ಈ ವಾರ ಬಿಗ್ ಬಾಸ್ ಮನೆ ಬಿಗ್ ಬಾಸ್ (Bigg Boss Kannada 11) ಸಾಮ್ರಾಜ್ಯವಾಗಿ ಬದಲಾಗಿರುವುದು ಗೊತ್ತೇ ಇದೆ. ಮೊದಲ ಎರಡು ದಿನ ಕ್ಯಾಪ್ಟನ್ ಉಗ್ರಂ ಮಂಜು ರಾಜನಾಗಿ ಆಳುತ್ತಿದ್ದರು. ಆದರೆ, ಬುಧವಾರ ಬಿಗ್ ಬಾಸ್ ಇದರಲ್ಲೊಂದು ಟ್ವಿಸ್ಟ್ ಕೊಟ್ಟರು. ಮನೆಗೆ ಯುವರಾಣಿಯ ಆಗಮನ ಮಾಡಿಬಿಟ್ಟರು. ಸದ್ಯ ಮೋಕ್ಷಿತಾ ಪೈ ಅವರು ಯುವರಾಣಿ ಆಗಿದ್ದಾರೆ. ಯುವರಾಣಿ ಆಗಿ ಮೋಕ್ಷಿತಾ ಪೈ ಎಂಟ್ರಿಕೊಟ್ಟ ಬಳಿಕ ಮನೆ ಎರಡು ಬಣವಾಗಿದೆ.
ಮಂಜು ರಾಜರ ಬಣದಲ್ಲಿ ತ್ರಿವಿಕ್ರಮ್, ಗೌತಮಿ, ಧನರಾಜ್ ಆಚಾರ್, ಭವ್ಯಾ ಗೌಡ ಹಾಗೂ ಗೋಲ್ಡ್ ಸುರೇಶ್ ಇದ್ದರೆ ಅತ್ತ ಮೋಕ್ಷಿತಾ ಬಣದಲ್ಲಿ ಹನುಮಂತ, ಶಿಶಿರ್, ಶೋಭಾ ಶೆಟ್ಟಿ, ಐಶ್ವರ್ಯಾ, ಚೈತ್ರಾ ಕುಂದಾಪುರ ಹಾಗೂ ರಜತ್ ಕಿಶನ್ ಇದ್ದಾರೆ. ಈ ಎರಡು ಬಣಗಳಿಗೆ ಬಿಗ್ ಬಾಸ್ ಕಾಲ ಕಾಲಕ್ಕೆ ಟಾಸ್ಕ್ ನೀಡುತ್ತಾರೆ. ಇದರಲ್ಲಿ ಅತಿ ಹೆಚ್ಚು ಟಾಸ್ಕ್ ಗೆದ್ದ ಬಣ ಕ್ಯಾಪ್ಟನ್ಸಿ ಟಾಸ್ಕ್ಗೆ ಅರ್ಹತೆ ಪಡೆಯುತ್ತಾರೆ.
ಬಿಗ್ ಬಾಸ್ ಮನೆಯ ಕುಚುಕು ದೋಸ್ತಿಗಳಾದ ಧನರಾಜ್ ಆಚಾರ್ ಮತ್ತು ಹನುಮಂತ ಇದೀಗ ಬೇರೆ ಬೇರೆ ಬಣ ಆಗಿದ್ದಾರೆ. ಆದರೆ, ಇವರಿಬ್ಬರ ಕಾಮಿಡಿ ಮಾತ್ರ ನಿಂತಿಲ್ಲ. ಸೋಫಾ ಮೇಳೆ ಕುಳಿತುಕೊಂಡು ಇವರಿಬ್ಬರು ಮಾತನಾಡುವಾಗ ಕೆಲ ಹಾಸ್ಯ ಸನ್ನಿವೇಶ ನಡೆದಿದೆ. ಯುವರಾಣಿ ಮೋಕ್ಷಿತಾ ಗಾರ್ಡನ್ ಏರಿಯಾದಲ್ಲಿ ಕೂತಿರುತ್ತಾರೆ. ಅಲ್ಲೇ ಇರುವ ಮಂಜಣ್ಣ ರಾಜ ಹಾಡನ್ನು ಹೇಳಿ ರೇಗಿಸುತ್ತ ಇರುತ್ತಾರೆ.
ಇದೇ ವೇಳೆ ಗೋಲ್ಡ್ ಸುರೇಶ್, ಧನರಾಜ್, ಹನುಮಂತ ಒಟ್ಟಿಗೆ ಕೂತು ಮಾತನಾಡುತ್ತ ಇರುತ್ತಾರೆ. ಮೊದಲಿಗೆ ಮಾತು ಆರಂಭಿಸುವ ಹನುಮಂತು, ಇವರೇ ಮಾತನಾಡಲ್ಲ ಎಂದು ಮೋಕ್ಷಿತಾ ಮತ್ತು ಮಂಜು ಅವರತ್ತ ಬೆಟ್ಟು ಮಾಡ್ತಾರೆ. ಅದಕ್ಕೆ ಧನರಾಜ್ ಕೂಡ ಇವರು ಮಾತನಾಡಬೇಕು ಎಂದು ಹನಮಂತ ಅವರ ಮಾತನ್ನ ಪುನರುಚ್ಚರಿಸುತ್ತಾರೆ. ನಂತರ ಹನುಮಂತು, ಈ ಆಟದಲ್ಲಿ ಅಣ್ಣ-ತಂಗಿ ನಡುವೆ ಹೊಂದಾಣಿಕೆ ಇಲ್ಲ. ಹಿಂಗಾದರೆ ಪ್ರಜೆಗಳ ಕತೆ ಏನು ಎಂದಿದ್ದಾರೆ.
ಇಲ್ಲಿಗೆ ನಿಲ್ಲದ ಹನುಮಂತನ ಮಾತು, ಬಿಗ್ಬಾಸ್ ಈಗ ಏನು ಮಾಡಬೇಕು ಎಂದರೆ ಅವರನ್ನು (ಮಂಜು ಮತ್ತು ಮೋಕ್ಷಿತಾ) ಪಟ್ಟದಿಂದ ಇಳಿಸಬೇಕು. ನಿಮ್ಮ ನಿರ್ಧಾರ ಸರಿ ಇಲ್ಲ. ಬೇರೆಯವರನ್ನು ರಾಜ, ಯುವರಾಣಿಯನ್ನಾಗಿ ಮಾಡಲಾಗುತ್ತದೆ ಎಂದು ಘೋಷಣೆ ಮಾಡಬೇಕು. ಧನರಾಜ್ ರಾಜ, ಭವ್ಯ ಅಕ್ಕ ಯುವರಾಣಿಯನ್ನಾಗಿ ಮಾಡಬೇಕು. ಆಗ ಆಟ ಚೆನ್ನಾಗಿರುತ್ತದೆ ಎಂದು ಹೇಳಿದ್ದಾರೆ. ಈ ವಾರ ಟ್ವಿಸ್ಟ್ ಮೇಲೆ ಟ್ವಿಸ್ಟ್ ಕೊಡುತ್ತಿರುವ ಬಿಗ್ ಬಾಸ್ ಹನುಮಂತು ಅವರ ಪ್ಲಾನ್ ಅನ್ನು ಮುನ್ನಲೆಗೆ ತರುತ್ತಾರ ಎಂಬುದು ಕುತೂಹಲ ಮೂಡಿದೆ.
BBK 11: ಬಿಗ್ ಬಾಸ್ ಮನೆಯಲ್ಲಿ ಮಿತಿ ಮೀರಿದ ಕಿತ್ತಾಟ: ಮಂಜು-ರಜತ್ ನಡುವೆ ದೊಡ್ಡ ಗಲಾಟೆ