Thursday, 19th December 2024

BBK 11: ಇನ್​ಸ್ಟಾ ಲೈವ್ ಬಂದು ಎಲ್ಲ ಮಾಹಿತಿ ಬಿಚ್ಚಿಟ್ಟ ಗೋಲ್ಡ್ ಸುರೇಶ್: ಹೊರಹೋಗಿದ್ದು ಯಾಕೆ ಗೊತ್ತೇ?

Gold Suresh Insta Live

ಬಿಗ್ ಬಾಸ್ ಕನ್ನಡ ಸೀಸನ್ 11 ರಲ್ಲಿ (Bigg Boss Kannada 111) ಕಳೆದ ಭಾನುವಾರ ಅನಿರೀಕ್ಷಿತ ಘಟನೆಗಳು ನಡೆದವು. ಶಾಕಿಂಗ್ ಎಂಬಂತೆ ಫೈನಲ್ ಸ್ಪರ್ಧಿ ಎಂದುಕೊಂಡಿದ್ದ ಶಿಶಿರ್ ಶಾಸ್ತ್ರೀ ಎಲಿಮಿನೇಟ್ ಆಗಿ ಹೊರಬಂದರು. ಇದರ ಬೆನ್ನಲ್ಲೇ ಮತ್ತೊಂದು ಆಘಾತಕಾರಿ ಘಟನೆ ನಡೆಯಿತು. ಗೋಲ್ಡ್ ಸುರೇಶ್ ದೊಡ್ಮನೆ ತೊರೆದರು. ವೈಯಕ್ತಿಕ ಕಾರಣಗಳಿಂದ ಸುರೇಶ್ ಅವರು ಬಿಗ್ ಬಾಸ್ ಅನ್ನು ಅರ್ಧಕ್ಕೆ ಕೈಬಿಟ್ಟು ಹೊರಬಂದರು.

ಗೋಲ್ಡ್ ಸುರೇಶ್ ಅವರಿಗೆ ಮನೆಯಿಂದ ಒಂದು ತುರ್ತು ಮೆಸೇಜ್ ಬಂದ ಕಾರಣದಿಂದ ಅವರು ಬಿಗ್ ಬಾಸ್​ನಿಂದ ಹೊರಬಂದಿದ್ದಾರೆ. ಗೋಲ್ಡ್ ಸುರೇಶ್​ ಕುಟುಂಬದಲ್ಲಿ ತುರ್ತು ಪರಿಸ್ಥಿತಿ ಉಂಟಾಗಿದೆ. ಹಾಗಾಗಿ ಅವರ ಅವಶ್ಯಕತೆ ಬಿಗ್ ಬಾಸ್​ ಮನೆಯಿಂದ ಅವರ ಕುಟುಂಬದವರಿಗೆ ಜಾಸ್ತಿ ಇದೆ. ಹೆಚ್ಚು ತಡ ಮಾಡದೇ ವಸ್ತುಗಳನ್ನು ಪ್ಯಾಕ್​ ಮಾಡಿಕೊಂಡು ಕೂಡಲೇ ಬಿಗ್ ಬಾಸ್​ ಮನೆಯಿಂದ ಹೊರಗೆ ಬನ್ನಿ ಎಂದು ಬಿಗ್‌ ಬಾಸ್‌ ಸುರೇಶ್​ಗೆ ಸೂಚನೆ ನೀಡಿದರು.

ಇದನ್ನು ಕೇಳಿ ಗೋಲ್ಡ್ ಸುರೇಶ್ ಅವರು ಏನಾಗಿರಬಹುದು ಎಂದು ಕಣ್ಣೀರು ಹಾಕಿದರು. ದೊಡ್ಡ ತೊಂದರೆ ಆಗಿರಬಹುದೇ ಎಂದು ಊಹಿಸಿ ಅವರಿಗೆ ಅಳು ಬಂತು. ಆ ಬಳಿಕ ಚಿನ್ನ ಹಾಕಿಕೊಂಡೇ ದೊಡ್ಮನೆಯಿಂದ ಹೊರಟರು. ಆದರೆ, ಬಿಗ್ ಬಾಸ್​ನಿಂದ ಹೊರಬಂದು ಮೂರು ದಿನವಾದರೂ ಇವರು ಯಾರ ಕೈಗೂ ಸಿಕ್ಕಿರಲಿಲ್ಲ. ದೊಡ್ಮನೆಯಿಂದ ದಿಢೀರ್ ಹೊರಬರಲು ಏನು ಕಾರಣ ಎಂಬುದು ನಿಗೂಢವಾಗಿಯೇ ಉಳಿದಿತ್ತು.

ಆದರೀಗ ಕಲರ್ಸ್ ಕನ್ನಡದ ಇನ್​ಸ್ಟಾಗ್ರಾಮ್ ಪೇಜ್​ನಲ್ಲಿ ಗೋಲ್ಡ್ ಸುರೇಶ್ ಅವರು ಲೈವ್ ಬಂದು ಎಲ್ಲ ವಿಚಾರ ಹಂಚಿಕೊಂಡಿದ್ದಾರೆ. ತಾನು ಬಿಗ್ ಬಾಸ್​ನಿಂದ ಹೊರಬರಲು ಏನು ಕಾರಣ ಎಂಬುದನ್ನು ಬಹಿರಂಗ ಪಡಿಸಿದ್ದಾರೆ. ‘‘ನನಗೆ ನನ್ನದೆಯಾದ ಅನೇಕ ಬ್ಯುಸಿನೆಸ್‌‌​ ಇವೆ. ಬಿಗ್ ​ಬಾಸ್​ಗೆ ಬರುವುದಕ್ಕೂ ಮೊದಲು ಅದರಲ್ಲಿ ಬ್ಯುಸಿಯಿದ್ದೆ. ನನ್ನನ್ನು ನಂಬಿ ಹಲವು ಕುಟುಂಬಗಳು ಇವೆ. ಬಿಗ್ ​ಬಾಸ್​​ಗೆ ಹೋದರೆ ಬ್ಯುಸಿನೆಸ್‌‌​ ಯಾರು ನೋಡಿಕೊಳ್ತಾರೆ ಎಂದು ಚಿಂತಿಸಿದ್ದೆ. ತುಂಬಾ ಯೋಚಿಸಿದ ನಂತರ ಮೊದಲ ಬಾರಿಗೆ ನನ್ನ ಧರ್ಮ ಪತ್ನಿಗೆ ಆ ಜವಾಬ್ದಾರಿ ನೀಡಿದ್ದೆ. ಅವರಿಗೆ ಬ್ಯುಸಿನೆಸ್‌‌ನ ಹ್ಯಾಂಡಲ್‌ ಮಾಡೋಕೆ ಆಗಿಲ್ಲ. ವರ್ಕ್‌‌ ಪ್ರೆಷರ್‌ ಅವರಿಗೆ ಜಾಸ್ತಿ ಆಯ್ತು. ಬ್ಯುಸಿನೆಸ್‌‌​​ನಲ್ಲಿ ಆಕೆಗೆ ಯಾವುದೇ ಅನುಭವ ಇರಲಿಲ್ಲ. ನಾನು ಎಲ್ಲವನ್ನೂ ಒಟ್ಟಿಗೆ ಬಿಟ್ಟು ಹೋಗಿದ್ದರಿಂದ ಅವೆಲ್ಲವನ್ನೂ ನಿಭಾಯಿಸೋದು ಆಕೆಗೆ ಕಷ್ಟವಾಗಿದೆ. ಆ ಸಮಯದಲ್ಲಿ ಅವರಿಗೆ ಹೀಗೆ ಅನ್ನಿಸೋದು ಸಹಜ. ಹೀಗಾಗಿ ನನ್ನ ಪತ್ನಿಗೆ ನಾನು ಹೊರಗಡೆ ಬಂದು ಆ ಗೊಂದಲಗಳಿಗೆ ಸಪೋರ್ಟ್‌ ಮಾಡಬೇಕಿತ್ತು. ಈಗ ಯಾವುದೇ ತೊಂದರೆಗಳಿಲ್ಲ. ಬ್ಯುಸಿನೆಸ್‌‌ ಕಂಟ್ರೋಲ್‌ ಬಂದಿದೆ’’ ಎಂದು ಹೇಳಿದ್ದಾರೆ.

BBK 11: ಬಿಗ್ ಬಾಸ್​ನಿಂದ ಹೊರಬಂದು ಚೈತ್ರಾ ಬಗ್ಗೆ ಶಾಕಿಂಗ್ ಸ್ಟೇಟ್ಮೆಂಟ್ ಕೊಟ್ಟ ಶಿಶಿರ್