Thursday, 12th December 2024

BBK 11: ಕಷ್ಟ ಅನಿಸ್ತಿದೆ ಬಿಗ್ ಬಾಸ್: ಕನ್ಫೆಷನ್ ರೂಮ್​ಗೆ ಬಂದು ಗಳಗಳನೆ ಅತ್ತ ಧನರಾಜ್ ಆಚಾರ್

Dhanraj Acharya Crying

ಸೋಷಿಯನ್ ಮೀಡಿಯಾ ಸ್ಟಾರ್ ಧನರಾಜ್ ಆಚಾರ್ (Dhanraj Achar) ಬಿಗ್ ಬಾಸ್ ಕನ್ನಡ ಸೀಸನ್ 11ರ ಪ್ರಮುಖ ಸ್ಪರ್ಧಿಯಾಗಿದ್ದಾರೆ. ಹಾಸ್ಯದ ಮೂಲಕ ಸಾಮಾಜಿಕ ಕಳಕಳಿಯ ವೀಡಿಯೊ ಹಂಚಿಕೊಂಡು ಸಾಕಷ್ಟು ಪ್ರಸಿದ್ಧಿ ಪಡೆದ ಧನರಾಜ್ ಬಿಬಿಕೆ ಮನೆಯಲ್ಲಿ ಮೊದಲ ಎರಡು ದಿನ ಸೈಲೆಂಟ್ ಆಗಿದ್ದರು. ಬಳಿಕ ಬಿಗ್ ಬಾಸ್ ಅವರಿಗೆ ಹುರಿದುಂಬಿಸುವ ಪ್ರಯತ್ನ ಮಾಡಿದ್ದರು. ಆ ಬಳಿಕ ಕೊಂಚ ತಮಾಷೆಯ ಮಾತುಗಳನ್ನು ಆಡಿ ರಂಚಿಸಲು ಪ್ರಯತ್ನಿಸಿದರು. ಆದರೀಗ ನನಗೆ ಕಷ್ಟ ಅನಿಸುತ್ತಿದೆ ಎಂದು ಬಿಗ್ ಬಾಸ್ ಮುಂದೆ ಕಣ್ಣೀರಿಟ್ಟಿದ್ದಾರೆ ಧನರಾಜ್.

ಕಲರ್ಸ್ ಕನ್ನಡ ಹಂಚಿಕೊಂಡಿರುವ ಇಂದಿನ ಎಪಿಸೋಡ್​ನ ಪ್ರೊಮೋದಲ್ಲಿ ಧನರಾಜ್ ಅವರು ಬಿಗ್ ಬಾಸ್ ನೀಡುವ ಪತ್ರ ತೆಗೆದುಕೊಳ್ಳಲು ಕನ್ಫೆಷನ್ ರೂಮ್​ಗೆ ತೆರಳಿದಂತಿದೆ. ಆಗ ಇವರು ತಮ್ಮ ದುಃಖವನ್ನು ತೋರ್ಪಡಿಸಿದ್ದಾರೆ. ಆರಂಭದಲ್ಲಿ ಸೈಲೆಂಟ್ ಆಗಿ ಅಳುತ್ತಾ ಕೂತ ಧನರಾಜ್ ಬಳಿಕ ‘‘ನಾನು ಕಾನ್ಫಿಡೆನ್ಸ್ ಕಳೆದುಕೊಳ್ಳುತ್ತಿದ್ದೇನೆ. ಕಷ್ಟ ಅನಿಸ್ತಿದೆ ಬಿಗ್ ಬಾಸ್​, ಕ್ಷಮಿಸಿ ಬಿಗ್ ಬಾಸ್ ಕೊಟ್ಟಿರುವ ಟಾಸ್ಕ್ ಅನ್ನು ಸರಿಯಾಗಿ ಮಾಡಲು ಆಗಿಲ್ಲ’’ ಎಂದು ಅಳುತ್ತಾ ಹೇಳಿದ್ದಾರೆ.

ಜಗದೀಶ್ ಮೇಲೆ ರೊಚ್ಚಿಗೆದ್ದ ಧನರಾಜ್:

ಮೂರನೇ ದಿನ ಬಿಗ್ ಬಾಸ್ ನಾಮಿನೇಷನ್‌ನಿಂದ ಬಚಾವ್ ಆಗಲು ಒಂದು ಟಾಕ್ಸ್ ಕೊಟ್ಟಿದ್ದಾರೆ. ನಾಮಿನೇಟ್ ಆಗಿರದ ಧನರಾಜ್  ಆಚಾರ್ ಅವರು ಪಿಕ್ಚರ್ ಟಾಸ್ಕ್​ನ ರೆಫ್ರಿ ಆಗಿದ್ದಾರೆ. ಆಟದ ಮಧ್ಯೆ ಲಾಯರ್ ಜಗದೀಶ್ ಹಾಗೂ ಧನರಾಜ್ ನಡುವೆ ಜಗಳ ಆಗಿದೆ. ‘ನೀವು ರೆಫ್ರಿ ಆಗಲು ಫಿಟ್ ಇಲ್ಲ, ಕಾಮಿಡಿ ಪೀಸ್ ತರ ಆಡ್ತಾನೆ’ ಎಂದು ಜಗದೀಶ್ ಅವರು ಹೇಳಿದ್ದಾರೆ. ಇದರಿಂದ ರೊಚ್ಚಿಗೆದ್ದ ಧನರಾಜ್ ‘ಏಯ್, ಸುಮ್ನೆ ಕೋತ್ಕೊತಿಯಾ, ಇವನು ಯಾರು ಹೇಳೋಕೆ’ ಎಂದು ಸಿಟ್ಟಾಗಿದ್ದಾರೆ. ಇದೇ ವಿಚಾರಕ್ಕೆ ಧನರಾಜ್ ಬೇಸರ ಮಾಡಿಕೊಂಡಿದ್ದಾರೆ ಎಂದು ಸೋಷಿಯಲ್ ಮೀಡಿಯಾದಲ್ಲಿ ಕಮೆಂಟ್​ಗಳು ಬರುತ್ತಿವೆ.

BBK 11: ಕಾಮಿಡಿ ಪೀಸ್ ಎಂದಿದ್ದಕ್ಕೆ ಜಗದೀಶ್ ಮೇಲೆ ರೊಚ್ಚಿಗೆದ್ದ ಧನರಾಜ್ ಆಚಾರ್: ಇಂದಿನ ಎಪಿಸೋಡ್​ನಲ್ಲಿ ಏನಿರಲಿದೆ?

ಇನ್ನು ಮೊದಲ ವಾರ ಮನೆಯಿಂದ ಹೊರಹೋಗಲು 10 ಮಂದಿ ನಾಮಿನೇಟ್ ಆಗಿದ್ದಾರೆ. ಸ್ವರ್ಗದಲ್ಲಿರುವ ಜಗದೀಶ್, ಯಮುನ, ಉಗ್ರಂ ಮಂಜು, ಗೌತಮಿ, ಹಂಸ, ಭವ್ಯ, ನರಕದಲ್ಲಿರುವ ಶಿಶಿರ್, ಮೋಕ್ಷಿತಾ, ಮಾನಸ, ಚೈತ್ರಾ ಕುಂದಾಪುರ ನಾಮಿನೇಟ್ ಆಗಿದ್ದಾರೆ. ನಾಮಿನೇಷನ್​ನಿಂದ ಪಾರಾಗಲು ಬಿಗ್ ಬಾಸ್ ಇಂದು ಟಾಸ್ಕ್ ನೀಡಿದ್ದಾರೆ.