Thursday, 26th December 2024

UI Movie: ಉಪ್ಪಿಯ ಯುಐ ಸಿನಿಮಾ ನೋಡಿ ಸ್ಯಾಂಡಲ್‌ವುಡ್ ಬಾದ್ ಷಾ ಹೇಳಿದ್ದೇನು…?

ಬೆಂಗಳೂರು: ಉಪೇಂದ್ರ(Upendra) ನಟನೆಯ ‘ಯುಐ’ ಸಿನಿಮಾ (UI Movie) ಇಂದು ಬಿಡುಗಡೆ ಆಗಿದೆ. ಸಿನಿಮಾದ ಬಿಡುಗಡೆಗೆ ಮುನ್ನ, ಖ್ಯಾತ ಬಾಲಿವುಡ್ ನಟ ಆಮಿರ್ ಖಾನ್ ಮತ್ತು ತೆಲುಗಿನ ಸ್ಟಾರ್ ನಟ ಅಕ್ಕಿನೇನಿ ನಾಗಾರ್ಜುನ ಅವರುಗಳು ಪ್ರಚಾರ ಮಾಡಿದ್ದರು. ಆಮಿರ್ ಖಾನ್ ಅಂತೂ ಸಿನಿಮಾದ ಟ್ರೈಲರ್ ಬಗ್ಗೆ ವಿಶೇಷ ವಿಡಿಯೋ ಮಾಡಿ ಹಾಕಿ, ಉಪೇಂದ್ರ ಅವರ ಪ್ರತಿಭೆಯನ್ನು ಕೊಂಡಾಡಿದ್ದರು. ನಾಗಾರ್ಜುನ ಸಹ ತಮ್ಮ ಬಿಗ್​ಬಾಸ್ ಶೋಗೆ ಉಪೇಂದ್ರ ಅವರನ್ನು ಅತಿಥಿಯಾಗಿ ಕರೆಸಿ ‘ಯುಐ’ ಸಿನಿಮಾದ ಪ್ರಚಾರ ಮಾಡಿಸಿದ್ದರು. ಇದೀಗ ಸ್ಯಾಂಡಲ್ ವುಡ್ ಬಾದ್ ಷಾ ಸುದೀಪ್ (Kichcha Sudeep) ಯುಐ ಸಿನೆಮಾ ವೀಕ್ಷಿಸಿದ್ದು, ರಿಯಲ್ ಸ್ಟಾರ್ ನೀರ್ದೇಶನದ ಕುರಿತು ಮೆಚ್ಚುಗೆ ಮಾತುಗಳಾನ್ನಾಡಿದ್ದಾರೆ.

ಹೌದು 10 ವರ್ಷಗಳ ಬಳಿಕ ನಟ ಉಪೇಂದ್ರ ಡೈರೆಕ್ಟರ್ ಕ್ಯಾಪ್​ ತೊಟ್ಟು UI ಸಿನಿಮಾ ಮಾಡಿದ್ದಾರೆ. ಸಿನಿಮಾವನ್ನ ತೆರೆ ಮೇಲೆ ನೋಡಿದ ಅಭಿಮಾನಿಗಳು ಕೂಡ ಮೆಚ್ಚಿಕೊಂಡಿದ್ದಾರೆ. ಇದೀಗ ಕಿಚ್ಚ ಸುದೀಪ್ ಕೂಡ UI ಸಿನಿಮಾ ನೋಡಿ, ಉಪ್ಪಿಗೆ ಸಾಥ್ ಕೊಟ್ಟಿದ್ದು, ಯುಐ ಸಿನಿಮಾವನ್ನು ನೋಡಿದೆ. ಇದು ಉಪೇಂದ್ರ ಸರ್ ಅಂತವರು ಮಾತ್ರ ಬರೆಯಬಲ್ಲ ಕಥೆಯಾಗಿದ್ದು, ಅವರ ಊಹೆಗೆ ಮಾತ್ರ ನಿಲುಕುವಂತಹ ಕಥೆ ಇದಾಗಿದೆ. ಅವರ ಚಿಂತನಾ ವಿಧಾನ ಹೇಗೆ ಕೆಲಸ ಮಾಡುತ್ತದೆಯೋ ಅದು ಅದ್ಭುತವಾಗಿದ್ದು, ಇಡೀ ತಂಡಕ್ಕೆ ನನ್ನ ಶುಭಾಶಯಗಳು ಹಾಗೂ ಆಲ್‌ ದಿ ಬೆಸ್ಟ್‌.. ಲವ್ & ಹಗ್ಸ್‌..’ ಎಂದು ಎಕ್ಸ್ ನಲ್ಲಿ ಪೋಸ್ಟ್ ಮಾಡಿದ್ದಾರೆ.

ಇನ್ನು ರಜನೀಕಾಂತ್ ಅವರು ಉಪೇಂದ್ರ ಅವರಿಗಾಗಿ ಒಂದು ಹೆಜ್ಜೆ ಮುಂದಿಟ್ಟು ಬಂದಿದ್ದು, ಚೆನ್ನೈನಲ್ಲಿ ಡಿಸೆಂಬರ್ 21 ರಂದು ‘ಯುಐ’ ಸಿನಿಮಾದ ತಮಿಳು ಆವೃತ್ತಿಯನ್ನು ನೋಡಿದ್ದಾರೆ. ಆ ಮೂಲಕ ಉಪೇಂದ್ರ ಅವರಿಗೆ ಬೆಂಬಲ ನೀಡಿದ್ದು, ರಜನೀಕಾಂತ್ ಅವರು ತಮಿಳಿನ ಸ್ಟಾರ್ ನಟರ ಸಿನಿಮಾಗಳಿಗೆ ಪ್ರಚಾರ ಮಾಡುವುದು, ಬೆಂಬಲ ನೀಡುವುದು ಬಹಳ ಕಡಿಮೆ. ಆದರೆ ಇದೀಗ ಉಪೇಂದ್ರ ಅವರಿಗಾಗಿ ಚಿತ್ರಮಂದಿರಕ್ಕೆ ಬಂದು ಸಿನಿಮಾ ನೋಡಿದ್ದಾರೆ ತಮಿಳಿನ ತಲೈವಾ.

ಉಪೇಂದ್ರ ಅವರು ತಮಿಳಿನ ಸಿನಿಮಾ ‘ಕೂಲಿ’ಯಲ್ಲಿ ನಟಿಸುತ್ತಿದ್ದು, ಆ ಸಿನಿಮಾದ ನಾಯಕ ರಜನೀಕಾಂತ್, ಅದೇ ಸಿನಿಮಾದಲ್ಲಿ ಬಾಲಿವುಡ್ ನಟ ಆಮಿರ್ ಖಾನ್, ತೆಲುಗಿನ ನಟ ನಾಗಾರ್ಜುನ ಅವರುಗಳು ಸಹ ನಟಿಸುತ್ತಿದ್ದಾರೆ. ಈ ಸಿನಿಮಾದಲ್ಲಿ ಉಪೇಂದ್ರ ಅವರಿಗೆ ವಿಶೇಷ ಪಾತ್ರವಿದೆ. ಇದೇ ಕಾರಣಕ್ಕೆ ನಟರಾದ ರಜನೀಕಾಂತ್, ಆಮಿರ್ ಖಾನ್ ಮತ್ತು ನಾಗಾರ್ಜುನ ಅರುಗಳು ‘ಕೂಲಿ’ ಸಿನಿಮಾದ ತಮ್ಮ ಸಹನಟ ಉಪೇಂದ್ರ ಅವರ ಹೊಸ ಸಿನಿಮಾಕ್ಕೆ ಬೆಂಬಲ ಸೂಚಿಸಿದ್ದಾರೆ.

ಉಪೇಂದ್ರ ನಟಿಸಿ ನಿರ್ದೇಶಿಸಿರುವ ಯುಐ ಸಿನಿಮಾವನ್ನು ಲಹರಿ ಫಿಲಂಸ್‌ನ ಜಿ ಮನೋಹರ್ ನಾಯ್ಡು ಮತ್ತು ವೀನಸ್ ಎಂಟರ್‌ಟೈನರ್ಸ್‌ನ ಕೆಪಿ ಶ್ರೀಕಾಂತ್ ಸಿನಿಮಾ ನಿರ್ಮಿಸಿದ್ದಾರೆ. ಅಜನೀಶ್ ಲೋಕನಾಥ್ ಸಂಗೀತ ನೀಡಿರುವ ಈ ಚಿತ್ರದಲ್ಲಿ ರೀಷ್ಮಾ ನಾಣಯ್ಯ ನಾಯಕಿಯಾಗಿ ನಟಿಸಿದ್ದಾರೆ. ರವಿಶಂಕರ್ ಮತ್ತು ಸಾಧು ಕೋಕಿಲಾ ಪೋಷಕ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ.

ಈ ಸುದ್ದಿಯನ್ನೂ ಓದಿ: Mika Singh: ಅನಂತ್ ಅಂಬಾನಿ ವಿರುದ್ಧ ಮಿಕಾ ಸಿಂಗ್ ಅಸಮಾಧಾನ! ಕಾರಣವೇನು ಗೊತ್ತೆ?