Saturday, 28th December 2024

BBK 11: ಕುಗ್ಗಲ್ಲ.. ಬಗ್ಗಲ್ಲ..: ಕಳಪೆ ಸ್ವೀಕರಿಸಿ ಜೈಲಿಗೆ ತೆರಳಿದ ಹನುಮಂತ

Hanumantha Kalape

ಬಿಗ್ ಬಾಸ್ ಕನ್ನಡ ಸೀಸನ್ 11 (Bigg Boss Kannada 11) ಈ ವಾರ ರೆಸಾರ್ಟ್ ಆಗಿ ಪರಿವರ್ತನೆಯಾಗಿತ್ತು. ಮನೆಯ 10 ಸದಸ್ಯರನ್ನು ತಲಾ 5 ಜನರಂತೆ ಎರಡು ಗುಂಪುಗಳಾಗಿ ವಿಂಗಡನೆ ಮಾಡಲಾಗಿತ್ತು. ಇದರಲ್ಲಿ ಒಂದು ತಂಡ ಉಳಿದ ಸದಸ್ಯರ ಸೇವೆ ಮಾಡಬೇಕು. ಅತಿಥಿಗಳಿಗೆ ಬೇಕಾದ ಎಲ್ಲ ಸೌಕರ್ಯ ಮಾಡಿಕೊಡಬೇಕು. ಅತಿಥಿಗಳು ಹೇಳಿದ ಎಲ್ಲಾ ಕೆಲಸವನ್ನು ಮಾಡಿಕೊಡಬೇಕು. ಮನೆಯನ್ನು ಕೂಡ ಕ್ಲೀನ್ ಮಾಡಬೇಕು ಎಂಬ ನಿಯಮವಿತ್ತು.

ಆದರೆ, ಈ ಟಾಸ್ಕ್​ನಲ್ಲಿ ಅಷ್ಟೊಂದು ಚೆನ್ನಾಗಿ ಮಾಡದ ಹನುಮಂತನಿಗೆ ಈ ವಾರದ ಕಳಪೆ ಪಟ್ಟ ನೀಡಲಾಗಿದೆ. ಹೀಗಾಗಿ ಅವರು ಜೈಲಿಗೆ ತೆರಳಿದ್ದಾರೆ. ಗೌತಮಿ, ಮೋಕ್ಷಿತಾ, ಮಂಜು, ಚೈತ್ರಾ ಸೇರಿದಂತೆ ಅನೇಕರು ಹನುಮಂತ ಅವರಿಗೆ ಕಳಪೆ ಕೊಟ್ಟಿದ್ದಾರೆ. ಧನರಾಜ್‌ ಅವರು ತುಂಬಾ ತಪ್ಪು ಅಂತ ಹನುಮಂತ ಕಾಣಿಸಿದರು ಎಂದರು. ಚೈತ್ರಾ ಅವರು ಹನುಮಂತನ ಬಗ್ಗೆ ಶುಚಿತ್ವದ ಬಗ್ಗೆ ಕಾರಣ ಕೊಟ್ಟರು. ಇನ್ನು ಹುನುಮಂತು ಕೂಡ ಧನ್ಯವಾದಗಳು. ಕಳಪೆ ಕೊಟ್ಟಿದ್ದಕ್ಕೆ ನಾನು ಬಗ್ಗೋದೆ ಇಲ್ಲ, ಕುಗ್ಗೋದೆ ಇಲ್ಲ ಎಂದು ಜೈಲಿಗೆ ಹೋಗಿದ್ದಾರೆ.

8 ಮಂದಿ ನಾಮಿನೇಟ್ 2 ಜನ ಮಾತ್ರ ಸೇಫ್:

ಈ ವಾರ ಘಟಾನುಘಟಿ ಸ್ಪರ್ಧಿಗಳೇ ಮನೆಯಿಂದ ಹೊರಹೋಗಲು ನಾಮಿನೇಟ್ ಆಗಿದ್ದಾರೆ. ಈ ಬಾರಿಯ ನಾಮಿನೇಷನ್ ಪ್ರಕ್ರಿಯೆಯನ್ನು ಬಿಗ್ ಬಾಸ್ ವಿಶೇಷವಾಗಿ ನೀಡಿದರು. ಅದೇನೆಂದರೆ, ನಾಮಿನೇಟ್ ಆಗೋ ಸ್ಪರ್ಧಿಗೆ ಕೃತಕವಾಗಿ ತಯಾರಿಸಿರುವ ಬಾಟಲಿಗಳಿಂದ ಹೊಡೆದು ನಾಮಿನೇಟ್ ಮಾಡಬೇಕಿದೆ. ಮೊದಲು ನಾಮಿನೇಟ್ ಮಾಡಬೇಕು. ಸೂಕ್ತ ಕಾರಣ ಕೊಡಬೇಕು. ಆ ಮೇಲೆ ಬಾಟಲಿಯಿಂದ ತಲೆಗೆ ಹೊಡೆಯಬೇಕು. ಇದು ಈ ವಾರದ ನಾಮಿನೇಷನ್ ಪ್ರಕ್ರಿಯೆ ಆಗಿತ್ತು.

ಇದರ ಮೂಲಕ ಈ ವಾರ ಮನೆಯಿಂದ ಹೊರಹೋಗಲು ಒಟ್ಟು 8 ಮಂದಿ ನಾಮಿನೇಟ್ ಆಗಿದ್ದಾರೆ. ಇದರಲ್ಲಿ ಚೈತ್ರಾ ಕುಂದಾಪುರ, ಗೌತಮಿ ಜಾಧವ್, ಉಗ್ರಂ ಮಂಜು, ಧನರಾಜ್ ಆಚಾರ್, ಹನುಮಂತ, ಮೋಕ್ಷಿತಾ ಪೈ, ತ್ರಿವಿಕ್ರಮ್ ಮತ್ತು ಐಶ್ವರ್ಯಾ ಹೆಸರು ಇದೆ. ಇವರಲ್ಲಿ ಯಾರು ಮನೆಯಿಂದ ಆಚೆ ಹೋಗುತ್ತಾರೆ ಎಂಬುದು ಭಾನುವಾರ ತಿಳಿಯಲಿದೆ. ಶುಕ್ರವಾರ ರಾತ್ರಿಯ ವರೆಗೆ ವೋಟಿಂಗ್ ಲೈನ್ಸ್ ತೆರೆದಿರುತ್ತದೆ.

BBK 11: ಈ ವಾರ ದೊಡ್ಮನೆಯಿಂದ ಹೊರಹೋಗಲು ಬರೋಬ್ಬರಿ 8 ಮಂದಿ ನಾಮಿನೇಟ್