ತಿರುವನಂತಪುರಂ: ಸೌತ್ ಬ್ಯೂಟಿ ಕ್ವೀನ್, ಮಾಲಿವುಡ್ ಬೆಡಗಿ ಹನಿ ರೋಸ್ (Honey Rose) ಗ್ಲಾಮರಸ್ ಲುಕ್ ಮೂಲಕವೇ ಪಡ್ಡೆ ಹುಡುಗರ ಗಮನ ಸೆಳೆಯುತ್ತಿರುತ್ತಾರೆ. ಹನಿ ರೋಸ್ ಹೆಚ್ಚು ಸಿನಿಮಾಗಳಲ್ಲಿ ನಟಿಸದಿದ್ದರೂ ತಮ್ಮ ಬೋಲ್ಡ್ ಲುಕ್‌ನಿಂದ ಜನಪ್ರಿಯರಾಗುವ ಮೂಲಕ ಅಭಿಮಾನಿಗಳ ಹೃದಯ ಗೆದ್ದಿದ್ದಾರೆ. ಸದಾ ಸಾಮಾಜಿಕ ಮಾಧ್ಯಮದಲ್ಲಿ ಸಕ್ರಿಯವಾಗಿರುವ ನಟಿ ಇದೀಗ ವ್ಯಕ್ತಿಯೊಬ್ಬ ಉದ್ದೇಶಪೂರ್ವಕವಾಗಿ ತನ್ನನ್ನು ಅವಮಾನಿಸಲು ಪಯತ್ನಿಸುತ್ತಿದ್ದಾನೆ ಎಂದು ಕಹಿ ಅನುಭವವನ್ನು ಹಂಚಿಕೊಂಡಿದ್ದಾರೆ (Viral Post).
ನಟಿ ಸಿನಿಮಾ ಹೊರತಾಗಿ ಇತರ ಕಾರ್ಯಕ್ರಮಗಳಲ್ಲಿಯೂ ಭಾಗವಹಿಸುತ್ತಿರುತ್ತಾರೆ. ಸಿನಿಮಾ ಅವಕಾಶಗಳು ಹೆಚ್ಚಾಗಿ ಸಿಗದೆ ಇದ್ದರೂ ಜಾಹೀರಾತು, ಮಾಲ್, ಶೋ ರೂಂಗಳ ಉದ್ಘಾಟನೆಯಲ್ಲಿ ಹೆಚ್ಚಾಗಿ ಕಾಣಿಸಿಕೊಳ್ಳುತ್ತಾರೆ. ನಟಿ ಸಾಮಾರಂಭಗಳಲ್ಲಿ ಪಾಲ್ಗೊಳ್ಳುವ ಫೋಟೊ, ವಿಡಿಯೊಗಳು ಸೋಶಿಯಲ್ ಮೀಡಿಯಾದಲ್ಲಿ ಹೆಚ್ಚು ವೈರಲ್ ಆಗುತ್ತದೆ. ಇದೀಗ ನಟಿ ವ್ಯಕ್ತಿಯೊಬ್ಬ ತನ್ನನ್ನು ಉದ್ದೇಶ ಪೂರ್ವಕವಾಗಿ ಟೀಕಿಸುತ್ತಿದ್ದಾನೆ ಎಂದು ಸೋಶಿಯಲ್ ಮೀಡಿಯಾದಲ್ಲಿ ಬರೆದುಕೊಂಡಿದ್ದಾರೆ.
ವ್ಯಕ್ತಿ ಒಬ್ಬ ಸಮಾರಂಭಕ್ಕೆ ಬರಲು ಆಮಂತ್ರಣ ನೀಡಿದ್ದ. ಆದರೆ ಅಲ್ಲಿಗೆ ಹೋಗಲು ನಾನು ನಿರಾಕರಿಸಿದ್ದೆ. ಆತನ ಆಹ್ವಾನ ನಿರಾಕರಿಸಿದ ನಂತರ, ವ್ಯಕ್ತಿಯು ಪ್ರತೀಕಾರವಾಗಿ ತನ್ನನ್ನು ಅವಮಾನಿಸಲು ಪ್ರಾರಂಭಿಸಿದ್ದಾನೆ ಎಂದು ತಿಳಿಸಿದ್ದಾರೆ. ಆದರೆ ಆ ವ್ಯಕ್ತಿಯ ಹೆಸರನ್ನಾಗಲಿ ಅಥವಾ ಆತನ ಮಾಹಿತಿಯನ್ನಾಗಲಿ ಹನಿ ರೋಸ್ ಬಹಿರಂಗಪಡಿಸಿಲ್ಲ.
ʼʼಈ ವ್ಯಕ್ತಿ ನಾನು ಭಾಗವಹಿಸುವ ಎಲ್ಲ ಕಾರ್ಯಕ್ರಮಗಳಿಗೆ ಬರಲು ಪ್ರಯತ್ನಿಸುತ್ತಾನೆ. ನನ್ನನ್ನು ಅವಮಾನಿಸುವ ರೀತಿಯಲ್ಲಿ ಮಾತನಾಡುವುದಲ್ಲದೆ ನನ್ನ ಎದುರಲ್ಲೇ ಡಬಲ್ ಮೀನಿಂಗ್ ಮಾತುಗಳನ್ನಾಡುತ್ತಾನೆ. ಈತ ಎಲ್ಲ ಕಡೆಯಲ್ಲೂ ನನ್ನನ್ನು ಹಿಂಬಾಲಿಸುತ್ತಿದ್ದಾನೆ. ಸೋಶಿಯಲ್ ಮೀಡಿಯಾ ವೇದಿಕೆಗಳ ಮೂಲಕ ಲೈಂಗಿಕವಾಗಿ ಅನುಚಿತ ಟೀಕೆ ಮಾಡುತ್ತಾನೆʼʼ ಎಂದು ಹನಿ ರೋಸ್ ಆರೋಪಿಸಿದ್ದಾರೆ. ಆದರೆ ಇದ್ಯಾವುದಕ್ಕೂ ತಾನು ಪ್ರತಿಕ್ರಿಯೆ ನೀಡಿಲ್ಲ. ಸಾಮಾನ್ಯವಾಗಿ ಮಾನಸಿಕ ಅಸ್ವಸ್ಥತೆ ಹೊಂದಿರುವವರು ಇಂತಹ ಹೇಳಿಕೆಗಳನ್ನು ನೀಡುತ್ತಾರೆ ಎಂದು ಸೋಶಿಯಲ್ ಮೀಡಿಯಾ ಪೋಸ್ಟ್ ಮೂಲಕ ತಿರುಗೇಟು ನೀಡಿದ್ದಾರೆ.
2005ರಲ್ಲಿ ಹನಿ ರೋಸ್ ಸಿನಿಮಾ ಇಂಡಸ್ಟ್ರಿಗೆ ಆಗಮಿಸಿದರು. ವಿನಯನ್ ನಿರ್ದೇಶನದ ‘ಬಾಯ್ ಫ್ರೆಂಡ್’ ಸಿನಿಮಾದ ಮೂಲಕ ನಟಿ ಸಿನಿಮಾ ಕೆರಿಯರ್ ಆರಂಭಿಸಿದ ಬಳಿಕ ಹಲವು ಮಲಯಾಳಂ, ತೆಲುಗು, ತಮಿಳು ಚಿತ್ರರಂಗದಲ್ಲಿ ಅನೇಕ ಹಿಟ್ ಸಿನಿಮಾಗಳಲ್ಲಿ ನಟಿಸಿದ್ದಾರೆ. ಜತೆಗೆ ಕನ್ನಡ ಚಿತ್ರದಲ್ಲಿಯೂ ಕಾಣಿಸಿಕೊಂಡಿದ್ದಾರೆ. 2010ರಲ್ಲಿ ತೆರೆಕಂಡ ʼನಂಜನಗೂಡು ನಂಜುಂಡʼ ಎನ್ನುವ ಕನ್ನಡ ಸಿನಿಮಾದಲ್ಲಿ ಅಭಿನಯಿಸಿದ್ದಾರೆ. ಹನಿ ರೋಸ್ ಅಭಿನಯದ ʼರಾಚೆಲ್ʼ ಚಿತ್ರವು ವಿವಿಧ ಭಾಷೆಗಳಲ್ಲಿ ಜನವರಿ 10ರಂದು ತೆರೆಕಾಣಲಿದೆ.
ಇದನ್ನು ಓದಿ:Viral Video: ಈ ವೃದ್ಧನ ಸಾಹಸಕ್ಕೊಂದು ಸಲಾಂ! ಹಗ್ಗದಲ್ಲೇ 1 ಕಿ.ಮೀ. ದೂರ ಜಾರಿದ ವಿಡಿಯೊ ವೈರಲ್