ಬಿಗ್ ಬಾಸ್ ಕನ್ನಡ ಸೀಸನ್ 11 (Bigg Boss Kannada 11) ದಿನದಿಂದ ದಿನಕ್ಕೆ ರೋಚಕತೆ ಪಡೆಯುತ್ತಿದೆ. ಜಗದೀಶ್ ಹಾಗೂ ರಂಜಿತ್ ನಿರ್ಗಮನದ ಬಳಿಕ ಮನೆಯೊಳಗೆ ದೊಡ್ಡ ಬದಲಾವಣೆ ಆಗುತ್ತಿದೆ. ಭಾನುವಾರ ಮೊದಲ ವೈಲ್ಡ್ ಕಾರ್ಡ್ ಸ್ಪರ್ಧಿಯಾಗಿ ಸಿಂಗರ್ ಹನುಮಂತ ಕಾಲಿಟ್ಟರು. ಇವರು ಇಡೀ ಕರ್ನಾಟಕವನ್ನು ತಮ್ಮ ಮುಗ್ಧತೆಯಿಂದಲೇ ನಗಿಸುತ್ತಿದ್ದಾರೆ. ಹೀಗಿರುವಾಗ ಇದೀಗ ಮತ್ತೋರ್ವ ಸದಸ್ಯೆ ದೊಡ್ಮನೆಗೆ ಎಂಟ್ರಿ ಕೊಟ್ಟಿದ್ದಾರೆ.
ಬಿಗ್ ಬಾಸ್ ಮನೆಯಲ್ಲೀಗ ರಾಜಕೀಯದ ಟಾಸ್ಕ್ ನಡೆಯುತ್ತಿದೆ. ಮನೆಯ ಸದಸ್ಯರನ್ನು ಎರಡು ರಾಜಕೀಯ ಪಕ್ಷಗಳನ್ನಾಗಿ ವಿಂಗಡಿಸಲಾಗಿದೆ. ಹೀಗಿರುವಾಗ ಮನೆಗೆ ಸುದ್ದಿ ವಾಚಕಿಯಾಗಿ ಜನಪ್ರಿಯತೆ ಗಳಿಸಿರುವ ರಾಧಾ ಹಿರೇಗೌಡರ್ ಅವರು ಎಂಟ್ರಿ ಕೊಟ್ಟಿದ್ದಾರೆ. ಇವರನ್ನು ಕಂಡು ಸ್ಪರ್ಧಿಗಳು ಶಾಕ್ ಆಗಿದ್ದಾರೆ. ಇಂದಿನ ಈ ಎಪಿಸೋಡ್ ಕುರಿತು ಕಲರ್ಸ್ ಕನ್ನಡ ಪ್ರೊಮೋ ಬಿಡುಗಡೆ ಮಾಡಿದೆ. ಆದರೆ, ಇವರು ಸ್ಪರ್ಧಿಯಾಗಿ ಕಾಲಿಟ್ಟಿದ್ದಾರ ಅಥವಾ ಅತಿಥಿ ಎಂಟ್ರಿಯಾ ಎಂಬುದು ಕಾದು ನೋಡಬೇಕಿದೆ.
ರಾಧಾ ಹಿರೇಗೌಡರ್ ಮನೆಯೊಳಗೆ ಕಾಲಿಡುತ್ತಿದ್ದಂತೆ ಕನ್ನಡ ಹೆಣ್ಣು ನಾನು ಸಿಡಿದೆದ್ದರೆ ಮಿಷನ್ ಗನ್ನು ಹಾಡನ್ನು ಹಾಕಲಾಗಿದೆ. ಚೈತ್ರಾ ಕುಂದಾಪುರ ಅವರು ನೀವು ಸ್ಪರ್ಧಿಯಾ? ಏನ್ ಕಥೆ. ನೀವು ಬಂದಿದ್ದೀರಾ ಅಂದ್ರೆ ನಮಗೆ ನೀರು ಕುಡಿಸ್ತೀರಾ ಎಂದಿದ್ದಾರೆ. ಇನ್ನು ರಾಧಾ ಹೀರೆಗೌಡರ್ ಅವರು ಭಾಷಣ, ಜಯಕಾರ ಹೊಸತಲ್ಲ, ಐಶ್ವರ್ಯಾ ಅವರೇ ನಿಮ್ಮ ಪಕ್ಷದಲ್ಲಿ ಇರೋರೆಲ್ಲ ಪ್ರಾಮಾಣಿಕರು ಅಂತ ಎದೆ ಮುಟ್ಕೊಂಡು ಹೇಳಿ ಎಂದು ಗುಡುಗಿದ್ದಾರೆ.
ರಾಧಾ ಹೀರೆಗೌಡರ್ ಅವರು ತ್ರಿವಿಕ್ರಮ್‌ಗೆ ಏನ್ ಕೊಡ್ತೀರಿ ಕನ್ನಡ ಜನತೆಗೆ? ಎಂದು ಪ್ರಶ್ನೆ ಮಾಡಿದ್ದಾರೆ. ಆಗ ತ್ರಿವಿಕ್ರಮ್ ಅವರು ಮನರಂಜನೆ ಕೊಡ್ತೀವಿ ಎಂದು ಹೇಳಿದ್ದಾರೆ. ಇದಕ್ಕೆ ರಾಧಾ ಅವರು ನನ್ನನ್ನು ನಗಿಸಿ ಎಂದಿದ್ದಾರೆ. ಒಟ್ಟಾರೆ ಇಂದು ಬಿಗ್ ಬಾಸ್ ಮನೆಯಲ್ಲಿ ರಾಜಕೀಯ ಟಾಸ್ಕ್ ಕುತೂಹಲ ಮೂಡಿಸಿದೆ. ಧರ್ಮಪರ ಸೇನಾ ಪಕ್ಷ ಮತ್ತು ಪ್ರಾಮಾಣಿಕ ಸಮರ್ಥರ ನ್ಯಾಯವಾದಿ ಪಕ್ಷ ನಡುವೆ ಪೈಪೋಟಿ ಏರ್ಪಟ್ಟಿದೆ.
ಬಿಗ್ ಬಾಸ್ ಕನ್ನಡ ಸೀಸನ್ 11 | ಸೋಮ-ಶುಕ್ರ ರಾತ್ರಿ 9:30#BiggBossKannada11 #BBK11 #HosaAdhyaya #ColorsKannada #BannaHosadaagideBandhaBigiyaagide #ಕಲರ್ಫುಲ್ಕತೆ #colorfulstory #Kicchasudeepa pic.twitter.com/9mFwNJztYe
— Colors Kannada (@ColorsKannada) October 24, 2024
9 ಮಂದಿ ನಾಮಿನೇಟ್:
ನಾಲ್ಕನೇ ವಾರ ದೊಡ್ಮನೆಯಿಂದ ಹೊರಹೋಗಲು ಒಟ್ಟು ಒಂಬತ್ತು ಮಂದಿ ನಾಮಿನೇಟ್ ಆಗಿದ್ದಾರೆ. ಇದರಲ್ಲಿ ಉಗ್ರಂ ಮಂಜು ಹಾಗೂ ಮಾನಸ ನೇರ ನಾಮಿನೇಟ್ ಆಗಿದ್ದಾರೆ. ಮನೆಯ ಕ್ಯಾಪ್ಟನ್ ಆದ ತ್ರಿವಿಕ್ರಮ್ ಹಾಗೂ ಐಶ್ವರ್ಯ ಇವರನ್ನು ಡೈರೆಕ್ಟ್ ನಾಮಿನೇಟ್ ಮಾಡಿದ್ದಾರೆ. ಇವರ ಜೊತೆಗೆ ಗೋಲ್ಡ್ ಸುರೇಶ್, ಶಿಶಿರ್ ಶಾಸ್ತ್ರೀ, ಗೌತಮಿ, ಹಂಸ, ಮೋಕ್ಷಿತಾ, ಚೈತ್ರಾ ಕುಂದಾಪುರ ಹಾಗೂ ಭವ್ಯಾ ನಾಮಿನೇಟ್ ಆಗಿದ್ದಾರೆ.
BBK 11: ಧನರಾಜ್ ಸೇಫ್: ಈ ವಾರ ಮನೆಯಿಂದ ಹೊರ ಹೋಗಲು 9 ಮಂದಿ ನಾಮಿನೇಟ್