Thursday, 21st November 2024

BBK 11: ಪತ್ರ ಓದಿ ಅಭಿ ಐ ಲವ್ ಯೂ ಟು.. ಎಂದ ಗೌತಮಿ ಜಾಧವ್

Gauthami Jadav Emotional

ಬಿಗ್ ಬಾಸ್ ಕನ್ನಡ ಸೀಸನ್ 11 (Bigg Boss Kannada 11) ಶುರುವಾಗಿ ಐದು ವಾರಗಳಾಗಿದ್ದು, ಇದೀಗ ರೋಚಕತೆ ಪಡೆಯುತ್ತಿದೆ. ಇಷ್ಟು ದಿನ ಕೊಂಚ ಸಡಿಲವಾಗಿದ್ದ ಟಾಸ್ಕ್​ಗಳು ಈಗ ಕಠಿಣವಾಗುತ್ತಾ ಸಾಗಿದೆ. ಸ್ಪರ್ಧಿಗಳು ಕೂಡ ಓಪನ್-ಅಪ್ ಆಗಿದ್ದಾರೆ. ಈವರೆಗೆ ಸೈಲೆಂಟ್ ಆಗಿದ್ದ ಮೋಕ್ಷಿತಾ ಪೈ, ಗೌತಮಿ ಜಾಧವ್ ಸದ್ದು ಮಾಡಲು ಪ್ರಾರಂಭಿಸಿದ್ದಾರೆ. ಅತ್ತ ವೈಲ್ಡ್ ಕಾರ್ಡ್ ಸ್ಪರ್ಧಿ ಹನುಮಂತ ಕೂಡ ತಮ್ಮದೇ ಶೈಲಿಯಲ್ಲಿ ಟಾಂಗ್ ಕೊಡುತ್ತಿದ್ದಾರೆ.

ಇದರ ನಡುವೆ ಬಿಗ್ ಬಾಸ್ ಸ್ಪರ್ಧಿಗಳಿಗೆ ಮನೆಯವರಿಂದ ಬಂದ ಪತ್ರ ಓದಲು ಒಂದು ಅವಕಾಶ ನೀಡಿದ್ದಾರೆ. ಹಾಗಂತ ಈ ಪತ್ರ ಅಷ್ಟೊಂದು ಸುಲಭದಲ್ಲಿ ಸಿಗುವುದಿಲ್ಲ. ಇದಕ್ಕಾಗಿ ಒಂದು ಟಾಸ್ಕ್ ಕೂಡ ನೀಡಿದ್ದಾರೆ. ಟಾಸ್ಕ್ ಏನೆಂದರೆ ಮನೆಯೊಳಗೆ ಮುಸುಕು ಹಾಕಿಕೊಂಡು ಕೆಲ ಅಪರಿಚಿತರು ಬರುತ್ತಾರೆ. ಅವರು ಸ್ಪರ್ಧಿಗಳ ಏಕಾಗ್ರತೆಯನ್ನು ಹಾಳು ಮಾಡಲು ಪ್ರಯತ್ನಿಸುತ್ತಾರೆ. ಆದರೆ, ಸ್ಪರ್ಧಿಗಳು ಮನೆಗೆ ಸಂಬಂಧಿಸಿದ ಏನೇ ಹೊಸದನ್ನು ಕಂಡರೂ, ಯಾವುದಕ್ಕೂ ಪ್ರತಿಕ್ರಿಯೆ ನೀಡಬಾರದು. ಈ ಗೇಮ್‌ನಲ್ಲಿ ಫೌಲ್ ಆಗದೇ ಇದ್ದರೆ, ಸ್ಪರ್ಧಿಗಳು ತಮ್ಮ ಮನೆಯವರಿಂದ ಬಂದ ಲೆಟರ್ ಕೊಡುಲಾಗುತ್ತದೆ. ಫೌಲ್ ಆದ ಸ್ಪರ್ಧಿಗೆ ಆ ಲೆಟರ್ ಸಿಗುವುದಿಲ್ಲ.

ಈ ಟಾಸ್ಕ್​ನಲ್ಲಿ ಪಾಸ್ ಆದ ಗೌತಮಿ ಜಾಧವ್ ಅವರಿಗೆ ಅವರ ಪತಿ ಅಭಿಷೇಕ್ ಕಾಸರಗೋಡು ಬರೆದಿರುವ ಪತ್ರ ಸಿಕ್ಕಿದೆ. ಇದನ್ನು ಓದಿ ಗೌತಮಿ ಭಾವುಕರಾಗಿದ್ದಾರೆ. ಅಭಿ ಐ ಲವ್ ಯೂ ಟು.. ಎಂದು ಗೌತಮಿ ಹೇಳಿದ್ದಾರೆ. ಹಾಗೆಯೆ ಅನುಷಾ ರೈಗೆ ಮನೆಯಿಂದ ಬಂದ ಸಂದೇಶ ಸಿಕ್ಕಿದೆ. ಮಗಳೇ, ನಿನ್ನನ್ನು ಎಲ್ಲರೂ ಮಿಸ್ ಮಾಡಿಕೊಳ್ಳುತ್ತಿದ್ದೇವೆ ಎಂಬ ಸಂದೇಶ ಅನುಷಾ ರೈಗೆ ಬಂದಿದೆ. ಅದನ್ನು ಓದಿದ ಕೂಡಲೇ ಬಿಕ್ಕಿ ಬಿಕ್ಕಿ ಅತ್ತಿದ್ದಾರೆ.

ಧನರಾಜ್ ಫೌಲ್:

ಈ ಗೇಮ್​ನಲ್ಲಿ ಧನರಾಜ್ ಆಚಾರ್ ಫೌಲ್ ಆಗಿದ್ದಾರೆ. ಅವರಿಗೆ ಮನೆಯಿಂದ ಬಂದ ಪತ್ರ ಓದಲು ಸಾಧ್ಯವಾಗಿಲಿಲ್ಲ. ಅಪರಿಚಿತರು ಅವರ ಏಕಾಗ್ರತೆಗೆ ಭಂಗ ತರಬೇಕು ಎಂದು ಮಗುವಿನ ಗೊಂಬೆಯನ್ನೆಲ್ಲಾ ತೋರಿಸಿದ್ದಾರೆ. ಆಗ ಧನರಾಜ್ ಭಾವುಕರಾದಂತೆ ಕಂಡಿದೆ. ಇದರಿಂದ ತಪ್ಪಿಸಿಕೊಳ್ಳಬೇಕೆಂದು ಬಾತ್‌ರೂಮ್‌ಗೆ ಹೋಗಿ ಬಚ್ಚಿಟ್ಟುಕೊಂಡಿದ್ದಾರೆ. ಆದರೆ, ನಿಯಮದ ಪ್ರಕಾರ ಆ ರೀತಿ ಮಾಡುವಂತಿಲ್ಲ ಹೀಗಾಗಿ ಬಿಗ್ ಬಾಸ್ ಅವರನ್ನು ಫೌಲ್ ಎಂದು ಘೋಷಣೆ ಮಾಡಿದರು. ಇದು ಗೊತ್ತಾಗುತ್ತಿದ್ದಂತೆಯೇ, ಧನರಾಜ್‌ ಬಿಕ್ಕಿ ಬಿಕ್ಕಿ ಅತ್ತಿದ್ದಾರೆ. ನನಗೆ ಯಾವುದೇ ಸಂದೇಶ ಬರುವುದಿಲ್ಲ ಎಂದು ಕಣ್ಣೀರಿಟ್ಟಿದ್ದಾರೆ.

BBK 11: ಬಿಗ್ ಬಾಸ್ ಮನೆಗೆ ಬಂದ ಅಪರಿಚಿತರು: ಬಿಕ್ಕಿಬಿಕ್ಕಿ ಅತ್ತ ಧನರಾಜ್ ಆಚಾರ್