Thursday, 12th December 2024

Don 3 Movie: ಡಾನ್ 3 ಚಿತ್ರೀಕರಣಕ್ಕೆ ಮತ್ತೆ ವಿಘ್ನ; ಮುಂದಿನ ವರ್ಷಕ್ಕೆ ಮುಂದೂಡಿಕೆ

Don 3 Movie

ಫರ್ಹಾನ್ ಅಖ್ತರ್ (Farhan Akhtar) ನಿರ್ದೇಶನದ ರಣವೀರ್ ಸಿಂಗ್ (Ranveer Singh) ಮತ್ತು ಕಿಯಾರ ಅಡ್ವಾಣಿ (Kiara Advani) ಮುಖ್ಯ ಪಾತ್ರದಲ್ಲಿ ಕಾಣಿಸಿಕೊಂಡಿರುವ ಡಾನ್ 3 ಚಿತ್ರೀಕರಣವು (Don 3 Movie) ವಿಳಂಬವಾಗುತ್ತಿದ್ದು, ಇದು ಈಗ ಸಾಮಾಜಿಕ ಜಾಲತಾಣದಲ್ಲಿ ಚರ್ಚೆಯ ವಿಷಯವಾಗಿದೆ. ಬಹು ನಿರೀಕ್ಷಿತ ಡಾನ್ 3 ಚಿತ್ರೀಕರಣ 2023ರ ಆಗಸ್ಟ್‌ನಲ್ಲಿ ಪ್ರಾರಂಭಿಸಲು ಯೋಚಿಸಲಾಗಿತ್ತು. ಆದರೆ ಈಗ ಚಿತ್ರೀಕರಣವನ್ನು 2025ರ ಜನವರಿಗೆ ಮುಂದೂಡಲಾಗಿದೆ.

ನಟ ಫರ್ಹಾನ್ ಅಖ್ತರ್ ಅವರು ತಮ್ಮ ಮುಂಬರುವ ಚಿತ್ರ 1962ರ ಇಂಡೋ-ಚೀನಾ ಯುದ್ಧದ ಕಥೆಯನ್ನು ಹೊಂದಿರುವ ʼ120 ಬಹದ್ದೂರ್‌ʼ ಶೂಟಿಂಗ್‌ನಲ್ಲಿ ಬ್ಯುಸಿಯಾಗಿದ್ದು, ಇದರಿಂದಾಗಿ ಅವರಿಗೆ ಡಾನ್ 3 ಚಿತ್ರದ ಮೇಲೆ ಗಮನ ಹರಿಸಲು ಸಾಧ್ಯವಾಗುತ್ತಿಲ್ಲ. ಹೀಗಾಗಿ ಡಾನ್ 3 ಚಿತ್ರೀಕರಣವನ್ನು ಮತ್ತಷ್ಟು ಮುಂದೂಡಲಾಗಿದೆ.

ʼ120 ಬಹದ್ದೂರ್‌ʼನಲ್ಲಿ ಮೇಜರ್ ಶೈತಾನ್ ಸಿಂಗ್ ಪಿವಿಸಿ ಪಾತ್ರದಲ್ಲಿ ನಟಿಸಲು ಸಿದ್ಧರಾಗಿರುವ ಫರ್ಹಾನ್ ತಮ್ಮ ಫಸ್ಟ್ ಲುಕ್ ಅನ್ನು ಇನ್‌ಸ್ಟಾಗ್ರಾಮ್‌ನಲ್ಲಿ ಹಂಚಿಕೊಂಡಿದ್ದಾರೆ. ಈ ಮೂಲಕ ʼ120 ಬಹದ್ದೂರ್ʼ ಚಿತ್ರೀಕರಣ ಈಗಾಗಲೇ ಪ್ರಾರಂಭವಾಗಿದೆ ಎಂದು ಘೋಷಿಸಿದ್ದಾರೆ.

ಡಾನ್ 3 ಮೇಲೆ ಗಮನ ಕೇಂದ್ರೀಕರಿಸುವ ಮೊದಲು ʼ120 ಬಹದ್ದೂರ್‌ʼ ಚಿತ್ರವನ್ನು ಮುಗಿಸಲು ಫರ್ಹಾನ್ ನಿರ್ಧರಿಸಿದ್ದಾರೆ. ಮೊದಲಿನ ಚಿತ್ರೀಕರಣವು ಹಲವಾರು ತಿಂಗಳುಗಳನ್ನು ತೆಗೆದುಕೊಳ್ಳುವುದರಿಂದ, ಡಾನ್ 3 ವೇಳಾಪಟ್ಟಿಯನ್ನು ಸುಮಾರು ನಾಲ್ಕು ತಿಂಗಳು ಮುಂದೂಡಲಾಗಿದೆ.

ರಣವೀರ್ ಸಿಂಗ್ ಮತ್ತು ಕಿಯಾರಾ ಅಡ್ವಾಣಿ ಕೂಡ ಬೇರೆಬೇರೆ ಚಿತ್ರದ ಚಿತ್ರೀಕರಣದಲ್ಲಿ ಬ್ಯುಸಿಯಾಗಿದ್ದಾರೆ. ಪ್ರಸ್ತುತ ರಣವೀರ್ ಸಿಂಗ್ ಆದಿತ್ಯ ಧರ್ ಅವರ ಹೆಸರಿಡದ ಚಿತ್ರದಲ್ಲಿ ತೊಡಗಿಸಿಕೊಂಡಿದ್ದಾರೆ. ಇನ್ನು ಕಿಯಾರಾ ಅಡ್ವಾಣಿ ಅವರು ಹೃತಿಕ್ ರೋಷನ್ ಮತ್ತು ಜೂನಿಯರ್ ಎನ್‌ಟಿಆರ್ ಜೊತೆಗೆ ವಾರ್ 2 ಚಿತ್ರೀಕರಣದಲ್ಲಿ ತೊಡಗಿದ್ದಾರೆ. ಹೀಗಾಗಿ ಅವರಿಗೆ ತಮ್ಮ ಕೈಯಲ್ಲಿರುವ ಪ್ರಾಜೆಕ್ಟ್ ಅನ್ನು ಪೂರ್ಣಗೊಳಿಸಲು ಹೆಚ್ಚಿನ ಸಮಯ ಬೇಕಿರುವುದರಿಂದ ಡಾನ್ 3 ಚಿತ್ರೀಕರಣ ಪ್ರಾರಂಭಕ್ಕೆ ಹೆಚ್ಚಿನ ಸಮಯ ಬೇಕಾಗಲಿದೆ.

ಶಾರುಖ್ ಖಾನ್ ಅಭಿಮಾನಿಗಳ ಬೇಸರ

ʼಡಾನ್ʼ ಚಿತ್ರದ ಖ್ಯಾತಿ ಗಳಿಸಿರುವ ಶಾರುಖ್ ಖಾನ್ ಪಾತ್ರವನ್ನು ʼಡಾನ್ʼ ಚಿತ್ರದ ಮೂರನೇ ಸರಣಿಯಲ್ಲಿ ರಣವೀರ್ ಸಿಂಗ್ ನಿರ್ವಹಿಸಲಿದ್ದು, ಇದು ಶಾರುಖ್ ಖಾನ್ ಅವರ ಅಭಿಮಾನಿಗಳಲ್ಲಿ ಬೇಸರ ತರಿಸಿದೆ. ಇದು ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ಚರ್ಚೆಯ ವಿಷಯವಾಗುತ್ತಿದೆ. ಕೆಲವು ಅಭಿಮಾನಿಗಳು ಇದನ್ನು ಸ್ವಾಗತಿಸಿದ್ದರೆ ಇನ್ನು ಕೆಲವರು ಅಸಮಾಧಾನ ವ್ಯಕ್ತಪಡಿಸಿದರು. ಮಿಶ್ರ ಪ್ರತಿಕ್ರಿಯೆಗಳ ಹೊರತಾಗಿಯೂ ಡಾನ್ 3ಗಾಗಿ ನಿರೀಕ್ಷೆಯು ಹೆಚ್ಚಾಗಿದೆ.

ಈ ವರ್ಷದ ಆಗಸ್ಟ್‌ನಲ್ಲಿ ಡಾನ್ 3 ಚಿತ್ರವು ತೆರೆಗೆ ಬರಲಿದೆ ಎಂದು ಈ ಹಿಂದೆ ವರದಿಗಳು ತಿಳಿಸಿದ್ದವು. ಆದರೆ ಕೆಲವು ತಿಂಗಳ ಹಿಂದೆ 2025 ರ ಜನವರಿಯಲ್ಲಿ ಚಿತ್ರೀಕರಣ ಪ್ರಾರಂಭವಾಗಲಿದೆ ಎಂದು ಫರ್ಹಾನ್ ಹೇಳಿದ್ದರು.
ಅಲ್ಲದೇ ಫರ್ಹಾನ್ ಅವರು ತಮ್ಮದೇ ಆದ ನಿರ್ದೇಶನವನ್ನು ಪ್ರಾರಂಭಿಸುವ ಮೊದಲು 120 ಬಹದ್ದೂರ್ ಚಿತ್ರೀಕರಣ ಪೂರ್ಣಗೊಳಿಸಲು ನಿರ್ಧರಿಸಿದ್ದಾರೆ. ಹೀಗಾಗಿ ಡಾನ್ 3 ರ ಮೊದಲ ಶೆಡ್ಯೂಲ್ ಅನ್ನು ನಾಲ್ಕು ತಿಂಗಳು ಮುಂದೂಡಲು ಅವರು ನಿರ್ಧರಿಸಿದ್ದಾರೆ.

Alia Bhatt: ಮತ್ತೊಂದು ಪವರ್‌ಫುಲ್‌ ಪಾತ್ರದಲ್ಲಿ ಆಲಿಯಾ ಭಟ್‌; ʼಜಿಗ್ರಾʼ ಚಿತ್ರದ ಪೋಸ್ಟರ್‌ ಔಟ್‌

ʼಡಾನ್ 3ʼಗಾಗಿ ಫರ್ಹಾನ್ ಅವರು ಅಮೀರ್ ಖಾನ್ ನಿರ್ದೇಶನದ ಚಾಂಪಿಯನ್ಸ್‌ ಚಿತ್ರದ ಭಾಗವಾಗಲು ಹಿಂದೆ ಸರಿದಿದ್ದರು. 2023ರ ಅಕ್ಟೋಬರ್‌ನಲ್ಲಿ ಚಾಂಪಿಯನ್ ಚಿತ್ರೀಕರಣ ನಡೆಸಲು ನಿರ್ಧರಿಸಲಾಗಿತ್ತಾದರೂ ಅಂತಿಮವಾಗಿ ಅದನ್ನು 2024ರ ಜನವರಿಗೆ ಮುಂದೂಡಲಾಗಿತ್ತು.