Wednesday, 4th December 2024

Kartik Aaryan: ಮತ್ತೆ ಪ್ರೀತಿಯಲ್ಲಿ ಬಿದ್ರಾ ಕಾರ್ತಿಕ್‌ ಆರ್ಯನ್‌? ಪ್ರೇಯಸಿಯ ಹೆಸರು ರಿವೀಲ್‌!

Kartik Aaryan

ಮುಂಬೈ: ಬಾಲಿವುಡ್‌ನ ಟಾಪ್‌ ನಟ ಕಾರ್ತಿಕ್‌ ಆರ್ಯನ್‌ (Kartik Aaryan) ಡೇಟಿಂಗ್‌ ಲೈಫ್‌ ಬಗ್ಗೆ ಆಗಾಗ ಚರ್ಚೆ ನಡೆಯುತ್ತಲೇ ಇರುತ್ತದೆ. ಈ ಹಿಂದೆ ಹಲವು ನಟಿಯರ ಜೊತೆ ಈ ನಟನ ಹೆಸರು ತಳುಕು ಹಾಕಿಕೊಂಡಿತ್ತು. ಈಗ ಮತ್ತೆ ಕಾರ್ತಿಕ್‌ ಆರ್ಯನ್‌ ಪ್ರೀತಿಯಲ್ಲಿದ್ದಾರೆ ಎಂಬ ಮೂಡುತ್ತಿದೆ. ಇದಕ್ಕೆ ಹೌದು ಎಂಬಂತೆ ವಿದ್ಯಾ ಬಾಲನ್‌ ಕಾರ್ತಿಕ್‌ ಬಗ್ಗೆ ಹೇಳಿದ್ದು ಇದೀಗ ವೈರಲ್‌ ಆಗುತ್ತಿದೆ.

ಇತ್ತೀಚೆಗೆ ನಡೆದ ಕಪಿಲ್‌ ಶರ್ಮಾ ಶೋನಲ್ಲಿ ವಿದ್ಯಾ ಬಾಲನ್‌ (Vidya Balan) ಕಾರ್ತಿಕ್‌ ಆರ್ಯನ್‌ ಪ್ರೀತಿಯಲ್ಲಿರುವುದನ್ನು ಬಹಿರಂಗಪಡಿಸಿದ್ದಾರೆ. ಭೂಲ್‌ ಭುಲೈಯಾ 3 (Bhool Bhulaiyaa 3) ಚಿತ್ರದ ಯಶಸನ್ನು ಹಂಚಿಕೊಳ್ಳಲು ಕಪಿಲ್‌ ಶರ್ಮಾ ಕಾರ್ಯಕ್ರಮಕ್ಕೆ(Great Indian Kapil Show) ವಿದ್ಯಾ ಬಾಲನ್‌ ಹಾಗೂ ಕಾರ್ತಿಕ್‌ ಆರ್ಯನ್‌ ಸೇರಿದಂತೆ ಚಿತ್ರ ತಂಡವು ಸೇರಿತ್ತು. ಕಾರ್ತಿಕ್‌ ಆರ್ಯನ್‌ಗೆ ಕಪಿಲ್‌ ಡೇಟಿಂಗ್‌ ಬಗ್ಗೆ ಕೇಳಿದಾಗ ಮಾತನಾಡಿದ ವಿದ್ಯಾ ಬಾಲನ್‌ ಕಾರ್ತಿಕ್‌ ಆರ್ಯನ್‌ಗೆ ಗರ್ಲ್‌ ಫ್ರೆಂಡ್‌ ಇರುವುದು ನಿಜ, ಆತ ಶೂಟಿಂಗ್‌ ಅಲ್ಲಿ ಬಿಡುವು ಸಿಕ್ಕಾಗ ಆತ ಯಾವಾಗಲೂ ಫೋನ್‌ನಲ್ಲಿಯೇ ಇರುತ್ತಾನೆ ಎಂದು ಹೇಳಿದ್ದಾರೆ. ನಾನು ಹಲವು ಬಾರಿ ಆತ ಮಾತನಾಡಿರುವುದನ್ನು ಕೇಳಿಸಿಕೊಂಡಿದ್ದೇನೆ ಯಾವಾಗಲೂ ಮೀ ಟೂ ಎಂದು ಹೇಳುತ್ತಿರುತ್ತಾನೆ ಎಂದು ಹೇಳಿದ್ದಾರೆ. ಇದಕ್ಕೆ ಪ್ರತ್ಯುತ್ತರಿಸಿದ ಕಾರ್ತಿಕ್‌ ಆರ್ಯನ್‌ ಮೀಟೂ ಅಲ್ಲ ಮೀತೂ ಎಂದು ಹೇಳಿ ನಕ್ಕಿದ್ದಾರೆ.

ಕಾರ್ಯಕ್ರಮಕ್ಕೆ ಬಂದ ಕಾರ್ತಿಕ್‌ ತಾಯಿಯ ಬಳಿ ನಿಮ್ಮ ಮಗನಿಗೆ ಪ್ರೇಯಸಿ ಇರುವುದು ನಿಮಗೆ ಗೊತ್ತಾ ಆತ ನಿಮಗೆ ಇದರ ಬಗ್ಗೆ ಹೇಳಿದ್ದಾನಾ ? ಎಂದು ಕೇಳಿದ್ದಾರೆ. ಅದಕ್ಕೆ ನಗುತ್ತಾ ಉತ್ತರಿಸಿದ ಕಾರ್ತಿಕ್‌ ತಾಯಿ ನಾನೂ ಇದನ್ನೇ ಕೇಳುತ್ತಿರುತ್ತೇನೆ. ಯಾರಾದರು ಇದ್ದರೆ ಹೇಳು, ಆಕೆಯ ಹೆಸರೇನು ಎಂದು ಹಲವು ಬಾರಿ ಕೇಳಿದ್ದೇನೆ ಎಂದು ಹೇಳಿದ್ದಾರೆ. ಈ ಮೊದಲು ಹಲವು ನಟಿಯರ ಹೆಸರು ಇವರ ಜೊತೆ ಕೇಳಿ ಬಂದಿತ್ತು. ನಟಿ ಜಾನ್ವಿ ಕಪೂರ್‌ ಹಾಗೂ ಸಾರಾ ಅಲಿ ಖಾನ್‌ ಜೊತೆ ಡೇಟಿಂಗ್‌ ನಡೆಸುತ್ತಿದ್ದ ಇವರು ನಂತರ ಬ್ರೇಕ್‌ಅಪ್‌ ಮಾಡಿಕೊಂಡಿದ್ದರು. ಅನನ್ಯಾ ಪಾಂಡೆ ಜತೆ ಕೂಡ ಇವರು ಡೇಟ್‌ ನಡೆಸುತ್ತಿದ್ದರು ಎಂಬ ಸುದ್ದಿಯೂ ಇತ್ತು. ಆದರೆ ಈಗ ಮತ್ತೊಬ್ಬರ ಜೊತೆ ರಿಲೇಷನ್‌ಶಿಪ್‌ನಲ್ಲಿದ್ದಾರೆ ಎಂದು ಹೇಳಲಾಗುತ್ತಿದೆ. ಆ ನಟಿ ಯಾರು ಎಂದು ಅಭಿಮಾನಿಗಳು ತಲೆ ಕೆಡಿಸಿಕೊಂಡಿದ್ದಾರೆ.

ಇದನ್ನೂ ಓದಿ : Singham Again: ಗಲ್ಲಾಪೆಟ್ಟಿಗೆ ದೋಚಿದ ʻಸಿಂಗಂ ಅಗೇನ್‌ʼ; ಫಸ್ಟ್‌ ಡೇ ಕಲೆಕ್ಷನ್‌ ಎಷ್ಟು ಗೊತ್ತಾ?

ಪ್ಯಾರ್ ಕಾ ಪಂಚನಾಮಾ ಚಿತ್ರದೊಂದಿಗೆ ಪಾದಾರ್ಪಣೆ ಮಾಡಿದ ಕಾರ್ತಿಕ್‌ ಹಲವಾರು ಹಿಟ್‌ ಚಿತ್ರವನ್ನು ನೀಡಿದ್ದಾರೆ. ಹಲವು ದಿಗ್ಗಜರ ಜೊತೆ ನಟಿಸಿ ಸೈ ಎನಿಸಿಕೊಂಡಿದ್ದಾರೆ. ಇತ್ತೀಚೆಗೆ ನಡೆದ ಸಂದರ್ಶನವೊಂದರಲ್ಲಿ ಕಾರ್ತಿಕ್‌ ತಮ್ಮ ಕಷ್ಟದ ದಿನಗಳನ್ನು ನೆನಪಿಸಿಕೊಂಡಿದ್ದಾರೆ. ನಟನೆಯ ಪ್ರಾರಂಭ ಹಂತದಲ್ಲಿ ತಮ್ಮ ಬಳಿ ಹಣ ಇರುತ್ತಿರಲಿಲ್ಲ. ಮನೆ ಬಾಡಿಗೆ ಕಟ್ಟಲು ತುಂಬಾ ಪರೆದಾಡಬೇಕಾದ ಪರಿಸ್ಥಿತಿ ಇತ್ತು ಎಂದು ನೆನಪಿಸಿಕೊಂಡಿದ್ದಾರೆ. ಸದ್ಯ ಅವರ ನಟನೆಯ ಭೂಲ್‌ ಭುಲೈಯಾ ೩ ಬಿಡುಗಡೆಗೊಂಡು ಅದ್ಭುತ ಪ್ರದರ್ಶನ ನೀಡುತ್ತಿದೆ.