Wednesday, 27th November 2024

BBK 11: ಬಿಗ್ ಬಾಸ್​ನಲ್ಲಿ ನಾಮಿನೇಷನ್ ಬಿಸಿ: ಮಂಜು-ಶೋಭಾ ನಡುವೆ ಗಲಾಟೆ

Hanumantha Shobha and Manju

ಬಿಗ್ ಬಾಸ್ ಕನ್ನಡ ಸೀಸನ್ 11 (Bigg Boss Kannada 11) ಒಂಬತ್ತನೆ ವಾರಕ್ಕೆ ಕಾಲಿಟ್ಟಿದೆ. ಟಾಸ್ಕ್​ಗಳ ಕಾವು ಏರುತ್ತಿದ್ದು ಬಿಗ್ ಬಾಸ್ ಕಠಿಣ ಸವಾಲುಗಳನ್ನೇ ಸ್ಪರ್ಧಿಗಳಿಗೆ ನೀಡುತ್ತಿದ್ದಾರೆ. ಸದ್ಯ ಮನೆಯಲ್ಲಿ 13 ಮಂದಿ ಇದ್ದಾರೆ. ಕಳೆದ ವಾರ ಮನೆಯಿಂದ ಧರ್ಮಾ ಕೀರ್ತಿರಾಜ್ ಎಲಿಮಿನೇಟ್ ಆಗಿ ಹೊರಬಂದರು. ಇದೀಗ ದೊಡ್ಮನೆಯಲ್ಲಿ ಮತ್ತೆ ನಾಮಿನೇಷನ್ ಪ್ರಕ್ರಿಯೆ ನಡೆದಿದ್ದು, ಈ ಸಂದರ್ಭ ಮನೆ ಹೊತ್ತಿ ಉರಿದಿದೆ.

ಸದ್ಯ ಬಿಗ್ ಬಾಸ್ ಮನೆ ಬಿಗ್ ಬಾಸ್ ಸಾಮ್ರಾಜ್ಯವಾಗಿ ಬದಲಾಗಿರುವುದು ಗೊತ್ತೇ ಇದೆ. ಸಾಮ್ರಾಜ್ಯದಲ್ಲಿ ಉಗ್ರಂ ಮಂಜು ಅವರ ಉಗ್ರಾವತಾರದ ದರ್ಬಾರ್ ಭರ್ಜರಿ ಆಗಿ ನಡೆಯುತ್ತಿದೆ. ಇವರ ಆರ್ಭಟಕ್ಕೆ ಮನೆಮಂದಿ ಕಂಗಾಲಾಗಿದ್ದಾರೆ. ಇದರ ಜೊತೆಗೆ ನಾಮಿನೇಷನ್ ಪ್ರಕ್ರಿಯೆ ಕೂಡ ನಡೆದಿದೆ. ಈ ಸಂದರ್ಭ ಮಂಜು ಹಾಗೂ ಶೋಭಾ ಶೆಟ್ಟಿ ನಡುವೆ ಜಗಳ ನಡೆದಿದೆ. ಇದಕ್ಕೆ ಕಾರಣವಾಗಿದ್ದು ಹನುಮಂತ.

ಈ ವಾರದ ನಾಮಿನೇಷನ್ ಪ್ರಕ್ರಿಯೆ ವೇಳೆ ಹಿಂದೆ ಆಡಿದ ಮಾತುಗಳೆಲ್ಲ ಒಂದೊಂದಾಗಿ ಹೊರಬಂದಿದೆ. ಬಿಲ್ಲು-ಬಾಣ ಕಲೆಗಾರಿಕೆ ಮೂಲಕ ನಾಮಿನೇಟ್ ಮಾಡಲು ಬಿಗ್ ​ಬಾಸ್ ಸೂಚಿಸಿದ್ದಾರೆ. ನಾಮಿನೇಟ್ ಮಾಡುವ ಸದಸ್ಯರು, ಎದುರಾಳಿಯ ಸ್ಪರ್ಧಿಯ ಭಾವಚಿತ್ರವನ್ನು ಬಾಣಕ್ಕೆ ಚುಚ್ಚಿಕೊಳ್ಳಬೇಕು. ನಂತರ ಅದನ್ನು ಮನೆಯ ಮುಖ್ಯದ್ವಾರಕ್ಕೆ ಹೊಡೆಯಬೇಕು. ಅದು ಮನೆಯ ದ್ವಾರವನ್ನು ಛೇದಿಸಿಕೊಂಡು ಹೋಗಬೇಕಾಗಿರುತ್ತದೆ.

ನಾಮಿನೇಷನ್ ವೇಳೆ ಹನುಮಂತ ಅವರು ಶೋಭಾ ಶೆಟ್ಟಿ ಹೆಸರು ತೆಗೆದುಕೊಂಡಿದ್ದಾರೆ. ಇದಕ್ಕೆ ಕಾರಣ ನೀಡಿರುವ ಅವರು, ‘‘ಕಳೆದ ವಾರ ನೀವು ಕ್ಯಾಪ್ಟನ್ ಆಗಿದ್ದಾಗ ನಿಮ್ಮ ಬಿದ್ದಿವಂತಿಕೆಯಿಂದ ನಾವು ಯಾರೂ ಆಟವಾಡಿಲ್ಲ. ಎಲ್ಲ ನಮ್ಮ ಮಂಜಣ್ಣ ಹಾಗೂ ರಜತ್ ಅಣ್ಣ ಪ್ಲಾನ್ ಮಾಡಿದ ಪ್ರಕಾರ ಆಟ ಆಡಿದ್ವಿ’’ ಎಂದು ಹೇಳಿದ್ದಾರೆ. ಇದರಿಂದ ಕೆರಳಿದ ಶೋಭಾ, ಹಾಗಾದ್ರೆ ನಿಮ್ಮ ಬುದ್ದಿವಂತಿಕೆ ಎಲ್ಲಿ ಹೋಯಿತು ಎಂದು ಕೇಳಿದ್ದಾರೆ.

ಇದರ ಮಧ್ಯೆ ಮಂಜು ಅವರು, ಹನುಮಂತ ಅವರು ನಾಮಿನೇಷನ್ ಪ್ರಕ್ರಿಯೆಗೆ ನೀಡಿರುವ ಕಾರಣ ಸೂಕ್ತ ಎಂದು ನನಗೆ ಅನಿಸುತ್ತದೆ ಎಂದಿದ್ದಾರೆ. ಇದಕ್ಕೆ ಶೋಭಾ ಅವರು, ನೀವೇ ಸೂಕ್ತ ಅಂತ ಹೇಳಿದ್ರೆ ನಾನು ವಾದಾನೇ ಮಾಡ್ತಾ ಇರಲಿಲ್ಲ ಎಂದರು. ಇದರಿಂದ ಕೆರಳಿದ ಮಂಜು, ಇದು ಬಿಗ್ ಬಾಸ್ ಮಹಾಪ್ರಭುಗಳ ಆಜ್ಞೆ, ನಿಮ್ಮ ಸ್ಥಾನದಲ್ಲಿ ಹೋಗಿ ಕುಳಿತುಕೊಳ್ಳಬೇಕು ಎಂದು ಏರು ಧ್ವನಿಯಲ್ಲಿ ಹೇಳಿದ್ದಾರೆ. ಆದರೆ, ಇದಕ್ಕೆ ಶೋಭಾ ಅವರು ನಾನು ಕುಳಿತುಕೊಳ್ಳುವುದಿಲ್ಲ ಎಂದು ಹೇಳಿದ್ದಾರೆ.

BBK 11: ನಿಮ್ಮನ್ನ ಹೊರಗೆ ಕಳುಹಿಸೋವರೆಗೂ ನಾನು ಹೋಗಲ್ಲ: ಚೈತ್ರಾ-ರಜತ್ ನಡುವೆ ಮಾತಿನ ಸಮರ