Thursday, 12th December 2024

ನಟಿ ಪ್ರಣಿತಾ ಸುಭಾಷ್’ಗೆ ಗೋಲ್ಡನ್ ವೀಸಾ

ಬೆಂಗಳೂರು: ಯುಎಇಯಿಂದ ದಕ್ಷಿಣ ಭಾರತದ ನಟಿ ಪ್ರಣಿತಾ ಸುಭಾಷ್ ಗೋಲ್ಡನ್ ವೀಸಾ ಸ್ವೀಕರಿಸಿದ್ದಾರೆ.

ಬಹುಭಾಷಾ ನಟಿ ಪ್ರಣೀತಾ ಟ್ಟಿಟ್ಟರ್ ನಲ್ಲಿ, ಯುನೈಟೆಡ್ ಅರಬ್ ಎಮಿರೇಟ್ಸ್’ನಿಂದ ಗೋಲ್ಡನ್ ವೀಸಾ ಸ್ವೀಕರಿಸುತ್ತಿರುವುದು ಗೌರವದ ವಿಷಯವಾಗಿದೆ ಎಂದು ಬರೆದು ಪೋಸ್ಟ್ ಮಾಡಿದ್ದಾರೆ.

ಯುಎಇ ಗೋಲ್ಡನ್ ವೀಸಾದಿಂದ ಅರಬ್ ನಲ್ಲಿ ಬೇರೆ ರಾಷ್ಟ್ರದ ಪ್ರಜೆಗಳು ಜೀವನ ನಡೆಸುವ, ಕೆಲಸ ಮಾಡುವ ಮತ್ತು ಓದುವ ಅವ ಕಾಶಗಳು ಇರುತ್ತೆ. ಆ ಗೌರವವನ್ನು ಕನ್ನಡದ ನಟಿ ಪ್ರಣಿತಾ ಪಡೆದಿರುವುದು ಕನ್ನಡಿಗರಿಗೆ ಹೆಮ್ಮೆಯ ವಿಷಯವಾಗಿದೆ.