ಬಿಗ್ ಬಾಸ್ ಕನ್ನಡ ಸೀಸನ್ 11 (Bigg Boss Kannada 11) ಮಹತ್ವದ ಘಟ್ಟಕ್ಕೆ ತಲುಪಿದ್ದು, ಗ್ರ್ಯಾಂಡ್ ಫಿನಾಲೆಗೆ ಇನ್ನೇರು ಎರಡೂವರೆ ವಾರಗಳಷ್ಟೆ ಬಾಕಿ ಉಳಿದಿದೆ. ಇದರ ಮಧ್ಯೆ ಈ ವಾರಾಂತ್ಯದಲ್ಲಿ ದೊಡ್ಡ ಟ್ವಿಸ್ಟ್ ಹೊರಬೀಳಲಿದೆ. ಅದೇನೆಂದರೆ ಫೈನಲ್ಗೆ ಅರ್ಹತೆ ಪಡೆಯುವ ಓರ್ವ ಸ್ಪರ್ಧಿ ಯಾರೆಂದು ಈ ವಾರದ ಅಂತ್ಯದಲ್ಲಿ ತಿಳಿದುಬರಲಿದೆ. ಇದಕ್ಕಾಗಿ ಟಾಸ್ಕ್ಗಳು ನಡೆಯುತ್ತಿದ್ದು, ಸ್ಪರ್ಧಿಗಳು ಮೈ-ಚಳಿ ಬಿಟ್ಟು ಆಡುತ್ತಿದ್ದಾರೆ.
ಹೌದು, ಈ ವಾರ ನಡೆಯುತ್ತಿರುವ ಗೇಮ್ಗಳಲ್ಲಿ ಗೆದ್ದ ಒರ್ವ ಸ್ಪರ್ಧಿಗೆ ಟಿಕೆಟ್ ಟು ಫಿನಾಲೆ ಪಾಸ್ ಸಿಗುತ್ತದೆ. ಟಿಕೆಟ್ ಟು ಫಿನಾಲೆ ಪಾಸ್ ಅಂದರೆ ಗ್ರ್ಯಾಂಡ್ ಫಿನಾಲೆಗೆ ನೇರವಾಗಿ ಸೆಲೆಕ್ಟ್ ಆಗುತ್ತಾರೆ. ಹೀಗಾಗಿ ಸದ್ಯ ಬಿಗ್ ಬಾಸ್ನಲ್ಲಿ ಅಸಲಿ ಆಟ ಶುರುವಾಗಿದೆ. ಇಷ್ಟು ದಿನ ಇದ್ದ ಕಂಫರ್ಟ್ ಝೋನ್, ಫ್ರೆಂಡ್ಶಿಪ್ ಎಲ್ಲವೂ ಕೊಚ್ಚಿ ಹೋಗಿದೆ. ಜೊತೆಗೆ ಮೋಸದಾಟ ಕೂಡ ನಡೆದಿದೆಯಾ ಎಂಬ ಅನುಮಾನ ಶುರುವಾಗಿದೆ.
ಫಿನಾಲೆ ಟಿಕೆಟ್ ಆಟದಲ್ಲಿ ಮನೆಯ ಸದಸ್ಯರಿಗೆ ಬಿಗ್ ಬಾಸ್ ಹೊಸ ಟಾಸ್ಕ್ ಕೊಟ್ಟಿದ್ದಾರೆ. ಜೋಡಿ ಸದಸ್ಯರು ತಮ್ಮ ಹಿಂಬದಿಯ ಸಹಾಯದಿಂದ ಬಲೂನ್ ಹೊಡೆದು ಬಕೆಟ್‌ಗೆ ನೀರು ತುಂಬಿಸಬೇಕು. ಈ ಆಟದಲ್ಲಿ ಸ್ಪರ್ಧಿಗಳು ಯಾವುದೇ ಕಾರಣಕ್ಕೂ ಬಲೂನ್‌ಗಳನ್ನ ಕೈಯಲ್ಲಿ ಮುಟ್ಟುವಂತಿಲ್ಲ. ಈ ಟಾಸ್ಕ್‌ಗೆ ನಾಲ್ಕು ಜೋಡಿಗಳನ್ನಾಗಿ ಮಾಡಲಾಗಿದೆ. ತ್ರಿವಿಕ್ರಮ್-ಹನುಮಂತ, ಗೌತಮಿ-ಮಂಜು, ಮೋಕ್ಷಿತಾ-ಭವ್ಯಾ ಹಾಗೂ ಚೈತ್ರಾ-ಧನರಾಜ್.
ಬಿಗ್ ಬಾಸ್ ಕೊಟ್ಟ ಈ ಟಾಸ್ಕ್‌ನಲ್ಲಿ ಹನುಮಂತ ಕೈ ಟಚ್ ಆಗಿ ಬಲೂನ್ ಬಿದ್ದಿದೆ ಎಂದು ಚೈತ್ರಾ, ಧನರಾಜ್ ಆರೋಪ ಮಾಡಿದ್ದಾರೆ. ವಾಗ್ವಾದ ಜೋರಾಗಿದ್ದು ಮನೆಯ ಕ್ಯಾಪ್ಟನ್ ರಜತ್ ಥೂ ತೆರಿಕೆ ಬಡಿದುಕೊಳ್ಳಬೇಡಿ ಬಾಯಿ ಅಂತ ರಾಂಗ್ ಆಗಿದ್ದಾರೆ. ಇದೇ ವೇಳೆ ಮಂಜು ಹಾಗೂ ರಜತ್ ಮಧ್ಯೆ ಕೂಡ ಜಗಳ ನಡೆದಿದೆ. ನೀವು ಹೆಂಗೆ ಬೇಕಾದ್ರೂ ರೂಲ್ಸ್ ಚೇಂಜ್ ಮಾಡಿಕೊಳ್ತೀರಾ ವಾವ್ಹ್ ಎಂದಿದ್ದಾರೆ. ಮಂಜು ಮಾತಿಗೆ ಕೆರಳಿದ ರಜತ್, ನಾನು ಮಾತನಾಡೋಕೆ ಸ್ಟಾರ್ಟ್ ಮಾಡಿದ್ರೆ ನಾನು ಖರಾಬ್ ಆಗಿ ಮಾತನಾಡುತ್ತೇವೆ ಎಂದು ರೈಸ್ ಆಗಿದ್ದಾರೆ.