Thursday, 21st November 2024

ಕುತೂಹಲ ಕಥಾನಕ ಚೇಸ್

ಸೆಸ್ಪನ್‌ಸ್‌, ಥ್ರಿಿಲ್ಲರ್ ಕುರಿತ ದೊಡ್ಡ ತಾರಗಣವಿರುವ ‘ಚೇಜ್’ ಚಿತ್ರದ ಪೋಸ್ಟರ್ ಮತ್ತು ಟೀಸರ್‌ನ್ನು ಬಿಡುಗಡೆಗೊಂಡಿದ್ದು, ಸಿನಿಪ್ರಿಿಯರನ್ನು ಸೆಳೆಯುತ್ತಿದೆ. ಚಿತ್ರದಲ್ಲಿನ ಎರಡು ಪಾತ್ರಗಳು ಒಂದು ಘಟನೆಯಲ್ಲಿ ಭೇಟಿಯಾಗುತ್ತದೆ. ಪ್ರತಿ ಪಾತ್ರವು ಒಬ್ಬರ ಬದುಕನ್ನು ಹೇಗೆ ಬದಲಾವಣೆ ಮಾಡುತ್ತದೆ ಎನ್ನುವದರೊಂದಿಗೆ ಕತೆಯು ತೆರೆದುಕೊಳ್ಳುತ್ತದೆ. ಬೇರೆ ಬೇರೆ ಪಾತ್ರಗಳು ಇದರೊಂದಿಗೆ ಜೋಡಿಸಿಕೊಂಡು ಹೋಗುತ್ತದೆ. ಒಂದು ಸಾಮಾನ್ಯ ಸಂಗತಿಯನ್ನು ನಿರ್ಲಕ್ಷ ಮಾಡಿದರೆ ಸಮಾಜಕ್ಕೆೆ ನಷ್ಟ ಉಂಟಾಗುತ್ತದೆ. ಅಕಸ್ಮಾಾತ್ ಜವಬ್ದಾಾರಿಯಾಗಿ ನಡೆದುಕೊಂಡರೆ ಜನರಿಗೆ ಯಾವ ರೀತಿ ಸಹಾಯವಾಗುತ್ತದೆ. ಸರಿಯಾದ ಸಮಯದಲ್ಲಿ ನಿರ್ಣಯ ತೆಗೆದುಕೊಂಡರೆ ಇನ್ನೊೊಬ್ಬರ ಬದುಕು ಹೇಗೆ ಹಸನಾಗುತ್ತದೆ. ಎಂಬ ಅಂಶಗಳನ್ನು ಚಿತ್ರದ ಸನ್ನಿಿವೇಶಗಳ ಮೂಲಕ ದಾಖಲಿಸಲಾಗಿದೆ. ಇದಕ್ಕೆೆ ಪೂರಕವಾಗಿ ‘ಇನ್ ದಿ ಡಾರ್ಕ್’ ಎಂದು ಅಡಿಬರಹದಲ್ಲಿ ಹೇಳಿಕೊಂಡಿದೆ. ಬೆಂಗಳೂರು, ಮಂಗಳೂರು, ಉಡುಪಿ, ಕೊಚ್ಚಿಿನ್, ಮನಾಲಿ, ಶಿಮ್ಲಾಾದ ಸುಂದರ ತಾಣಗಳಲ್ಲಿ 53 ದಿನಗಳ ಕಾಲ ಚಿತ್ರೀಕರಣ ನಡೆಸಲಾಗಿದೆ.

ತಂದೆ ಪೋಲೀಸ್ ಅಧಿಕಾರಿ, ಪೋಲೀಸ್ ಅಕಾಡೆಮಿಯಲ್ಲಿ ತರಬೇತಿ ಪಡೆದು ಅಪ್ಪನಂತೆ ಆಗಬೇಕೆಂಬ ಆಸೆ ಹೊಂದಿರುವ ಪಾತ್ರದಲ್ಲಿ ರಾಧಿಕಾನಾರಾಯಣ್ ನಟಿಸಿದ್ದಾಾರೆ. ರಾಜೇಶ್‌ನಟರಂಗ ವೈದ್ಯರ ಪಾತ್ರದಲ್ಲಿ ಬಣ್ಣಹಚ್ಚಿಿದ್ದಾಾರೆ. ಆರ್‌ಸಿಬಿ ಅಭಿಮಾನಿಯಾಗಿ ಅರ್ಜುನ್‌ಯೋಗಿ, ಇನ್‌ಸ್‌‌ಪೆಕ್ಟರ್ ಆಗಿ ರೆಹಮಾನ್ ಎಂಟ್ರಿಿಯೊಂದಿಗೆ ತಿರುವು ಪಡೆದುಕೊಳ್ಳುತ್ತದಂತೆ. ವಿಶೇಷ ಪಾತ್ರದಲ್ಲಿ ಬಾಲಿವುಡ್ ನಟ ಕನ್ನಡಿಗ ಸುಶಾಂತ್‌ಪೂಜಾರಿ ಅಭಿನಯಿಸಿದ್ದಾಾರೆ. ಉಳಿದಂತೆ ಶ್ವೇತಾಸಂಜೀವ್, ಅವಿನಾಶ್‌ನರಸಿಂಹರಾಜು, ಪ್ರಮೋದ್‌ಶೆಟ್ಟಿಿ, ಶೀತಲ್‌ಶೆಟ್ಟಿಿ, ಕಿಂಗ್‌ಮೋಹನ್ ಮುಂತಾದವರು ಬಣ್ಣ ಹಚ್ಚಿಿದ್ದಾಾರೆ, ಬರವಣಿಗೆ ಮತ್ತು ನಿರ್ದೇಶನ ವಿಲೋಕ್‌ಶೆಟ್ಟಿಿ ಅವರಿಗೆ ಮೊದಲ ಪ್ರಯತ್ನ. ಡಾ.ಉಮೇಶ್ ಪಿಲಿಕುಡೇಲು ಸಾಹಿತ್ಯದ ನಾಲ್ಕು ಹಾಡುಗಳಿಗೆ ಕಾರ್ತಿಕ್ ಆಚಾರ್ಯ ರಾಗ ಹೊಸೆದಿದ್ದಾಾರೆ. ಸಂಕಲನ ಕ್ರೇಜಿಮೈಂಡ್‌ಸ್‌, ಕಲೆ ಅವಿನಾಶ್.ಎಸ್.ದಿವಾಕರ್, ಸಾಹಸ ಡಿಫರೆಂಟ್‌ಡ್ಯಾಾನಿ-ಚೇತನ್‌ರಮೇಶ್ ಡಿಸೋಜ, ನೃತ್ಯ ವಿಜುಸತೀಶ್-ಸುಶಾಂತ್‌ಪೂಜಾರಿ ನಿಭಾಯಿಸಿದ್ದಾಾರೆ.

1954ರಲ್ಲಿ ಚಿತ್ರರಂಗಕ್ಕೆೆ ಬಂದು ಇಂದಿನವರೆಗೂ ಚೇಜ್ ಮಾಡಿಕೊಂಡು ಬರುತ್ತಿಿದ್ದೇನೆ. ಆದ್ದರಿಂದ ಶೀರ್ಷಿಕೆ ನನಗೂ ಅವಿನಾಭಾವ ಸಂಬಂದವಿದೆ. ತುಣುಕುಗಳನ್ನು ನೋಡಿದಾಗ ಸಂಕಲನ, ಸಂಗೀತ ಕೆಲಸ ಎದ್ದು ಕಾಣಿಸುತ್ತದೆ ಎಂದರು ನಿರ್ದೇಶಕ ಭಗವಾನ್.
ಚಿತ್ರ ಎಷ್ಟು ವರ್ಷ ತೆಗೆದುಕೊಂಡಿದೆ ಎಂದು ಕೇಳುವ ಬದಲು ಎಷ್ಟು ಚೆನ್ನಾಾಗಿ ಬಂದಿದೆ. ಜನ ಇಷ್ಟಪಡುವ ಹಾಗೆ ಮಾಡಬೇಕಾದರೆ ನಾವು ಕಷ್ಟಪಡಬೇಕು. ನಮ್ಮ ಕಾಲದಲ್ಲಿ ನಿರ್ದೇಶಕರನ್ನು ನೋಡಿಕೊಂಡು ಚಿತ್ರಮಂದಿರಕ್ಕೆೆ ಬರುತ್ತಿಿದ್ದರು, ಕಾಲ ಬದಲಾಗಿದೆ. ಸಿನಿಮಾ ಚೆನ್ನಾಾಗಿದ್ದರೆ ಯಾರು ಅಂತ ನೋಡದೆ ವೀಕ್ಷಿಸುತ್ತಾಾರೆ ಅಂತಾರೆ ನಿರ್ದೇಶಕ ಸಾಯಿಪ್ರಕಾಶ್,
ನಾವು ಹಳಬರು ಅಂತ ತಿಳಿಯಬೇಡಿ. ಪ್ರಸಕ್ತ ತಂತ್ರಜ್ಞಾಾನ ಬೆಳೆದಂತೆ ಒಳ್ಳೆೆಯ ಕತೆಗಳ ಸಿನಿಮಾ ಬರುತ್ತಿಿಲ್ಲವೆಂದು ಹಾಲಿವುಡ್ ನಿರ್ದೇಶಕರನ್ನು ಸುರೇಶ್‌ಹೆಬ್ಳಿಿಕರ್ ನೆನಪು ಮಾಡಿಕೊಂಡರು.

ಇವತ್ತು ಎರಡು ತಲೆಮಾರಿನ ಕಾರ್ಯಕ್ರಮ ಎನ್ನಬಹುದು. ಟೈಟಲ್ ಇಂಗ್ಲೀಷಿನದಾಗಿದ್ದರೂ ಕಲಾವಿದರು ಶೇಕಡ 97 ರಷ್ಟು ಕನ್ನಡ ಮಾತನಾಡಿದ್ದಾಾರೆ. ಜನಸಾಮಾನ್ಯರು ಹೆಚ್ಚು ಬಳಸುವ ಯಾವುದೇ ಭಾಷೆ ಇರಲಿ. ಅದು ಮೂಲ ಕನ್ನಡ ಪದವಾಗುತ್ತದೆ. ಅದಕ್ಕಾಾಗಿ ಹೆಸರು ಸಹ ಕನ್ನಡದ್ದು ಎಂದು ಹೇಳಬಹುದು. ಇಂದು ಸಿನಿಮಾ ಕಲೋದ್ಯಮವಾಗಿದೆ. ಟೀಸರ್, ಟ್ರೇಲರ್, ಪೋಸ್ಟರ್ ಕೊನೆಗೆ ಪಿಕ್ಚರ್ ಬಿಡುಗಡೆಯಾಗಿ ಪ್ರೇಕ್ಷಕ ಚಕ್ಕರ್ ಹೊಡೆದರೆ ಶ್ರಮವೆಲ್ಲಾಾ ವ್ಯರ್ಥವಾಗುತ್ತದೆ. ಮನುಷ್ಯನ ಅಭಿರುಚಿಯನ್ನು ಕೆಡಿಸುವ ಚಿತ್ರ ಬಂದರೆ ಧಿಕ್ಕಾಾರ ಹೇಳುತ್ತೇನೆ. ತಂಡವು ಗುಟ್ಟನ್ನು ಬಿಟ್ಟುಕೊಟ್ಟಿಿಲ್ಲ. ಪ್ರೇಕ್ಷಕನಾದವನು ಅದನ್ನು ಬಿಚ್ಚಿಿಡುವುದರಿಂದ ಅವರೇ ಪ್ರಭುಗಳು, ಚಿತ್ರ ಮಾಡುವವರು ಪ್ರಜೆಗಳೆಂದು ಸಾಹಿತಿ, ನಿರ್ದೇಶಕ ಬರಗೂರು ರಾಮಚಂದ್ರಪ್ಪ ಅಭಿಪ್ರಾಾಯ ವ್ಯಕ್ತಪಡಿಸಿದರು.
ಮನೋಹರ್‌ಸುವರ್ಣ, ಪ್ರದೀಪ್‌ಶೆಟ್ಟಿಿ ಮತ್ತು ಪ್ರಶಾಂತ್‌ಶೆಟ್ಟಿಿ ಜಂಟಿಯಾಗಿ ಚಿತ್ರ ನಿರ್ಮಾಣಕ್ಕೆೆ ಜಂಟಿಯಾಗಿ ಬಂಡವಾಳ ಹೂಡಿದ್ದಾಾರೆ.