Monday, 13th January 2025

BBK 11: ನಾನು ಆಟ ಶುರು ಮಾಡಿ ಬಹಳ ದಿನ ಆಯ್ತು: ಹನುಮಂತನ ಮಾತಿಗೆ ಕಿಚ್ಚ ಫಿದಾ, ಮನೆಮಂದಿ ಶಾಕ್

Hanumantha (2)

ಹನುಮಂತ ಬಿಗ್ ಬಾಸ್ ಕನ್ನಡ ಸೀಸನ್ 11ಕ್ಕೆ (Bigg Boss Kannada 11) ಕಾಲಿಟ್ಟ ನಂತರ ಈ ಶೋನ ದಿಕ್ಕೇ ಬದಲಾಯಿತು. ಅಷ್ಟು ದಿನ ಬರೀ ಜಗಳಗಳಿಂದಲೇ ಕೂಡಿದ್ದ ಮನೆಯಲ್ಲಿ ಕೊಂಚ ನಗುವಿನ ಅಲೆ ತರಿಸಿದರು. ಯಾವುದಕ್ಕೂ ತಲೆಕೆಡಿಸಿಕೊಳ್ಳದ ಇವರು ನೋಡ ನೋಡುತ್ತಲೇ ಇಂದು ಫಿನಾಲೆಗೆ ಎಂಟ್ರಿಕೊಟ್ಟುಬಿಟ್ಟಿದ್ದಾರೆ. ಫಿನಾಲೆ ಟಿಕೆಟ್​ ಪಡೆಯಲು ಬಿಗ್ ಬಾಸ್​ ಒಂದು ಟಾಸ್ಕ್ ನೀಡಿದ್ದರು. ಈ ಎಲ್ಲ ಸವಾಲನ್ನು ಗೆದ್ದು ಹನುಮಂತ ಅವರು ಬಿಗ್ ಬಾಸ್​ ಕನ್ನಡ 11 ಕಾರ್ಯಕ್ರಮದ ಮೊದಲ ಫಿನಾಲೆ ಸ್ಪರ್ಧಿಯಾಗಿ ಆಯ್ಕೆ ಆಗಿದ್ದಾರೆ.

ಹನುಮಂತ ಅವರು ಬಿಗ್ ಬಾಸ್ ಮನೆಯಲ್ಲಿ ಯಾರ ಬಳಿಯೂ ದ್ವೇಷ ಕಟ್ಟಿಕೊಂಡಿಲ್ಲ. ಹಾಗಂತ ಅವರು ತಮ್ಮ ಅಭಿಪ್ರಾಯವನ್ನು ಹೇಳದೇ ಉಳಿದಿಲ್ಲ. ಎಲ್ಲವನ್ನೂ ಶುದ್ಧ ಮನಸ್ಸಿನಿಂದ ಹೇಳಿದ್ದರಿಂದ ಅವರನ್ನು ಯಾರೂ ದ್ವೇಷಿಸುತ್ತಿಲ್ಲ. ಹೊರಗೆ ಕೂಡ ಹನುಮಂತ ಅವರಿಗೆ ದೊಡ್ಡ ಅಭಿಮಾನಿ ಬಳಗ ಇದೆ. ಶನಿವಾರವಂತು ಕಿಚ್ಚ ಸುದೀಪ್ ಅವರು ಹನುಮಂತನ ಆಟ ಕಂಡು ಫಿದಾ ಆದರು. ಅವರನ್ನು ಉದಾಹರಣೆಯನ್ನಾಗಿ ತೆಗೆದುಕೊಂಡು ಉಳಿದ ಎಲ್ಲ ಸ್ಪರ್ಧಿಗಳಿಗೆ ಕ್ಲಾಸ್ ತೆಗೆದುಕೊಂಡರು. ಇದು ಭಾನುವಾರ ಕೂಡ ಮುಂದುವರೆಯಿತು.

ಕಿಚ್ಚ ಸುದೀಪ್​ ಮನೆ ಮಂದಿಗೆ ಟಾಸ್ಕ್​ವೊಂದನ್ನು ಕೊಟ್ಟಿದ್ದರು. ಒಬ್ಬ ವ್ಯಕ್ತಿ ನನ್ನ ಜರ್ನಿಗೆ ಅಡಚಣೆಯಾಗಿದ್ದಾರೆ ಯಾರದು ಅಂತ ಪ್ರಶ್ನೆ ಮಾಡಿದ್ದಾರೆ ಕಿಚ್ಚ. ಆಗ ಭವ್ಯಾ ಗೌಡ ಅಚ್ಚರಿಯ ರೀತಿಯಲ್ಲಿ ತ್ರಿವಿಕ್ರಮ್​ ಹೆಸರನ್ನು ತೆಗೆದುಕೊಂಡಿದ್ದಾರೆ. ಇನ್ನೂ ಉಳಿದ ಮನೆ ಮಂದಿ ಹನುಮಂತನ ಹೆಸರನ್ನು ತೆಗೆದುಕೊಂಡು ಮುಖಕ್ಕೆ ಬಣ್ಣದ ಬಾಂಬ್​ ಸಿಡಿಸುವಂತೆ ಮಾಡಿದ್ದಾರೆ. ಉಗ್ರಂ ಮಂಜು, ಗೌತಮಿ, ಚೈತ್ರಾ ಕುಂದಾಪುರ, ಹನುಮಂತನ ಹೆಸರನ್ನು ತೆಗೆದುಕೊಂಡಿದ್ದಾರೆ.

ಆದರೆ, ಇದಕ್ಕೆಲ್ಲ ಹನುಮಂತ ಸಖತ್ ಆಗಿ ತಿರುಗೇಟು ಕೊಟ್ಟಿದ್ದಾನೆ. ಗೆಲುವು ಅಂತ ನೋಡಿದಾಗ ಎಲ್ಲೋ ಹನುಮಂತ ಮುಂದೆ ಬರ್ತಾ ಇದ್ದಾನೆ. ವೈಲ್ಡ್​ ಕಾರ್ಡ್​ ಎಂಟ್ರಿ ಕೊಟ್ಟು, ಆಗಾಗ ಸ್ಪೀಚ್ ಆಫ್ ಆಗ್ತಾ ಇದ್ದೇನೆ ಅಂತ ಹೇಳಿ ಮನೆಯನ್ನು ಸ್ಪೀಚ್ ಆಫ್ ಮಾಡ್ತಾರೆ. ಎಲ್ಲರಿಗೂ ಹಲ್ವಾ ತಿನ್ನಿಸುತ್ತಿದ್ದಾನೆ ಎಂಬೆಲ್ಲಾ ಉತ್ತರಗಳು ಬಂದಿವೆ. ಇದನ್ನೂ ಕೇಳಿಸಿಕೊಂಡ ಹನುಮ, ನಾನು ಆಟ ಶುರು ಮಾಡಿ ಬಹಳ ದಿನ ಆಯ್ತು ಸರ್, ಇವರಿಗೆಲ್ಲ ಇವತ್ತು ಗೊತ್ತಾಗಿದೆ ಎಂದು ಟಾಂಗ್​ ಕೊಟ್ಟಿದ್ದಾರೆ. ಇದನ್ನು ಕೇಳಿ ಸುದೀಪ್ ನಗಾಡಿದ್ದು, ಮನೆಮಂದಿ ಶಾಕ್ ಆಗಿದ್ದಾರೆ.

BBK 11: ಉತ್ತಮ ಪಡೆದ ವಾರವೇ ಬಿಗ್ ಬಾಸ್​ನಿಂದ ಎಲಿಮಿನೇಟ್ ಆದ ಚೈತ್ರಾ ಕುಂದಾಪುರ

Leave a Reply

Your email address will not be published. Required fields are marked *