ಮೊದಲ ಸಿನಿಮಾ ‘ಧಡಕ್’ ಮೂಲಕ ಯಶಸ್ಸು ಸಿಕ್ಕರೂ ಕೂಡ ನಂತರದ ದಿನಗಳಲ್ಲಿ ಅವರು ನಿರೀಕ್ಷಿತ ಮಟ್ಟದಲ್ಲಿ ಗೆಲುವು ಕಾಣಲಿಲ್ಲ. ಅದೇನೇ ಇದ್ದರೂ ಜಾನ್ವಿ ಕಪೂರ್ ಅವರಿಗೆ ಇರುವ ಡಿಮ್ಯಾಂಡ್ ಕಡಿಮೆ ಆಗಿಲ್ಲ. ಭಾನುವಾರ ಅವರ ಹುಟ್ಟುಹಬ್ಬ.
ಅಭಿಮಾನಿಗಳು, ಸೆಲೆಬ್ರಿಟಿಗಳು, ಕುಟುಂಬದವರು ಜಾನ್ವಿಗೆ ಶುಭಾಶಯ ತಿಳಿಸಿದ್ದಾರೆ.
ಸಲಿ ವಿಚಾರ ಏನೆಂದರೆ, ಜಾನ್ವಿ ಕಪೂರ್ ಅವರು ಸಿನಿಮಾ ಜಗತ್ತಿಗೆ ಕಾಲಿಡುವುದು ಶ್ರೀದೇವಿಗೆ ಇಷ್ಟ ಇರಲಿಲ್ಲ. ಮಗಳು ಬೇರೆ ರೀತಿಯಲ್ಲಿ ಬದುಕು ಕಟ್ಟಿಕೊಳ್ಳಬೇಕು ಎಂದು ಬಯಸಿದ್ದರು. ಕಡೆಗೂ ಬಣ್ಣದ ಲೋಕದ ಸೆಳೆತದಿಂದ ಜಾನ್ವಿ ಕಪೂರ್ ಅವರು ನಟಿಯಾಗಿಯೇ ವೃತ್ತಿಜೀವನ ಆಯ್ಕೆ ಮಾಡಿಕೊಂಡರು.
ಜಾನ್ವಿ ಕಪೂರ್ ನಟಿಸಿದ ಮೊದಲ ಸಿನಿಮಾ ರಿಲೀಸ್ ಆಗೋಕಿಂತ ಮುಂಚೆಯೇ ಶ್ರೀದೇವಿ 2018ರ ಫೆ.24ರಂದು ಅವರು ದುಬೈನಲ್ಲಿ ಕೊನೆ ಯುಸಿರು ಎಳೆದರು. ಅದೇ ವರ್ಷ ಜುಲೈ 20ರಂದು ‘ಧಡಕ್’ ಸಿನಿಮಾ ರಿಲೀಸ್ ಆಯಿತು.
‘ಧಡಕ್’ ಚಿತ್ರಕ್ಕೆ ಶಶಾಂಕ್ ಕೈತಾನ್ ನಿರ್ದೇಶನ ಮಾಡಿದ್ದರು. ಜಾನ್ವಿಗೆ ಜೋಡಿಯಾಗಿ ಇಶಾನ್ ಖಟ್ಟರ್ ನಟಿಸಿದ್ದರು. ಮರಾಠಿಯ ‘ಸೈರಾಟ್’ ಚಿತ್ರದ ಹಿಂದಿ ರಿಮೇಕ್ ಆಗಿ ‘ಧಡಕ್’ ಮೂಡಿಬಂತು. ನಿರ್ಮಾಣದ ಹೊಣೆಯನ್ನು ಹೊತ್ತಿದ್ದು ನಿರ್ಮಾಪಕ ಕರಣ್ ಜೋಹರ್.
ಶ್ರೀದೇವಿ ಮತ್ತು ಬೋನಿ ಕಪೂರ್ ದಂಪತಿಗೆ ಇಬ್ಬರು ಮಕ್ಕಳು. ಮೊದಲ ಪುತ್ರಿ ಜಾನ್ವಿ ಕಪೂರ್, ಎರಡನೇ ಪುತ್ರಿ ಖುಷಿ ಕಪೂರ್. ‘ನಾನು ಚಿತ್ರರಂಗಕ್ಕೆ ಬರುವುದು ಅಮ್ಮನಿಗೆ ಇಷ್ಟ ಇರಲಿಲ್ಲ. ತಂಗಿ ಖುಷಿ ಕಪೂರ್ ಚಿತ್ರರಂಗಕ್ಕೆ ಬರುವುದರ ಬಗ್ಗೆ ಅಮ್ಮನಿಗೆ ಯಾವುದೇ ಆತಂಕ ಇರಲಿಲ್ಲ ಎಂದು ಸಂದರ್ಶನದಲ್ಲಿ ಜಾನ್ವಿ ಕಪೂರ್ ಹೇಳಿಕೊಂಡಿದ್ದರು.