Friday, 13th December 2024

ಹಿಂದಿ ರಾಷ್ಟ್ರೀಯ ಭಾಷೆ ಅಲ್ಲ…ಸುದೀಪ್‌ ಹೇಳಿಕೆಗೆ ಸಿಂಗಂ ಪ್ರತಿಕ್ರಿಯೆ

ಮುಂಬೈ: ಸ್ಯಾಂಡಲ್​ವುಡ್ ನಟ ಕಿಚ್ಚ ಸುದೀಪ್ ಹಿಂದಿ ರಾಷ್ಟ್ರೀಯ ಭಾಷೆ ಅಲ್ಲ ಎಂಬ ಹೇಳಿಕೆಗೆ ಬಾಲಿವುಡ್ ನಟ ಅಜಯ್ ದೇವಗನ್ ಕಿಚ್ಚ ಸುದೀಪ್​ಗೆ ಪ್ರತಿಕ್ರಿಯಿಸಿದ್ದಾರೆ.

ಚಿತ್ರರಂಗದಲ್ಲೂ ಇದರ ಕುರಿತು ಪರ-ವಿರೋಧ ಮಾತುಗಳು ನಡೆದಿವೆ. ಇತ್ತೀಚೆಗೆ ಸ್ಯಾಂಡಲ್​ ವುಡ್ ನಟ ಕಿಚ್ಚ ಸುದೀಪ್ ಸಂದರ್ಶನವೊಂದರಲ್ಲಿ, ಹಿಂದಿ ರಾಷ್ಟ್ರೀಯ ಭಾಷೆ ಅಲ್ಲ, ರಾಷ್ಟ್ರೀಯ ಭಾಷೆಯಾಗಿ ಒಪ್ಪಲು ಸಾಧ್ಯವಿಲ್ಲ ಎಂದಿದ್ದರು. ಇದೀಗ ಬಾಲಿವುಡ್ ನಟ ಅಜಯ್ ದೇವಗನ್, ಹಿಂದಿ ರಾಷ್ಟ್ರೀಯ ಭಾಷೆ ಅಲ್ಲವೆಂದ ಮೇಲೆ ಡಬ್ ಮಾಡಿ ಏಕೆ ಚಿತ್ರಗಳನ್ನು ಹಿಂದಿಯಲ್ಲಿ ರಿಲೀಸ್ ಮಾಡುತ್ತೀರಿ ಎಂದು ಪ್ರಶ್ನಿಸಿದ್ದಾರೆ.

ಹಿಂದಿಯು ರಾಷ್ಟ್ರೀಯ ಭಾಷೆಯೇ ಆಗಿರುತ್ತದೆ ಎಂದು ಹೇಳಿದ್ದಾರೆ. ಸದ್ಯ ಅಜಯ್ ಟ್ವೀಟ್ ದೊಡ್ಡ ಮಟ್ಟದಲ್ಲಿ ಚರ್ಚೆ ಹುಟ್ಟುಹಾಕಿದೆ.

ಅಜಯ್ ದೇವಗನ್ ತಮ್ಮ ಟ್ವೀಟ್​ನಲ್ಲಿ ”ಹಿಂದಿ ನ್ಯಾಷನಲ್ ಲಾಂಗ್ವೇಜ್ ಅಲ್ಲ ಅಂದ ಮೇಲೆ ನಿಮ್ಮ ಮಾತೃಭಾಷೆ ಸಿನಿಮಾನ ಹಿಂದಿಯಲ್ಲಿ ಡಬ್ ಮಾಡಿ ಏಕೆ ರಿಲೀಸ್ ಮಾಡು ತ್ತೀರಾ?” ಎಂದು ಪ್ರಶ್ನಿಸಿದ್ದಾರೆ.

ಭಾರತದಲ್ಲಿ ರಾಷ್ಟ್ರೀಯ ಭಾಷೆಯ ಸ್ಥಾನಮಾನವನ್ನು ಹಿಂದಿಗೆ ನೀಡಲಾಗಿಲ್ಲ ಎಂದು ನೆಟ್ಟಿಗರು ಅಜಯ್ ದೇವಗನ್ ತಿಳಿ ಹೇಳಿದ್ದಾರೆ. ಅಜಯ್ ದೇವಗನ್ ವಾದಕ್ಕೆ ನೆಲೆಗಟ್ಟೇ ಇಲ್ಲ ಎಂದು ಮತ್ತಷ್ಟು ಜನರು ಪ್ರತಿಕ್ರಿಯಿಸಿದ್ದರೆ, ಇದು ನಟನ ಹೊಸ ಚಿತ್ರ ‘ರನ್​ವೇ 34’ ಪ್ರಚಾರದ ಗಿಮಿಕ್ ಎಂದು ಕಾಲೆಳೆದಿದ್ದಾರೆ. ಒಂದಷ್ಟು ಜನ ಬೆಂಬಲವನ್ನೂ ನೀಡಿದ್ದಾರೆ.

ಅಜಯ್ ದೇವಗನ್ ಟ್ವೀಟ್​ಗೆ ಕಿಚ್ಚ ಸುದೀಪ್ ಪ್ರತಿಕ್ರಿಯಿಸಿ, ನಾನು ಸಾಲು ಹೇಳಿದ ಹಿನ್ನೆಲೆಗೂ ನಿಮ್ಮನ್ನು ಮುಖತಃ ಭೇಟಿ ಯಾದಾಗ ಈ ಬಗ್ಗೆ ಚರ್ಚಿಸುವೆ. ಆ ಮಾತುಗಳನ್ನು ಹೇಳಿದ್ದು ಯಾರನ್ನೋ ನೋಯಿಸಲು ಅಥವಾ ವಾದಿಸಲು ಅಲ್ಲ  ಎಂದಿದ್ದಾರೆ ಕಿಚ್ಚ.