Sunday, 6th October 2024

ತಮಿಳು ಬಿಗ್​ ಬಾಸ್​’ಗೆ ಹೊಸ ನಿರೂಪಕ …?

ಚೆನ್ನೈ: ಹಲವು ಭಾಷೆಯಲ್ಲಿ ಬಿಗ್​ ಬಾಸ್​ ಶೋ ಮೂಡಿಬಂದಿದೆ. ಹಿಂದಿ, ಕನ್ನಡ, ತಮಿಳು, ತೆಲುಗು ಹಾಗೂ ಮಲಯಾಳಂ ಭಾಷೆಗಳಲ್ಲಿ ‘ಬಿಗ್​ ಬಾಸ್​’ ರಿಯಾಲಿಟಿ ಶೋ ಯಶಸ್ವಿ ಆಗಿದೆ. ವೀಕ್ಷಕರು ಇಷ್ಟಪಡುವ ನಿರೂಪಕರು ಇದ್ದರೆ ಕಾರ್ಯಕ್ರಮಕ್ಕೆ ಹೆಚ್ಚು ಟಿಆರ್​ಪಿ ಸಿಗುತ್ತದೆ. ಇಲ್ಲದಿದ್ದರೆ ಶೋ ಆಯೋಜಕರು ನಷ್ಟ ಅನುಭವಿಸ ಬೇಕಾಗುತ್ತದೆ.

ಕನ್ನಡದಲ್ಲಿ ಕಿಚ್ಚ ಸುದೀಪ್​, ಹಿಂದಿಯಲ್ಲಿ ಸಲ್ಮಾನ್​ ಖಾನ್​ ಅವರು ಹಲವು ವರ್ಷಗಳಿಂದ ಬಿಗ್​ ಬಾಸ್​ ನಿರೂಪಣೆ ಮಾಡುತ್ತಾ ಬಂದಿ ದ್ದಾರೆ.

ತಮಿಳಿನಲ್ಲಿ ಕಮಲ್​ ಹಾಸನ್​ ಅವರು ಈ ವಿಚಾರದಲ್ಲಿ ಯಶಸ್ವಿ ಆಗಿದ್ದಾರೆ. ತೆಲುಗಿನಲ್ಲಿ ನಾನಿ, ನಾಗಾರ್ಜುನ, ಜ್ಯೂ.ಎನ್​ಟಿಆರ್​ ಕೂಡ ನಿರೂಪಕರಾಗಿ ಗಮನ ಸಳೆದಿದ್ದಾರೆ. ಈಗ ಕಮಲ್​ ಹಾಸನ್​ ಅವರು ತಮಿಳು ಬಿಗ್​ ಬಾಸ್​ ನಿರೂಪಕನ ಸ್ಥಾನಕ್ಕೆ ವಿದಾಯ ಹೇಳಲು ತೀರ್ಮಾನಿದ್ದಾರೆ. ಇದು ಅವರ ಅಭಿಮಾನಿಗಳಿಗೆ ಬೇಸರ ಮೂಡಿಸಿದೆ.

ಕಮಲ್​ ಹಾಸನ್​ ಅವರು ನಟನೆ, ನಿರ್ದೇಶನ, ನಿರ್ಮಾಣ, ರಾಜಕೀಯ.. ಹೀಗೆ ಹತ್ತು ಹಲವು ಕೆಲಸಗಳಲ್ಲಿ ಅವರು ತೊಡಗಿಕೊಂಡಿ ದ್ದಾರೆ. ‘ಬಿಗ್​ ಬಾಸ್​ ತಮಿಳು ಅಲ್ಟಿಮೇಟ್​’ ಕಾರ್ಯಕ್ರಮದ ನಿರೂಪಣೆ ಕೂಡ ಮಾಡುತ್ತಿದ್ದರು. ಇದು ತಮಿಳು ಬಿಗ್​ ಬಾಸ್​ನ ಒಟಿಟಿ ವರ್ಷನ್​. ಆದರೆ ಈಗ ಅವರು ಈ ಶೋ ನಿರೂಪಣೆಯಿಂದ ಹೊರಬರುವುದಾಗಿ ತಿಳಿಸಿದ್ದಾರೆ.

ಕಮಲ್​ ಹಾಸನ್​ ಅವರು ಬಹುನಿರೀಕ್ಷಿತ ‘ವಿಕ್ರಮ್​’ ಸಿನಿಮಾದ ಕೆಲಸಗಳಲ್ಲಿ ತೊಡಗಿಕೊಂಡಿದ್ದಾರೆ. ನಿರ್ದೇಶಕ ಲೋಕೇಶ್​ ಕನಗರಾಜ್​ ಅವರು ಈ ಚಿತ್ರಕ್ಕೆ ನಿರ್ದೇಶನ ಮಾಡುತ್ತಿದ್ದಾರೆ. ಬಿಗ್​ ಬಾಸ್​ನಿಂದಾಗಿ ಈ ಸಿನಿಮಾದ ಶೂಟಿಂಗ್​ ಮತ್ತು ಪೋಸ್ಟ್ ಪ್ರೊಡಕ್ಷನ್​ ಕೆಲಸಗಳಿಗೆ ಸಮಯ ನೀಡಲು ಕಮಲ್​ ಹಾಸನ್​ ಅವರಿಗೆ ಕಷ್ಟ ಆಗುತ್ತಿದೆ. ಹಾಗಾಗಿ ‘ಬಿಗ್​ ಬಾಸ್​ ತಮಿಳು ಅಲ್ಟಿಮೇಟ್​’ ಶೋನಿಂದ ಹೊರಬರಲು ತೀರ್ಮಾನಿಸಿದ್ದಾರೆ.

‘ವಿಕ್ರಮ್​’ ಸಿನಿಮಾದಲ್ಲಿ ಅನೇಕ ಘಟಾನುಘಟಿ ಕಲಾವಿದರು ಮತ್ತು ತಂತ್ರಜ್ಞರು ಕೆಲಸ ಮಾಡುತ್ತಿದ್ದಾರೆ. ಅವರ ಜೊತೆ ಕಮಲ್​ ಹಾಸನ್​ ಅವರ ಡೇಟ್ಸ್​ ಹೊಂದಾಣಿಕೆ ಮಾಡಿಕೊಳ್ಳಲೇ ಬೇಕಾಗಿದೆ. ಆ ಕಾರಣದಿಂದ ಅವರು ‘ಬಿಗ್​ ಬಾಸ್​ ಅಲ್ಟಿಮೇಟ್​’ ಕಾರ್ಯಕ್ರಮದ ನಿರೂಪಣೆಯಿಂದ ಹಿಂದೆ ಸರಿದಿದ್ದಾರೆ.

‘ವಿಕ್ರಮ್​’ ಸಿನಿಮಾದಲ್ಲಿ ನನ್ನ ಸಲುವಾಗಿ ದೊಡ್ಡ ದೊಡ್ಡ ಸ್ಟಾರ್​ ನಟರು ಮತ್ತು ತಂತ್ರಜ್ಞರು ಕಾಯುವಂತೆ ಮಾಡುವುದು ನ್ಯಾಯಸಮ್ಮತ ಅಲ್ಲ’ ಎಂದು ಕಮಲ್​ ಹಾಸನ್​ ಹೇಳಿದ್ದಾರೆ.