ಮುಂಬೈ: ಬಾಲಿವುಡ್ನ (Bollywood) ಟಾಪ್ ಹೀರೋ ಕಾರ್ತಿಕ್ ಆರ್ಯನ್ (Kartik Aaryan) ಸಿನಿಮಾಗಳಲ್ಲಿ ಸಖತ್ ಬ್ಯುಸಿ ಇರುತ್ತಾರೆ. ಸಿನಿಮಾ ಮಾತ್ರವಲ್ಲದೆ ಅವರು ತಮ್ಮನ್ನು ಉದ್ಯಮ ಕ್ಷೇತ್ರದಲ್ಲಿಯೂ ಇತ್ತೀಚಿನ ದಿನಗಳಲ್ಲಿ ತೊಡಗಿಸಿಕೊಂಡದ್ದಾರೆ. ಇದೀಗ ಕಾರ್ತಿಕ್ ಆರ್ಯನ್ ಶಿಕ್ಷಣ ಕ್ಷೇತ್ರದಲ್ಲಿ ಸದ್ದು ಮಾಡುತ್ತಿದ್ದಾರೆ. ಹೌದು ಬರೋಬ್ಬರಿ ಹತ್ತು ವರ್ಷಗಳ ಬಳಿಕ ನಟ ತಮ್ಮ ಇಂಜಿನಿಯರಿಂಗ್ ಪದವಿಯನ್ನು ಪಡೆದುಕೊಂಡಿದ್ದಾರೆ.
ಮುಂಬೈನ ಡಿವೈ ಪಾಟೀಲ್ ವಿಶ್ವವಿದ್ಯಾಲಯದಿಂದ ಕಾರ್ತಿಕ್ ಆರ್ಯನ್ ಇಂಜಿನಿಯರಿಂಗ್ ಪದವಿಯನ್ನು ಪಡೆದುಕೊಂಡಿದ್ದಾರೆ. ಅವರು ತಮ್ಮ ಇನ್ಸ್ಟಾಗ್ರಾಮ್ನಲ್ಲಿ (Instagram) ಶನಿವಾರ ಈ ಒಂದು ಇವೆಂಟ್ನ ವಿಡಿಯೋ ಶೇರ್ ಮಾಡಿದ್ದಾರೆ. ನಟ ವಿದ್ಯಾರ್ಥಿಗಳೊಂದಿಗೆ ಮನಬಿಚ್ಚಿ ಡ್ಯಾನ್ಸ್ ಮಾಡಿದ್ದಾರೆ.
ಡಿವೈ ಪಾಟಿಲ್ ಯುನಿವರ್ಸಿಟಿ ನನಗೆ ನೆನಪುಗಳನ್ನು ಕೊಟ್ಟಿದೆ. ಕನಸು ಕೊಟ್ಟಿದೆ. ಈಗ ನನ್ನ ಡಿಗ್ರಿಯನ್ನೂ ಕೊಟ್ಟಿದೆ. ಆದರೆ ದಶಕಳಗ ನಂತರ ನಾನು ಇದನ್ನು ಪಡೆದಿದ್ದೇನೆ. ಥಾಂಕ್ಯೂ, ವಿಜಯ್ ಪಾಟಿಲ್ ಸರ್, ನನ್ನ ಶಿಕ್ಷಕರು ಹಾಗೂ ಯುವ ಕನಸುಗಾರರೇ ಧನ್ಯವಾದಗಳು. ಮನೆಗೆ ಬಂದಂತಹ ಅನುಭವಾಯಿತು ಎಂದು ನಟ ಬರೆದುಕೊಂಡಿದ್ದಾರೆ.
ವೀಡಿಯೊದಲ್ಲಿ ಕಾರ್ತಿಕ್ ಅವರು ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡುತ್ತಿರುವುದು ಕಂಡು ಬಂದಿದೆ. ಅವರು ಕಾಲೇಜು ಜಾಕೆಟ್ ಧರಿಸಿದ್ದು, ಅದರ ಮೇಲೆ ಕಾರ್ತಿಕ್ ಆರ್ಯನ್ ಎಂದು ಬರೆದಿರುವುದು ಕಾಣಿಸುತ್ತದೆ. ಕಾರ್ತಿಕ್ ವೇದಿಕೆ ಬಂದಾಗ ಭೂಲ್ ಭುಲೈಯಾ 3 ಹಾಡು ಪ್ರಸಾರ ಮಾಡಲಾಯಿತು. ಆಗ ಕಾರ್ತಿಕ್ ಆರ್ಯನ್ ವೇದಿಕೆಯಲ್ಲಿ ಡಾನ್ಸ್ ಮಾಡಿದ್ದಾರೆ. ವಿದ್ಯಾರ್ಥಿಗಳು ಚಪ್ಪಾಳೆ ತಟ್ಟಿ ಸಂಭ್ರಮಿಸಿದ್ದಾರೆ. ಅವರು ತಮ್ಮ ಶಿಕ್ಷಕರೊಂದಿಗೆ ಪ್ರೀತಿಯಿಂದ ಮಾತನಾಡುತ್ತಿರುವುದು ವಿಡಿಯೋದಲ್ಲಿ ಸೆರೆಯಾಗಿದೆ. ಕಾರ್ತಿಕ್ ಕಾಲೇಜು ಬೋರ್ಡ್ಗೆ ಸಹಿ ಮಾಡುವುದನ್ನು ತೋರಿಸಲಾಗಿದೆ.
2011 ರಲ್ಲಿ ಪ್ಯಾರ್ ಕಾ ಪಂಚನಾಮಾದೊಂದಿಗೆ ಕಾರ್ತಿಕ್ ಬಾಲಿವುಡ್ಗೆ ಪಾದಾರ್ಪಣೆ ಮಾಡಿದ್ದರು. ಆಗ ಅವರು ಇಂಜಿನಿಯರಿಂಗ್ ಓದುತ್ತಿದ್ದರು. ಆದಾದ ಒಂದು ದಶಕಗಳ ಬಳಿಕ ಬಾಲಿವುಡ್ನಲ್ಲಿ ಬ್ಯುಸಿಯಾಗಿದ್ದರು. ಇದೀಗ ಅವರು ತಮ್ಮ ಪದವಿಯನ್ನು ಪೂರ್ಣಗೊಳಿಸಿದ್ದಾರೆ. ಇತ್ತೀಚೆಗೆ ಕಾರ್ತಿಕ್ ಆರ್ಯನ್ ನಟನೆಯ ಭೂಲ್ ಭುಲಯ್ಯ 3 ಬಿಡುಗಡೆಯಾಗಿದೆ. ಚಿತ್ರದಲ್ಲಿ ವಿದ್ಯಾ ಬಾಲನ್, ಮಾಧುರಿ ದೀಕ್ಷಿತ್ ಸೇರಿದಂತೆ ಹಲವು ತಾರಾಗಣವೇ ಇದೆ. ವಿಶ್ವಾದ್ಯಂತ 300 ಕೋಟಿ ಕ್ಲಬ್ ಸೇರಿದೆ.
ಈ ಸುದ್ದಿಯನ್ನೂ ಓದಿ : Kartik Aaryan: ಮತ್ತೆ ಪ್ರೀತಿಯಲ್ಲಿ ಬಿದ್ರಾ ಕಾರ್ತಿಕ್ ಆರ್ಯನ್? ಪ್ರೇಯಸಿಯ ಹೆಸರು ರಿವೀಲ್!