ಮುಂಬೈ: ನಟ ಹೃತಿಕ್ ರೋಷನ್ (Hrithik Roshan) ಹಾಗೂ ಮಾಜಿ ಪತ್ನಿ ಸುಸ್ಸಾನ್ ಖಾನ್ (Sussanne Khan) ವಿಚ್ಛೇದನ ಪಡೆದ 10 ವರ್ಷಗಳ ನಂತರವೂ ಉತ್ತಮ ಬಾಂಧವ್ಯ ಹೊಂದಿದ್ದಾರೆ. ಅವರು ಪರಸ್ಪರ ಕುಟುಂಬಗಳೊಂದಿಗೆ ಉತ್ತಮ ಸಂಬಂಧವನ್ನು ಹೊಂದಿದ್ದಾರೆ. ಇದೀಗ ಸುಸ್ಸಾನ್ ಖಾನ್ ತಮ್ಮ ಪ್ರಿಯತಮ ಅರ್ಸ್ಲಾನ್ ಗೋನಿಯ (Arslan Goni) ಹುಟ್ಟುಹಬ್ಬದಂದು ಇನ್ಸ್ಟಾಗ್ರಾಂನಲ್ಲಿ ಫೋಸ್ಟ್ ಮಾಡಿದ್ದು, ಹೃತಿಕ್ ಕೂಡ ಶುಭ ಕೋರಿದ್ದಾರೆ.
ಗುರುವಾರ ತನ್ನ ಗೆಳೆಯ ಅರ್ಸ್ಲಾನ್ ಗೋನಿಯ ಹುಟ್ಟುಹಬ್ಬದಂದು, ಸುಸ್ಸಾನ್ ಇನ್ಸ್ಟಾಗ್ರಾಂ ಖಾತೆಯಲ್ಲಿ ತನ್ನ ಸಂಗಾತಿಯೊಂದಿಗೆ ಪ್ರಣಯ ಕ್ಷಣಗಳಿಂದ ತುಂಬಿದ ರೀಲ್ ಅನ್ನು ಹಂಚಿಕೊಂಡಿದ್ದರು. ಇವುಗಳಲ್ಲಿ ರಜಾದಿನಗಳು, ಪಾರ್ಟಿಗಳು ಮತ್ತು ಇತರ ಪ್ರವಾಸ ಹಾಗೂ ಇಬ್ಬರ ಫೋಟೋಗಳಿವೆ. ಫೋಟೋ ಕೆಳಗೆ ಜೀವನಕ್ಕಾಗಿ ನಾನು ಬಯಸುವುದು ನಿನ್ನನ್ನೇ ಎಂದು ಬರೆದು ಕೆಂಪು ಹಾರ್ಟ್ ಇಮೋಜಿಗಳನ್ನು ಹಾಕಿದ್ದಾರೆ. ಹುಟ್ಟು ಹಬ್ಬದ ಶುಭಾಷಯಗಳು ನಿನಗೆ. ನೀವು ನನ್ನನ್ನು ಈ ಗ್ರಹದಲ್ಲಿ ಅತ್ಯಂತ ಸಂತೋಷದ ಮಹಿಳೆಯನ್ನಾಗಿ ಮಾಡಿದ್ದೀರಿ. ನಿಮ್ಮೊಂದಿಗಿರುವ ಪ್ರತಿ ದಿನವೂ.. ಜೀವನದ ಅತ್ಯುತ್ತಮ ಸಮಯ ಮತ್ತು ವರ್ಷಗಳು ಎಂದು ಬರೆದುಕೊಂಡಿದ್ದಾರೆ.
ಹೃತಿಕ್ ರೋಷನ್ ಕಾಮೆಂಟ್
ಮಾಜಿ ಪತ್ನಿ ಬಾಯ್‌ಫ್ರೆಂಡ್ ಹುಟ್ಟಿದ ಹಬ್ಬಕ್ಕೆ ಹೃತಿಕ್ ರೋಷನ್ ಕೂಡ ಶುಭ ಕೋರಿದ್ದು, ಸುಸ್ಸಾನ್ ಖಾನ್ ಮಾಡಿರುವ ಪೋಸ್ಟ್‌ನಲ್ಲಿ ಕಮೆಂಟ್ ಮಾಡಿ ಹ್ಯಾಪಿ ಬರ್ಥ್ ಡೇ ಮೈ ಫ್ರೆಂಡ್ ಎಂದು ಕಮೆಂಟ್ ಮಾಡಿದ್ದಾರೆ. ಫ್ಲೈಯಿಂಗ್ ಕಿಸ್ ಮತ್ತು ರೆಡ್ ಹಾರ್ಟ್ ಎಮೋಜಿಗಳನ್ನು ಪೋಸ್ಟ್ ಮಾಡುವ ಮೂಲಕ ಆರ್ಸ್ಲಾನ್ ಸುಸ್ಸಾನ್ ಅವರಿಗೆ ಧನ್ಯವಾದ ಹೇಳಿದ್ದಾರೆ. ಈ ಹಿಂದೆ ಹೃತಿಕ್ ರೋಷನ್ ಗೆಳತಿ ಸಬಾ ಆಜಾದ್ ಹುಟ್ಟಿದ ದಿನದಂದು ಸುಸ್ಸಾನ್ ಶುಭ ಕೋರಿದ್ದರು. ಈ ನಾಲ್ವರು ಉತ್ತಮ ಸಂಬಂಧವನ್ನು ಹೊಂದಿದ್ದು, ಹಲವು ಬರಿ ಒಟ್ಟಿಗೆ ವಿದೇಶದಲ್ಲಿ ಕಾಣಿಸಿಕೊಂಡಿದ್ದರು.
ಮುಂದೆ ಹೃತಿಕ್ , ಅಯಾನ್ ಮುಖರ್ಜಿಯವರ ಸ್ಪೈ ಥ್ರಿಲ್ಲರ್ ವಾರ್ 2 ಸಿನಿಮಾದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಜೂನಿಯರ್ ಎನ್‌ಟಿಆರ್ ಮತ್ತು ಕಿಯಾರಾ ಅಡ್ವಾಣಿ ಕೂಡ ನಟಿಸಿರುವ ಈ ಚಿತ್ರವು ಆದಿತ್ಯ ಚೋಪ್ರಾ ಅವರ ವೈಆರ್‌ಎಫ್ ಸ್ಪೈ ಯೂನಿವರ್ಸ್‌ನ ಒಂದು ಭಾಗವಾಗಿದೆ ಎಂದು ತಿಳಿದು ಬಂದಿದೆ. 2025 ಹೃತಿಕ್‌ಗೆ ಒಂದು ಪ್ರಮುಖ ಮೈಲಿಗಲ್ಲಾಗಿದ್ದು, ಅವರು ಬಾಲಿವುಡ್‌ಗೆ ಪದಾರ್ಪಣೆ ಮಾಡಿ 25 ವರ್ಷಗಳನ್ನು ಪೂರೈಸಲಿದ್ದಾರೆ. 2000 ರ ಬ್ಲಾಕ್ ಬ್ಲಾಸ್ಟರ್ ರೊಮ್ಯಾಂಟಿಕ್ ಡ್ರಾಮಾ ಕಹೋ ನಾ ಪ್ಯಾರ್ ಹೈ ಮೂಲಕ ಬಾಲಿವುಡ್‌ಗೆ ಪದಾರ್ಪಣೆ ಮಾಡಿದ್ದರು.
ಈ ಸುದ್ದಿಯನ್ನೂ ಓದಿ : Highest Tax-Paying Celebs: ಇವರೇ ಅತೀ ಹೆಚ್ಚು ತೆರಿಗೆ ಪಾವತಿಸುವ ಸೆಲೆಬ್ರಿಟಿಗಳು; ಸಂಪೂರ್ಣ ಪಟ್ಟಿ ಇಲ್ಲಿದೆ