ಈ ಬಾರಿಯ ಬಿಗ್ ಬಾಸ್ ಕನ್ನಡ ಸೀಸನ್ 11 (Bigg Boss Kannada 11) ಹಿಂದಿನ ಸೀಸನ್ಗಳಂತೆ ಇಲ್ಲ. ಈ ಸೀಸನ್ನಲ್ಲಿ ಕಟ್ಟುನಿಟ್ಟಿನ ರೂಲ್ಸ್, ಸ್ಪರ್ಧಿಗಳು ಆಡುವ ಮಾತು, ಬಳಸುವ ಭಾಷೆ ಇವೆಲ್ಲದಕ್ಕಿಂತ ಹೆಚ್ಚಾಗಿ ಬಿಗ್ ಬಾಸ್ ಎಂದರೆ ಭಯ ಕೂಡ ಇಲ್ಲ ಎಂಬ ಮಾತು ವೀಕ್ಷಕರಿಂದ ಕೇಳಿಬರುತ್ತಿದೆ. ತಮಗೆ ಬೇಕಾದಂತೆ ಕೆಲ ಸ್ಪರ್ಧಿಗಳು ಆಡುತ್ತಿದ್ದಾರೆ, ರೂಲ್ಸ್ ಬ್ರೇಕ್ ಮಾಡುತ್ತಾರೆ, ಬಿಗ್ ಬಾಸ್ಗೆನೇ ಅವಮಾನ ಮಾಡುತ್ತಾರೆ. ಈ ವಾರದಲ್ಲಿ ಕೂಡ ಬಿಗ್ ಬಾಸ್ ಬಗ್ಗೆ ಅನುಮಾನ ವ್ಯಕ್ತಪಡಿಸಿದ ಘಟನೆ ನಡೆದಿದೆ.
10ನೇ ವಾರದ ಪಂಚಾಯಿತಿಗೆ ಬಂದಿರುವ ಕಿಚ್ಚ ಸುದೀಪ್, ಈ ಗೇಮ್ನ ತುಂಬಾ ಚೆನ್ನಾಗಿ ಅರ್ಥ ಮಾಡಿಕೊಂಡಿದ್ದೀನಿ ಅಂತಾ ಬ್ರಮೆಯಲ್ಲಿ ಇರೋರಿಗೆ.., ಬಿಗ್ಬಾಸ್ ಮೇಲಿನ ನಿರ್ಧಾರಗಳ ಮೇಲೆ ರೆಸ್ಪೆಕ್ಟ್ ಇಲ್ಲ ಎಂದು ಹೇಳಿದ್ದಾರೆ. ಇಲ್ಲಿ ಸುದೀಪ್ ಮಾತನಾಡಿರುವುದು ತ್ರಿವಿಕ್ರಮ್ ಬಗ್ಗೆ. ಕಳೆದ ವಾರ ಶೋಭಾ ಶೆಟ್ಟಿ ಶೋ ಕ್ವಿಟ್ ಮಾಡಿ ಹೊರ ಹೋಗಿದ್ದರು. ಈ ವೇಳೆ ತ್ರಿವಿಕ್ರಮ್ ಅವರು ಗೌತಮಿ ಜಾಧವ್ ಜೊತೆ ಆಡಿರುವ ಮಾತುಗಳಿಗೆ ಸುದೀಪ್ ಕೆರಳಿ ಕೆಂಡವಾಗಿದ್ದಾರೆ.
ಇಂದಿನ ಪಂಚಾಯ್ತಿಯಲ್ಲಿ ಸುದೀಪ್ ಅವರು ತ್ರಿವಿಕ್ರಮ್ಗೆ ಪ್ರಶ್ನೆ ಮಾಡಿದ್ದಾರೆ. ಇಬ್ಬರು ಜಡ್ಜಸ್ ಆಫ್ ಬಿಗ್ಬಾಸ್, ಶೋಭಾ ಅವರು ಬಿಗ್ ಬಾಸ್ ಮನೆಯಿಂದ ಯಾಕೆ ಹೋದ್ರು ಅಂತ ತ್ರಿವಿಕ್ರಮ್ಗೆ ಸುದೀಪ್ ಕೇಳಿದ್ದಾರೆ. ಆಗ ತ್ರಿವಿಕ್ರಮ್ ನಾನು ಕನ್ಫ್ಯೂಷನ್ನಲ್ಲಿ ಇದ್ದೇ ಅಣ್ಣ ಅಂತ ಹೇಳಿದ್ದಾರೆ. ಆಗ ಸುದೀಪ್ ಅವರು ನಿಮ್ಮ ಕಣ್ಮುಂದೆನೇ ಅದೇಲ್ಲಾ ಆಗಿದೆ ಏನಕ್ಕೆ ಕನ್ಫ್ಯೂಷನ್ ನಿಮಗೆ ಅಂತ ಹೇಳಿದ್ದಾರೆ.
ಆಡಿದ ಮಾತಿನಂತೆ ನಡೆದುಕೊಳ್ತಾರಾ ತ್ರಿವಿಕ್ರಮ್?
— Colors Kannada (@ColorsKannada) December 7, 2024
ವಾರದ ಕತೆ ಕಿಚ್ಚನ ಜೊತೆ | ಇಂದು ರಾತ್ರಿ 9#BiggBossKannada11 #BBK11 #HosaAdhyaya #ColorsKannada #BannaHosadaagideBandhaBigiyaagide #ಕಲರ್ಫುಲ್ಕತೆ #colorfulstory #Kicchasudeepa #BBKPromo pic.twitter.com/xUFMzKujLG
ಆಗ ತ್ರಿವಿಕ್ರಮ್ ಅವರು ಕೋಪ ಮಾಡಿಕೊಳ್ಳಲ್ಲ ಅಂದರೆ ಹೇಳುತ್ತೀನಿ. ನಿಮಗೆ ತಲೆ ತಗ್ಗಿಸಲು ರೆಡಿ ಎಂದಿದ್ದಾರೆ. ಅದಕ್ಕೆ ಕಿಚ್ಚ ಅವರು. ನಿಮ್ಮನ್ನ ಕೇಳಿ ನಾನು ಕೋಪ ಮಾಡಿಕೊಳ್ಳಲು ಬೇಕಾಗಿಲ್ಲ. ನಾನು ಯಾರಗೂ ನನ್ನ ಮುಂದೆ ತಲೆ ತಗ್ಗಿಸಬೇಕು ಅಂತ ಹೇಳೋ ಮಗನೇ ಅಲ್ಲ ಎಂದಿದ್ದಾರೆ. ಇದಕ್ಕೆ ತ್ರಿವಿಕ್ರಮ್ ಅವರು ಹಾಗೇನಾದರೂ ಬಿಗ್ ಬಾಸ್ಗೆ ನಾನು ಅಗೌರವ ಮಾಡಿದ್ರೆ ಈ ಮನೆಯಿಂದ ಹೋಗಲು ರೆಡಿ ಅಣ್ಣ ಅಂತ ಹೇಳಿದ್ದಾರೆ. ಆಗ ಕಿಚ್ಚ ಬಿಗ್ಬಾಸ್ ಅಗೌರವ ಕೊಟ್ಟಿದ್ದೀರಿ ನೀವು ಎಂದು ಕೋಪಗೊಂಡಿದ್ದಾರೆ.
BBK 11: ವಾರ್ನಿಂಗ್ ಕೊಟ್ಟ ಸುದೀಪ್: ಮೋಕ್ಷಿತಾ ಮಾತ್ರವಲ್ಲ, ಇಂದು ಈ ಸ್ಪರ್ಧಿಗೂ ಇದೆ ಕಿಚ್ಚನ ಕ್ಲಾಸ್