ಬೆಂಗಳೂರು: ಕನ್ನಡ ಚಿತ್ರರಂಗದ ಹಿರಿಯ ನಿರ್ದೇಶಕ ಚಿ.ದತ್ತರಾಜ್ (Dattaraj Death) ಇಂದು ಬೆಂಗಳೂರಿನಲ್ಲಿ (Bengaluru news) ನಿಧನರಾಗಿದ್ದಾರೆ. ಮೃತರಿಗೆ 87 ವರ್ಷ ವಯಸ್ಸಾಗಿತ್ತು.
ಚಿ.ದತ್ತರಾಜ್, ಖ್ಯಾತ ಸಾಹಿತಿ ದಿ.ಚಿ.ಉದಯಶಂಕರ್ ಅವರ ಸಹೋದರ. ಡಾ. ರಾಜಕುಮಾರ್ (Dr Rajkumar) ಅಭಿನಯದ ಕೆರಳಿದ ಸಿಂಹ, ಕಾಮನಬಿಲ್ಲು, ಅದೇ ಕಣ್ಣು, ಶೃತಿ ಸೇರಿದಾಗ, ಶಿವರಾಜಕುಮಾರ್ ಅಭಿನಯದ ಮೃತ್ಯುಂಜಯ, ಆನಂದ ಜ್ಯೋತಿ ಹಾಗೂ ಮಂಜುಳ ಅವರು ನಟಿಸಿದ್ದ ರುದ್ರಿ ಮುಂತಾದ ಚಿತ್ರಗಳನ್ನು ಚಿ.ದತ್ತರಾಜ್ ನಿರ್ದೇಶಿಸಿದ್ದರು. ಇಂದು ಮಧ್ಯಾಹ್ನ 1.30ಕ್ಕೆ ಹರಿಶ್ಚಂದ್ರ ಘಾಟ್ನಲ್ಲಿ ಅಂತ್ಯಕ್ರಿಯೆ ನಡೆಯಲಿದೆ.
Ratan Tata Death: ಟಾಟಾ ಜೊತೆಗಿನ ನೆನಪು ಹಂಚಿಕೊಂಡ ಬಿಗ್ ಬಿ
ಹಿರಿಯ ಕೈಗಾರಿಕಾ ಉದ್ಯಮಿ ರತನ್ ಟಾಟಾ (Ratan Tata Death) ಅವರ ನಿಧನಕ್ಕೆ ಬಾಲಿವುಡ್ ನ ಹಿರಿಯ ನಟ (Bollywood actor) ಅಮಿತಾಭ್ ಬಚ್ಚನ್ (Amitabh Bachchan) ಸಾಮಾಜಿಕ ಜಾಲತಾಣವಾದ ಎಕ್ಸ್ನಲ್ಲಿ ಸಂತಾಪ ಸೂಚಿಸಿದ್ದು, ಅವರೊಂದಿಗಿನ ಅದ್ಭುತ ಕ್ಷಣಗಳನ್ನು ನೆನಪಿಸಿಕೊಂಡಿದ್ದಾರೆ.
ರಕ್ತದೊತ್ತಡದಲ್ಲಿ ಹಠಾತ್ ಕುಸಿತದಿಂದಾಗಿ 86ನೇ ವಯಸ್ಸಿನಲ್ಲಿ ರತನ್ ಟಾಟಾ ಅವರು ಅಕ್ಟೋಬರ್ 9ರಂದು ರಾತ್ರಿ ಮುಂಬೈನ ಬ್ರೀಚ್ ಕ್ಯಾಂಡಿ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ. ಇದಕ್ಕೆ ಅನೇಕ ಗಣ್ಯರು, ಸಿನಿಮಾ ನಟನಟಿಯರು ಸಂತಾಪ ಸೂಚಿಸಿ ಸಾಮಾಜಿಕ ಜಾಲತಾಣದಲ್ಲಿ ತಮ್ಮ ದುಃಖವನ್ನು ಹಂಚಿಕೊಂಡಿದ್ದಾರೆ.
ರತನ್ ಟಾಟಾ ಅವರ ನಾಯಕತ್ವ, ಮೌಲ್ಯಗಳು ಮತ್ತು ದೇಶಕ್ಕಾಗಿ ಅವರು ನೀಡಿರುವ ಕೊಡುಗೆಗಳನ್ನು ಅನೇಕರು ಸ್ಮರಿಸಿದ್ದಾರೆ. ನಟ ಅಮಿತಾಬ್ ಬಚ್ಚನ್ ಕೂಡ ರತನ್ ಟಾಟಾ ಅವರ ನಿಧನಕ್ಕೆ ಸಂತಾಪ ಸೂಚಿಸಿ ಅವರೊಂದಿಗಿನ ನೆನಪುಗಳನ್ನು ಹಂಚಿಕೊಂಡರು.
ಸಾಮಾಜಿಕ ಜಾಲತಾಣವಾದ ಎಕ್ಸ್ ನಲ್ಲಿ ಅಮಿತಾಭ್ ಬಚ್ಚನ್ ಹೀಗೆ ಬರೆದಿದ್ದಾರೆ. ರತನ್ ಟಾಟಾ ಅವರ ನಿಧನದ ಬಗ್ಗೆ ತಿಳಿಯಿತು. ಕೊನೆಯ ಕ್ಷಣದವರೆಗೂ ಕೆಲಸ ಮಾಡುತ್ತಿದ್ದರು. ಒಂದು ಯುಗವು ಕೊನೆಗೊಂಡಿದೆ. ಅತ್ಯಂತ ಗೌರವಾನ್ವಿತ, ವಿನಮ್ರ ಮತ್ತು ಅಪಾರ ದೂರದೃಷ್ಟಿಯ ನಾಯಕ ಅವರಾಗಿದ್ದರು, ಅವರೊಂದಿಗೆ ಕೆಲವು ಅದ್ಭುತ ಕ್ಷಣಗಳನ್ನು ಕಳೆದಿದ್ದೇವೆ. ಹಲವಾರು ಪ್ರಚಾರಗಳಲ್ಲಿ ಒಟ್ಟಿಗೆ ತೊಡಗಿಸಿಕೊಂಡಿದ್ದೇವೆ ಎಂದು ಹೇಳಿದ್ದಾರೆ.
ಇದನ್ನೂ ಓದಿ: Ratan Tata: ರತನ್ ಟಾಟಾ ಬಗ್ಗೆ ನೆಚ್ಚಿನ ಗೆಳೆಯ ಶಾಂತನು ಹೇಳಿದ್ದೇನು? ಭಾರೀ ವೈರಲ್ ಆಗ್ತಿದೆ ಇನ್ಸ್ಟಾ ಪೋಸ್ಟ್