ಬಿಗ್ ಬಾಸ್ ಕನ್ನಡ ಸೀಸನ್ 11 (Bigg Boss Kannada 11) ಸಾಕಷ್ಟು ರೋಚಕತೆ ಸೃಷ್ಟಿಸುತ್ತಿದೆ. ಟಾಸ್ಕ್ ಕಠಿಣವಾಗುತ್ತಾ ಸಾಗಿದ್ದು, ಉಳಿವಿಗಾಗಿ ಎಲ್ಲ ಸ್ಪರ್ಧಿಗಳು ಮೈಚಳಿ ಬಿಟ್ಟು ಆಡಲು ಶುರುಮಾಡಿಕೊಂಡಿದ್ದಾರೆ. ಇಂತಹ ಮಹತ್ವದ ಘಟ್ಟದಲ್ಲಿ ಸಿಕ್ಕ ಅವಕಾಶವನ್ನು ಯಾರೂ ಕಳೆದುಕೊಳ್ಳವಾರದು. ಆದರೆ, ಮೋಕ್ಷಿತಾ ಪೈ ಕ್ಯಾಪ್ಟನ್ಸಿ ವಿಚಾರದಲ್ಲಿ ಭಾರೀ ಮುಜುಗರ ಎದುರಿಸಿದ್ದಾರೆ. ಜನರು ಆದೇಶವನ್ನು ಬದಿಗೊತ್ತಿದ್ದು ಮಾತ್ರವಲ್ಲದೆ ತನಗೆ ಸಿಕ್ಕ ಅದ್ಭುತ ಅವಕಾಶವನ್ನು ಕೈಚೆಲ್ಲಿ ಭಾರೀ ಮುಖಭಂಗ ಅನುಭವಿಸಿದ್ದಾರೆ.
ಕ್ಯಾಪ್ಟನ್ಸಿ ಟಾಸ್ಕ್ ನಾನು ಆಡಲ್ಲ ಎಂದ ಮೋಕ್ಷಿತಾ:
ಈ ವಾರ ಬಿಗ್ ಬಾಸ್ ಮನೆ ಎರಡು ಟಿವಿ ವಾಹಿನಿಯಾಗಿ ಪರಿವರ್ತನೆಯಾಯಿತು. ಎಂಎಂ ಟಿವಿಯಲ್ಲಿ ಧನರಾಜ್, ಹನುಮಂತ, ಶಿಶಿರ್, ರಜತ್, ಮೋಕ್ಷಿತಾ, ಚೈತ್ರಾ ಇದ್ದರೆ, ಡಿಡಿ ಟಿವಿಯಲ್ಲಿ ಐಶ್ವರ್ಯಾ, ಸುರೇಶ್, ತ್ರಿವಿಕ್ರಮ್, ಭವ್ಯ, ಗೌತಮಿ ಮಂಜಣ್ಣ ಇದ್ದರು. ಈ ಟಾಸ್ಕ್ನಲ್ಲಿ ಎಂಎಂ ಟಿವಿ (ಮಸ್ತ್ ಮಜಾ ಟಿವಿ) ಗೆಲುವು ಸಾಧಿಸಿ, ತಂಡದ ಸದಸ್ಯರು ಕ್ಯಾಪ್ಟನ್ಸಿ ರೇಸ್ಗೆ ಎಂಟ್ರಿ ಕೊಟ್ಟರು. ಆದರೆ, ಕ್ಯಾಪ್ಟನ್ಸಿ ಓಟದಲ್ಲಿರುವ ಸ್ಪರ್ಧಿಗಳು ಮನೆಯ ಉಳಿದ ಸ್ಪರ್ಧಿಗಳನ್ನ ತಮ್ಮ ಸಹಾಯಕರಾಗಿ ಆಡುವಂತೆ ಮನವೊಲಿಸಬೇಕು ಎಂಬ ಆದೇಶ ಬಿಗ್ ಬಾಸ್ ಕಡೆಯಿಂದ ಬರುತ್ತದೆ.
ಹೀಗಾಗಿ ಎಂಎಂಟಿವಿಯ ಎಲ್ಲರೂ ಅವರವರ ಸಹಾಯಕರನ್ನ ಆಯ್ಕೆ ಮಾಡಿಕೊಳ್ಳುತ್ತಾರೆ. ಆದರೆ, ಕೊನೆಗೆ ಸೋತ ತಂಡದಲ್ಲಿದ್ದ ಗೌತಮಿ ಮಾತ್ರ ಉಳಿಯುತ್ತಾರೆ. ಅತ್ತ ಕ್ಯಾಪ್ಟನ್ಸಿ ಟಾಸ್ಕ್ ಆಡುವ ಸದಸ್ಯರಲ್ಲಿ ಮೋಕ್ಷಿತಾ ಪೈ ಮಾತ್ರ ಉಳಿದುಕೊಂಡಿದ್ದಾರೆ. ಮೋಕ್ಷಿತಾ-ಗೌತಮಿ ಜಗಳ ಎಲ್ಲರಿಗೂ ಗೊತ್ತು. ಹೀಗಾಗಿ ಮೋಕ್ಷಿತಾ ನಾನು ಗೌತಮಿ ಬಳಿ ಹೋಗಿ ಕೇಳಲ್ಲ ಅಂತ ಹಠ ಹಿಡಿದಿದ್ದಾರೆ.
ಮೋಕ್ಷಿತಾ ಅವರ ಈ ನಿರ್ಧಾರ ಕೇಳಿ ಬಿಗ್ ಬಾಸ್, ದೊಡ್ಡ ನಿರ್ಧಾರ ತೆಗೆದುಕೊಂಡರೆ ಅದಕ್ಕೆ ದೊಡ್ಡ ಬೆಲೆನೂ ಕಟ್ಟಬೇಕಾಗುತ್ತದೆ ಎಂದು ಹೇಳಿದ್ದಾರೆ. ಈ ಮೂಲಕ ಮೋಕ್ಷಿತಾ ಕ್ಯಾಪ್ಟನ್ಸಿ ಟಾಸ್ಕ್ನಿಂದ ಔಟ್ ಆಗಿದ್ದಾರೆ. ಆದರೆ, ಇಲ್ಲಿ ಅದೃಷ್ಟ ಒಲಿದಿದ್ದು ಗೌತಮಿ ಜಾಧವ್ಗೆ. ಮೋಕ್ಷಿತಾ ಬದಲಾಗಿ ಎದುರಾಳಿ ತಂಡದಿಂದ ಓರ್ವ ಸದಸ್ಯ ಕ್ಯಾಪ್ಟನ್ಸಿ ಟಾಸ್ಕ್ ಆಡಲು ಆಯ್ಕೆ ಮಾಡಬೇಕು ಎಂದು ಬಿಗ್ ಬಾಸ್ ಹೇಳಿದರು.
ಆಗ ಎಲ್ಲರೂ ಗೌತಮಿ ಅವರನ್ನು ಕ್ಯಾಪ್ಟನ್ಸಿ ಟಾಸ್ಕ್ಗೆ ಆಯ್ಕೆಯಾಗಲು ಸೆಲೆಕ್ಟ್ ಮಾಡಿದರು. ಇವರಿಗೆ ಸಹಾಯಕರಾಗಿ ಧನರಾಜ್ ಆಚಾರ್ ಬಂದರು. ಇದರಲ್ಲಿ ಗೌತಮಿ ಹಾಗೂ ಶಿಶಿರ್ ಗೆದ್ದು ಕ್ಯಾಪ್ಟನ್ಸಿ ಟಾಸ್ಕ್ಗೆ ಅರ್ಹತೆ ಪಡೆದುಕೊಂಡಿದ್ದಾರೆ. ಕ್ಯಾಪ್ಟನ್ಸಿ ಟಾಸ್ಕ್ನಲ್ಲಿ ಗೌತಮಿ ಜಾಧವ್ ಗೆದ್ದು ಬೀಗಿದ್ದಾರೆ. ಮನೆಯ ಕ್ಯಾಪ್ಟನ್ ಕ್ವೀನ್ ಆಗಿ ಕ್ಯಾಪ್ಟನ್ ರೂಮ್ಗೂ ಎಂಟ್ರಿ ಕೊಟ್ಟಿದ್ದಾರೆ. ಹನ್ನೊಂದನೆ ವಾರದ ಮನೆಯ ಕ್ಯಾಪ್ಟನ್ ಆಗಿ ಆಯ್ಕೆ ಆಗಿದ್ದಾರೆ.
BBK 11: ಎರಡಂಕಿ ತಲುಪಿದ ಬಿಗ್ ಬಾಸ್ ಟಿಆರ್ಪಿ: ರಜತ್ಗೆ ಕ್ಲಾಸ್ ತೆಗೆದುಕೊಂಡ ಕಿಚ್ಚನ ಎಪಿಸೋಡ್ಗೆ ಪ್ರಶಂಸೆ