ರಾಘವೇಂದ್ರ ರಾಜ್ಕುಮಾರ್, ಅಶ್ವಿನಿ ಪುನೀತ್ ರಾಜ್ಕುಮಾರ್, ಯುವ ರಾಜ್ಕುಮಾರ್ ಮತ ಹಾಕಿದರು.
“ಅಪ್ಪು ಇಲ್ಲದೇ ಮತದಾನ ಮಾಡಿದ ನೋವಿದೆ. ಮೊದಲು ಅಪ್ಪ ಅಮ್ಮನ ಜೊತೆಗೆ ವೋಟ್ಗೆ ಬರ್ತಿದ್ವಿ. ನಂತರ ನಾನು ಶಿವಣ್ಣ ಮತ್ತು ಅಪ್ಪು ಬರ್ತಿದ್ವಿ. ಆದರೆ ಮೊದಲ ಬಾರಿಗೆ ಅಪ್ಪು ಇಲ್ಲದೇ ಮತದಾನ ಮಾಡಲು ಬಂದಿದ್ದೇವೆ. ಬೇಜಾರಿದೆ. ನಾನು ಮತ ಚಲಾಯಿಸಿದ್ದೇನೆ. ನೀವೂ ಕೂಡ ವೋಟ್ ಮಾಡಿ” ಎಂದು ಕನ್ನಡ ಜನತೆಯಲ್ಲಿ ಮನವಿ ಮಾಡಿದರು.
ಯುವ ರಾಜ್ಕುಮಾರ್ ಮಾತನಾಡಿ, “ಅಪ್ಪು ಚಿಕ್ಕಪ್ಪನನ್ನು ಈ ದಿನ ಮಿಸ್ ಮಾಡಿ ಕೊಳ್ಳುತ್ತಿದ್ದೇನೆ. ನಾನು ಮತ ಚಲಾಯಿಸಿ ದ್ದೇನೆ. ಮತದಾನ ನಮ್ಮೆಲ್ಲರ ಕರ್ತವ್ಯ. ಎಲ್ಲರೂ ನಿಮ್ಮ ಅಮೂಲ್ಯವಾದ ಮತವನ್ನು ಚಲಾಯಿಸಿ” ಎಂದು ಹೇಳಿದರು.