕಿದ್ದಾರೆ. ನಂತರ ಧನರಾಜ್​ ಓಡಿ ಎಂದು ಬಿಗ್​ ಬಾಸ್​ ಸೂಚಿಸುತ್ತಿದ್ದಂತೆ, ಸ್ಪರ್ಧಿ ಮಗಳಿರುವ ಆ್ಯಕ್ಟಿವಿಟಿ ರೂಮ್​ಗೆ ಓಡೋಡಿ ಹೋಗಿದ್ದಾರೆ.

BBK 11: ಬಿಗ್ ಬಾಸ್ ಕನ್ನಡ ಸೀಸನ್ 11 ಫಿನಾಲೆಗೆ ದಿನಾಂಕ ಫಿಕ್ಸ್: ಯಾವಾಗ ನೋಡಿ