14ನೇ ವಾರ ಸಾಗುತ್ತಿರುವ ಬಿಗ್ ಬಾಸ್ ಕನ್ನಡ ಸೀಸನ್ 11 ರಲ್ಲಿ (Bigg Boss Kannada 11) ಸದ್ಯ ಫ್ಯಾಮಿಲಿ ವೀಕ್ ನಡೆಯುತ್ತಿದೆ. ಈ ವಾರ ಮನೆಯಲ್ಲಿರುವ ಒಂಬತ್ತು ಸದಸ್ಯರ ಕುಟುಂಬದವರು ದೊಡ್ಮನೆಯೊಳಗೆ ಬಂದಿದ್ದಾರೆ. ಮೊದಲಿಗೆ ಭವ್ಯಾ ಗೌಡ ಫ್ಯಾಮಿಲಿ, ತ್ರಿವಿಕ್ರಮ್ ಅವರ ತಾಯಿ, ರಜತ್ ಅವರ ಮಡದಿ ಮಕ್ಕಳು, ಉಗ್ರಂ ಮಂಜು ಅವರ ಕುಟುಂಬ, ಮೋಕ್ಷಿತಾ ಪೈ ಅವರ ಫ್ಯಾಮಿಲಿ ಹಾಗೂ ಗೌತಮಿ ಜಾಧವ್ ಅವರ ಗಂಡ ಬಿಗ್ ಬಾಸ್ ಮನೆಯೊಳಗೆ ಕಾಲಿಟ್ಟಿದ್ದರು.
ನಿನ್ನೆ (ಗುರುವಾರ) ಧನರಾಜ್ ಆಚಾರ್, ಹನುಮಂತ ಹಾಗೂ ಚೈತ್ರಾ ಕುಂದಾಪುರ ಕುಟುಂಬ ಬಿಗ್ ಬಾಸ್ ಮನೆಗೆ ಬಂದಿದೆ. ಧನರಾಜ್ ಕುಟುಂಬದ ಸುಮಾರು 30 ಮಂದಿ ಮನೆಯೊಳಗೆ ಆಗಮಿಸಿದ್ದರು. ಹಾಗೆಯೆ ಹನುಮಂತ ಅವರ ತಂದೆ-ತಾಯಿ ಮತ್ತು ಚೈತ್ರಾ ಅವರ ತಾಯಿ-ತಂಗಿ ಬಂದಿದ್ದರು. ಹೀಗೆ ಮನೆಗೆ ಬಂದ ಸದಸ್ಯರ ಸಮ್ಮುಖದಲ್ಲಿ ಈ ವಾರದ ಕ್ಯಾಪ್ಟನ್ಸಿ ಟಾಸ್ಕ್ಗೆ ಅರ್ಹತೆ ಪಡೆಯಲು ಗೇಮ್ ಒಂದನ್ನು ಆಡಿಸಲಾಗುತ್ತಿದೆ.
ಅದರಂತೆ ಧನು, ಹನುಮಂತ ಹಾಗು ಚೈತ್ರಾ ಅವರಿಗೆ ಕಿಸ್ ಟಾಸ್ಕ್ ನೀಡಲಾಗಿದೆ. ಇಲ್ಲಿ ತುಟಿಗೆ ಲಿಪ್‌ಸ್ಟಿಕ್ ಹಂಚಿಕೊಂಡು ಎದುರಿಗೆ ಇರುವ ವೈಟ್ ಬೋರ್ಡ್‌ಗೆ ಮುತ್ತು ಕೊಡಬೇಕಾಗುತ್ತದೆ. ಧನರಾಜ್, ಚೈತ್ರಾ ಕುಂದಾಪುರ, ಸಿಂಗರ್ ಹನುಮಂತ ಮುತ್ತು ಕೊಡುವ ಟಾಸ್ಕ್ ಆಡಿದ್ದಾರೆ. ಈ ಒಂದು ಟಾಸ್ಕ್ ಅಲ್ಲಿ ಹೆಚ್ಚಿನ ಮುತ್ತು ಕೊಟ್ಟವರೇ ವಿನ್ನರ್ ಅನ್ನೋದು ಒಟ್ಟು ಆಟದ ನಿಯಮ ಆಗಿದೆ.
ಈ ಒಂದು ಆಟದಲ್ಲಿ ಯಾರು ವಿನ್ನರ್ ಆಗಿದ್ದಾರೆ ಅನ್ನುವ ಕುತೂಹಲ ಇದೆ. ಎಲ್ಲರೂ ಎಷ್ಟು ಸಾಧ್ಯವೋ ಅಷ್ಟು ಬೇಗ ಮುತ್ತು ಕೊಟ್ಟಿದ್ದಾರೆ. ಹಾಗಾಗಿಯೇ ಎಲ್ಲರ ಮುತ್ತಿನ ಸಂಖ್ಯೆಗಳು ಜಾಸ್ತಿನೇ ಇವೆ. ಹಾಗೇ ಕೋಲು ಹಿಡಿದು ಲಿಪ್‌ಸ್ಟಿಕ್ ಹಚ್ಚಿದ ಸ್ಪರ್ಧಿಗಳಿಗೂ ಮುತ್ತು ಕೊಡುವ ಚಾನ್ಸ್ ಸಿಗುತ್ತದೆ ಅಂತಲೇ ಸದ್ಯ ಗೆಸ್ ಮಾಡಬಹುದು. ಈ ಟಾಸ್ಕ್ ಮಧ್ಯೆ ಸಾಕಷ್ಟು ಕಾಮಿಡಿ ಕೂಡ ನಡೆದಿದೆ.
ಚೈತ್ರಾ ಬೋರ್ಡ್‌ಗೆ 25 ಕಿಸ್ಗಳನ್ನು ಕೊಟ್ಟಿದ್ದರಿಂದ ಇದೆಲ್ಲಾ ಟ್ಯಾಲೆಂಟ್ ಇದೆಯಾ ನಿನ್ನತ್ರ.. ಎಂದು ರಜತ್ ಕೇಳುತ್ತಿದ್ದಂತೆ ಚೈತ್ರಾ ಸೇರಿ ಎಲ್ಲರೂ ನಗಾಡಿದ್ದಾರೆ. ಇದೇ ವೇಳೆ ಹನುಮಂತು ಕೂಡ ಕಿಸ್ ಕೊಡುವಾಗ ರಜತ್ ಹನುಮಂತು ತಂದೆ, ತಾಯಿಯರನ್ನ ಚೆನ್ನಾಗಿ ಆಟ ಆಡಿಸಿದ್ದಾರೆ. ಬೋರ್ಡ್ ಬದಲು ಹುಡುಗಿ ಇದ್ದಿದ್ರೆ ಮಗ ಚೆನ್ನಾಗಿ ಕಿಸ್ ಕೊಡಲಿ ಎಂದು ಬೈಯದೇ ಸುಮ್ಮನೇ ಇರುತ್ತಿದ್ರಾ ಎಂದು ತಮಾಷೆ ಮಾಡಿದ್ದಾರೆ.
BBK 11: ಫೈನಲ್ ಸ್ಪರ್ಧಿಗಳು ಯಾರೆಂದು ರಜತ್ ಬಳಿ ಗುಟ್ಟಾಗಿ ಹೇಳಿದ ಪತ್ನಿ ಅಕ್ಷಿತಾ