ಬಿಗ್ ಬಾಸ್ ಕನ್ನಡ ಸೀಸನ್ 11 (Bigg Boss Kannada 11) ಏಳನೇ ವಾರಕ್ಕೆ ಕಾಲಿಟ್ಟಿದೆ. ಈ ವಾರ ಬಿಗ್ ಬಾಸ್ ಮನೆಮಂದಿಗೆ ಜೋಡಿ ಟಾಸ್ಕ್ ನೀಡಿದ್ದು, ಸಾಖಷ್ಟು ಮನೋರಂಜನಾತ್ಮಕವಾಗಿದೆ. ಇದರ ನಡುವೆ ಮನೆಯ ನಾಮಿನೇಷನ್ ನಿಯಮದಲ್ಲಿ ಕೆಲವ ಬದಲಾವಣೆ ಮಾಡಿದ್ದಾರೆ. ಹೀಗಾಗಿ ನಾಮಿನೇಷನ್ ಬಿಸಿ ಎಲ್ಲ ಸ್ಪರ್ಧಿಗಳಿಗೆ ತಟ್ಟಿದೆ. ಜೊತೆಗೆ ನಾಮಿನೇಷನ್ ಬಗ್ಗೆ ತ್ರಿವಿಕ್ರಮ್ ಹಾಗೂ ಉಗ್ರಂ ಮಂಜು ಮಾಡಿಕೊಂಡ ಒಪ್ಪಂದಕ್ಕೆ ಬಿಗ್ ಬಾಸ್ ಬ್ರೇಕ್ ಹಾಕಿದ್ದಾರೆ. ಇದರ ನಡುವೆ ಗೋಲ್ಡ್ ಸುರೇಶ್ ತಾಳ್ಮೆ ಕಳೆದುಕೊಂಡ ಘಟನೆ ನಡೆದಿದೆ.
ಬಿಗ್ ಬಾಸ್ ಮನೆಯಲ್ಲಿ ಕಳೆದ ಎರಡು ವಾರದಿಂದ ಹೆಚ್ಚಿನ ವಿಚಾರಕ್ಕೆ ಗೋಲ್ಡ್ ಸುರೇಶ್ ಹೆಸರು ಕೇಳಿ ಬರುತ್ತದೆ. ನಾಮಿನೇಷನ್, ಕಳಪೆ ಹೀಗೆ ಹೆಚ್ಚಿನ ವಿಚಯದಲ್ಲಿ ಮನೆಮಂದಿ ಸಾಮೂಹಿಕವಾಗಿ ಸುರೇಶ್ ಹೆಸರು ಹೇಳಿಬಿಡುತ್ತಾರೆ. ಇದು ಈ ವಾರದ ನಾಮಿನೇಷನ್ ಪ್ರಕ್ರಿಯೆ ವೇಳೆಯೂ ನಡೆದಿದೆ. ಸಾಮಾನ್ಯವಾಗಿ ತಾಳ್ಮೆಯಿಂದಲೇ ಇರುವ ಸುರೇಶ್ ಇದೀಗ ಈ ವಿಚಾರಕ್ಕೆ ಸಿಟ್ಟು ನೆತ್ತಿಗೇರಿಸಿಕೊಂಡಿದ್ದಾರೆ. ಮನೆ ಮಂದಿ ವಿರುದ್ಧ ಬೆಂಕಿ ಉಗುಳಿದ್ದಾರೆ.
ಒಡೆದು ಹೋಯ್ತಾ ಗೋಲ್ಡ್ ಸುರೇಶ್ ತಾಳ್ಮೆಯ ಕಟ್ಟೆ? ಎಂಬ ಕ್ಯಾಪ್ಷನ್ನೊಂದಿಗೆ ಬಿಗ್ ಬಾಸ್ ಪ್ರೋಮೋ ಬಿಟ್ಟಿದ್ದಾರೆ. ಇದರಲ್ಲಿ ಗೋಲ್ಡ್ ಸುರೇಶ್ ಅವರ ತಾಳ್ಮೆಯ ಕಟ್ಟೆ ಒಡೆದಂತೆ ತೋರುತ್ತಿದೆ.
ಗೋಲ್ಡ್ ಸುರೇಶ್ ಹೇಳಿರುವುದೇನು?:
ಮೋಕ್ಷಿತಾ ಅವರಿಗೆ ಹೇಳೋದೇನಂದ್ರೆ, ಮಾತು, ಮಾತು, ಮಾತು. ನನ್ನ ಮಾತುಗಳಿಗೆ ಕಳೆದ ವಾರ ಕ್ಷಮೆ ಕೇಳಿದ್ದೇನೆ. ಅದಾಗ್ಯೂ, ಅದೊಂದೇ ರೀಸನ್ ಕೊಡುತ್ತಾ ಬಂದಿದ್ದೀರಿ. ಅದನ್ನು ಬಿಟ್ರೆ ನಿಮ್ಮ ಹತ್ರ ಬೇರೆ ಕಾರಣಗಳೇ ಇಲ್ಲ. ಮನೆಯ ಇನ್ವಾಲ್ಮೆಂಟ್ ವಿಷಯಕ್ಕೆ ಬರುತ್ತೀರ (ಭವ್ಯಾ – ಮಂಜು ಜೋಡಿಯನ್ನುದ್ದೇಶಿಸಿ ಮಾತನಾಡಿರುವುದು). ಕಸ ಹೊಡೆಯುವುದರಿಂದ ಹಿಡಿದು, ಅಡುಗೆ ಮನೆ ಕೆಲಸದಲ್ಲಿ ತೊಡಗಿಸಿಕೊಂಡಿದ್ದೇನೆ. ಒಬ್ಬೊಬ್ಬರತ್ರನೂ ಕುಳಿತು ಕಷ್ಟ ಸುಖ ಹಂಚಿಕೊಂಡಿದ್ದೇನೆ. ಚೈತ್ರಾ ಕೂಡಾ ಕಾರಣಗಳನ್ನು ಬಹಳ ಚೆನ್ನಾಗಿ ತೆಗೆದುಕೊಳ್ತಾರೆ. ಒಮ್ಮೆ ನಿಮ್ಮ ದನಿ ಕಿರಿಕಿರಿ ಆಗುತ್ತೆ ಎಂದು ಹೇಳಿದ್ದೇನೆ. ಅದಕ್ಕೆ ಸೂಕ್ತ ಸ್ಪಷ್ಟನೆಯನ್ನೂ ಕೊಟ್ಟಿದ್ದೇನೆ. ಆದ್ರೆ ಅದನ್ನೇ ವೈಯಕ್ತಿಕವಾಗಿ ತೆಗೆದುಕೊಳ್ತೀರ. ಎಲ್ಲರ ಬಾಯಲ್ಲೂ ಸುರೇಶ್, ಸುರೇಶ್, ಸುರೇಶ್. ನಾಮಿನೇಷನ್ಗೆ ನನ್ನೊಬ್ಬನ್ನದ್ದೇ ಹೆಸರು. ನೇರ ನಾಮಿನೇಷನ್ಗೆ ಕೂಡ ಸುರೇಶ್, ನಾಮಿನೇಷನ್ಗೆ ಕೂಡ ಸುರೇಶ್ ಹೆಸರು.
ಒಟ್ಟಾರೆ ಬಿಗ್ ಬಾಸ್ ಮನೆಯಲ್ಲಿ ನಾಮಿನೇಷನ್ ಕಿಚ್ಚು ಹಚ್ಚಿದೆ. ಇದು ಎಲ್ಲ ಸ್ಪರ್ಧಿಗಳಿಗೆ ನಾಟಿದೆ. ಬಿಗ್ ಬಾಸ್ ಮನೆಯಲ್ಲಿ ಸ್ಪರ್ಧಿಗಳು ಎಲಿಮಿನೇಷನ್ಗಾಗಿ ನಡೆಸುವ ನಾಮಿನೇಷನ್ ಬಗ್ಗೆ ಪರಸ್ಪರ ಚರ್ಚೆ ನಡೆಸುವಂತಿಲ್ಲ ಎಂಬ ನಿಯಮವಿದೆ. ಆದರೆ ಈ ಬಾರಿ ನಿಮಯ ಉಲ್ಲಂಘನೆಯಾಗಿದೆ. ಪ್ರಮುಖ ರೂಲ್ ಬ್ರೇಕ್ ಮಾಡಿದ್ದಕ್ಕಾಗಿ ಕ್ಯಾಪ್ಟನ್ ತ್ರಿವಿಕ್ರಮ್ ಅವರ ನೇರ ನಾಮಿನೇಷನ್- ಒಬ್ಬರನ್ನು ಸೇವ್ ಮಾಡುವ ಅಧಿಕಾರವನ್ನು ಬಿಗ್ ಬಾಸ್ ಕಸಿದುಕೊಂಡಿದ್ದಾರೆ.
BBK 11: ಬಿಗ್ ಬಾಸ್ನಿಂದ ಹೊರ ಹೋಗಲು ನಿರ್ಧಾರ ಮಾಡಿದ್ರಾ ಧರ್ಮಾ ಕೀರ್ತಿರಾಜ್?