ಹತ್ತನೇ ವಾರಕ್ಕೆ ತಲುಪಿರುವ ಬಿಗ್ ಬಾಸ್ ಕನ್ನಡ ಸೀಸನ್ 11 ರಲ್ಲಿ (Bigg Boss Kannada 11) ಇದೀಗ ವಿಶೇಷ ಟಾಸ್ಕ್ ಒಂದನ್ನು ನೀಡಲಾಗಿದೆ. ಮನೆಯ ಸದಸ್ಯರನ್ನು ಎರಡು ತಂಡಗಳಾಗಿ ಮಾಡಲಾಗಿದ್ದು, ಎರಡು ಟಿವಿ ಚಾನೆಲ್ಗಳನ್ನ ಮುನ್ನಡೆಸುವ ಜವಾಬ್ದಾರಿ ನೀಡಲಾಗಿದೆ. ಅದರಂತೆ ಬಿಗ್ ಬಾಸ್ ಮನೆ ಎರಡು ಟಿವಿ ವಾಹಿನಿಯಾಗಿ ಪರಿವರ್ತನೆಗೊಂಡಿದೆ. ಇವರಿಗೆ ಕಾಲ ಕಾಲಕ್ಕೆ ಟಾಸ್ಕ್ ನೀಡಲಾಗುತ್ತದೆ.
ಒಂದು ತಂಡದಲ್ಲಿ ಧನರಾಜ್, ಹನುಮಂತ, ಶಿಶಿರ್, ರಜತ್, ಮೋಕ್ಷಿತಾ, ಚೈತ್ರಾ ಇದ್ದಾರೆ. ಮತ್ತೊಂದು ತಂಡದಲ್ಲಿ ಐಶ್ವರ್ಯಾ, ಸುರೇಶ್, ತ್ರಿವಿಕ್ರಮ್, ಭವ್ಯ, ಗೌತಮಿ ಮಂಜಣ್ಣ ಇದ್ದಾರೆ. ನಿನ್ನೆ ನ್ಯೂಸ್ ರೀಡಿಂಗ್ ಮತ್ತು ಅಡುಗೆ ಮಾಡುವ ವಿಭಿನ್ನ ಟಾಸ್ಕ್ಗಳನ್ನು ನೀಡಲಾಗಿತ್ತು. ಇಂದು ಇದೀಗ ಎದುರಾಳಿ ವಾಹಿನಿಯಿಂದ ಈ ಮನೆಯಲ್ಲಿ ಇರಲು ಅರ್ಹತೆ ಇಲ್ಲದ ಕಳಪೆ ಸದಸ್ಯನನ್ನು ಆರಿಸಬೇಕು ಎಂಬ ಟಾಸ್ಕ್ ಅನ್ನು ಬಿಗ್ ಬಾಸ್ ನೀಡಿದ್ದಾರೆ.
ಇದಕ್ಕೆ ಧನರಾಜ್ ತಂಡ ಎದುರಾಳಿ ತಂಡದಲ್ಲಿರುವ ಗೌತಮಿ ಹಾಗೂ ಮಂಜು ಅವರನ್ನು ಅರ್ಹತೆ ಇಲ್ಲದ ಕಳಪೆ ಸದಸ್ಯರನ್ನಾಗಿ ಆಯ್ಕೆ ಮಾಡಿದ್ದಾರೆ. ಈ ಮೂಲಕ ಬಿಗ್ ಬಾಸ್ ಮನೆಯಲ್ಲಿ ಯಾವಾಗಲೂ ಜೊತೆಯಾಗಿ ಇರುತ್ತಿದ್ದ ಉಗ್ರಂ ಮಂಜು ಹಾಗೂ ಗೌತಮಿ ನಡುವೆ ಯಾರು ಅರ್ಹರು ಎಂಬ ಪ್ರಶ್ನೆ ಬಂದಿದೆ. ಹನುಮಂತ ಅವರು ಮಂಜು ಹಾಗೂ ಗೌತಮಿಗೆ ಪ್ರಶ್ನೆಗಳ ಸುರಿಮಳೆ ಗೈದಿದ್ದಾರೆ.
ಈ ಮನೆಯಲ್ಲಿ ನಾನು ಮಾಡಿದ್ದೇ ಸರಿ, ಬೇರೆಯವರು ಮಾಡಿದ್ದು ತಪ್ಪು ಎಂಬ ಕಲ್ಪನೆಯಲ್ಲಿ ಮಂಜು ಇದ್ದಾರೆ ಎಂದು ಹನುಮಂತ ಹೇಳಿದ್ದಾರೆ. ಆದರೆ, ಇದನ್ನು ಒಪ್ಪದ ಗೌತಮಿ, ನಾನು ಮಾಡಿದ್ದೇ ಸರಿ ಎಂಬುದು ನಾನು ಎಲ್ಲೂ ಕೇಳಿಸಿಕೊಂಡಿಲ್ಲ. ಯಾಕಂದ್ರೆ ಮಂಜಣ್ಣನ ತಪ್ಪುಗಳನ್ನು ಸರಿಪಡಿಸೋದೇ ನಾನು ಎಂದು ಹೇಳಿದ್ದಾರೆ. ಇದಕ್ಕೆ ಮತ್ತೆ ಕೌಂಟರ್ ಕೊಟ್ಟ ಹನುಮಾ, ಮಂಜಣ್ಣ ಇರಲಿಲ್ಲ ಅಂದ್ರೆ ಗೌತಮಿ ಅಕ್ಕ ಇಲ್ಲಿವರೆಗೆ ಬರಲು ಸಾಧ್ಯನೇ ಆಗ್ತಿರ್ಲಿಲ್ಲ ಎಂದಿದ್ದಾರೆ.
ಇದಕ್ಕೆ ಮಂಜು ಅವರು, ಗೌತಮಿ ಕಳಪೆ ಅಲ್ಲ, ಸಮರ್ತರು ಎಂದು ಹೇಳಿದರು. ಆಗ ಹನುಮಂತ ಅವರು ಇಲ್ಲಿ ಗೆಳಯನ ಪರವಾಗಿ ಗೆಳತಿ ಮಾತಾಡ್ತಾಳೆ, ಗೆಳತಿ ಪರವಾಗಿ ಗೆಳೆಯ ಮಾತಾಡ್ತಾನೆ ಎಂದು ನೇರವಾಗಿ ಹೇಳಿದ್ದಾರೆ. ನಿನ್ನೆಯಷ್ಟೆ ಗೌತಮಿ ಅವರು ಮಂಜು ಜೊತೆ ಮಾತನಾಡುತ್ತಾ, ಇನ್ಮುಂದೆ ನಾನು ನನ್ನ ಆಟ ಆಡುತ್ತೇನೆ, ನೀವು ಎದುರಾಳಿಯಾಗಿ ಬಂದರೆ ನಾನಲ್ಲಿ ಮಂಜಣ್ಣ ಅಂತ ನೋಡಲ್ಲ, ಯಾವುದೇ ಗೇಮ್ ಪ್ಲಾನ್ ಮಾಡಲ್ಲ ಎಂದು ಹೇಳಿದ್ದರು.
BBK 11: ಮುಚ್ಕೊಂಡು ಕೂತ್ಕೋಬೇಕು: ಏಕವಚನದಲ್ಲೇ ತ್ರಿವಿಕ್ರಮ್ಗೆ ಬೈದ ಚೈತ್ರಾ ಕುಂದಾಪುರ