Friday, 13th December 2024

ಬಾಲಿವುಡ್​ ಬೆಬೊ ಕರೀನಾ ಕಪೂರ್​ ಜನ್ಮದಿನ ಇಂದು

ಮುಂಬೈ: ಬಾಲಿವುಡ್​ ನಟಿ ಕರೀನಾ ಕಪೂರ್​ಗೆ ಇಂದು ಜನ್ಮದಿನದ ಖುಶಿಯಲ್ಲಿದ್ದಾರೆ. ತಾರೆಗೀಗ 43 ವರ್ಷ ವಯಸ್ಸು.

ಮಕ್ಕಳಾದ ಬಳಿಕ ಇವರ ಸಿನಿಮಾ ಸಂಖ್ಯೆ ಕಡಿಮೆ ಆಗಿದೆ. ತಮ್ಮ 23 ವರ್ಷಗಳ ಸಿನಿಮಾ ವೃತ್ತಿಯಲ್ಲಿ ಅನೇಕ ಸೂಪರ್​ ಹಿಟ್​ ಸಿನಿಮಾಗಳನ್ನು ನೀಡಿದ್ದಾರೆ.

1980ರ ಸೆಪ್ಟೆಂಬರ್​ 21ರಂದು ಮುಂಬೈನಲ್ಲಿ ರಣದೀರ್​ ಕಪೂರ್​ ಮತ್ತು ಬಬಿತಾ ಕಪೂರ್​ ಪುತ್ರಿಯಾಗಿ ಜನಿಸಿದ ಕರೀನಾ ಕಪೂರ್​ 2000ರಲ್ಲಿ ಬಣ್ಣದ ಲೋಕ ಪ್ರವೇಶಿಸಿದರು. ‘ರೆಫ್ಯೂಜಿ’ ಅವರ ನಟನೆಯ ಮೊದಲ ಚಿತ್ರ. ಸಿನಿಮಾ ಸುಮಾರು 35 ಕೋಟಿ ರೂಪಾಯಿ ಗಳಿಸುವಲ್ಲಿ ಯಶಸ್ವಿಯಾಗಿತ್ತು. ಬಳಿಕ​, ಜಬ್​ ವಿ ಮೆಟ್​, ಕಭಿ ಖುಷಿ ಕಭಿ ಗಮ್​, ಲಾಲ್​ ಸಿಂಗ್​ ಚಡ್ಡಾ, ಭಜರಂಗಿ ಭಾಯ್​ಜಾನ್​, ಬಾಡಿಗಾರ್ಡ್​, ಕುರುಬಾನ್​ ಸೇರಿದಂತೆ ಅನೇಕ ಸಿನಿಮಾಗಳಲ್ಲಿ ನಟಿಸಿದ್ದಾರೆ.

2012ರಲ್ಲಿ ನಟ ಸೈಫ್ ಅಲಿ ಖಾನ್ ಅವರನ್ನು ವರಿಸಿದ ಇವರಿಗೆ ತೈಮೂರ್ ಮತ್ತು ಜೆಹ್ ಎಂಬಿಬ್ಬರು ಗಂಡು ಮಕ್ಕಳಿದ್ದಾರೆ.

ಕರೀನಾ ಕಪೂರ್​ ಖಾನ್​ ಮುಖ್ಯಭೂಮಿಕೆಯ ಮುಂದಿನ ಬಹುನಿರೀಕ್ಷಿತ ಪ್ರಾಜೆಕ್ಟ್​​​ ಜಾನೆ ಜಾನ್​​ (Jaane Jaan). ಇದರಲ್ಲಿ ತಾಯಿಯ ಪಾತ್ರ ನಿರ್ವಹಿಸಿದ್ದಾರೆ. ಜಾನೆ ಜಾನ್ ಸಿನಿಮಾ ಕಥೆ ಒಂಟಿ ಮಹಿಳೆ ಮೇಲೆ ಕೇಂದ್ರೀಕೃತವಾಗಿದ್ದು, ನೆರೆಹೊರೆಯವರ ಸಹಾಯದಿಂದ ಗಂಡನ (ದೂರವಾದ) ಸಾವನ್ನು ಮುಚ್ಚಿಡಲು ಪ್ರಯತ್ನಿಸುವ ವಿಷಯಗಳು ಸಿನಿಮಾದಲ್ಲಿ ಪ್ರಮುಖ ಪಾತ್ರ ವಹಿಸಿವೆ.

ಕರೀನಾ ಕಪೂರ್ ಖಾನ್, ಕೃತಿ ಸನೋನ್ ಮತ್ತು ಟಬು ಅವರನ್ನೊಳಗೊಂಡ ಹಾಸ್ಯ ಚಲನಚಿತ್ರ ‘ದಿ ಕ್ರ್ಯೂ’. ರಿಯಾ ಕಪೂರ್ ಮತ್ತು ಏಕ್ತಾ ಕಪೂರ್ ನಿರ್ಮಾಣದ ಸಿನಿಮಾ ಇದಾಗಿದೆ. ದಿ ಕ್ರ್ಯೂ ಎಂದರೆ ‘ಸಿಬ್ಬಂದಿ’ ಎಂದರ್ಥ. ಮಹಿಳಾ ಪ್ರಧಾನ ಚಿತ್ರ.

ನಿರ್ದೇಶಕ ಅಶುತೋಷ್​ ಗೋವಾರಿಕರ್​ ಅವರ ಮುಂದಿನ ಸಿನಿಮಾಗೆ ಕರೀನಾ ಕಪೂರ್​ ನಾಯಕಿ. ಮರಾಠಿ ಚಲನಚಿತ್ರ ‘ಆಪ್ಲಾ ಮನುಸ್​’ನ ಹಿಂದಿ ರಿಮೇಕ್​ ಇದಾಗಿರಲಿದೆ.

‘ಸೆಲ್ಯೂಟ್’​ ಸಿನಿಮಾವು ಗಗನಯಾತ್ರಿ ರಾಕೇಶ್​ ಶರ್ಮಾ ಅವರ ಜೀವನವನ್ನು ಆಧರಿಸಿದೆ. ಶಾರುಖ್​ ಖಾನ್​ ಜೊತೆಗೆ ಕರೀನಾ ಕಪೂರ್​ ಚಿತ್ರದಲ್ಲಿ ನಟಿಸಲಿ ದ್ದಾರೆ. ಈ ಸಿನಿಮಾದ ಕೆಲಸಗಳು ಅಂದುಕೊಂಡಂತೆ ನಡೆದರೆ, ಬಾಲಿವುಡ್​ನ ಜನಪ್ರಿಯ ಜೋಡಿ ಎಂಟು ವರ್ಷಗಳ ನಂತರ ದೊಡ್ಡ ಪರದೆಗೆ ಮರಳಲಿದೆ.