ಬಿಗ್ ಬಾಸ್ ಕನ್ನಡ ಸೀಸನ್ 11 ರಲ್ಲಿ (Bigg Boss Kannada 11) ಕಳೆದ ವಾರ ವೀಕೆಂಡ್ನಲ್ಲಿ ಕಿಚ್ಚ ಸುದೀಪ್ ಬಂದಿರಲಿಲ್ಲ. ತಾರಿಯ ನಿಧನದ ಕಾರಣದಿಂದ ಗೈರಾಗಿದ್ದರು. ಇವರ ಬದಲು ಶನಿವಾರ ಯೋಗರಾಜ್ ಭಟ್ ಮತ್ತು ಭಾನುವಾರ ಸೃಜನ್ ಲೋಕೇಶ್ ಮನೆಯೊಳಗೆ ಬಂದು ಕೆಲ ವಿಚಾರದ ಬಗ್ಗೆ ಸ್ಪರ್ಧಿಗಳಿಗೆ ಮನಮುಟ್ಟಿಸಿದ್ದರು. ಇದೀಗ ಈ ವಾರ ವಾರದ ಕತೆ ಕಿಚ್ಚನ ಜೊತೆ ಎಪಿಸೋಡ್ ನಡೆಯಲಿದೆ ಎನ್ನಲಾಗಿದೆ.
ವಾರದ ಕತೆಯಲ್ಲಿ ಸುದೀಪ್ ಕಳೆದ ಎರಡು ವಾರದ ವಿಚಾರ ತೆಗೆದುಕೊಳ್ಳುತ್ತಾರ ಅಥವಾ ಈ ವಾರದ ಬಗ್ಗೆ ಮಾತ್ರ ಮಾತನಾಡುತ್ತಾ ಎಂಬುದು ನೋಡಬೇಕಿದೆ. ಮುಖ್ಯವಾಗಿ ಕಳೆದ ವಾರ ಬಹಳಷ್ಟು ಗಲಾಟೆಗೆ ಕಾರಣವಾದ ಉಗ್ರಂ ಮಂಜು ಮತ್ತು ತ್ರಿವಿಕ್ರಮ್ ವಿಚಾರದ ಬಗ್ಗೆ ಸುದೀಪ್ ಏನು ಹೇಳುತ್ತಾರೆ ನೋಡಬೇಕಿದೆ.
ಹಾಗೆಯೆ ತ್ರಿವಿಕ್ರಮ್ ಅವರಿಗೆ ಈ ಶೋಗೆ ಬರುವ ಮುನ್ನವೇ ಬಿಗ್ ಬಾಸ್ ಮನೆಯೊಳಗೆ ಬರುವ ಸ್ಪರ್ಧಿಗಳ ಲಿಸ್ಟ್ ಸಿಕ್ಕಿತ್ತಂತೆ. ಅವರು ಎಲ್ಲ ಇನ್ಸ್ಟಾಗ್ರಾಮ್ ಅಕೌಂಟ್ ನೋಡಿ, ಅವರಿಗೆ ಎಷ್ಟೆಲ್ಲ ಫಾಲೋವರ್ಸ್ ಇದ್ದಾರೆಂದು ತಿಳಿದು ಒಳಗೆ ಬಂದಿದ್ದಾರಂತೆ ಎಂದು ಮೋಕ್ಷಿತಾ ಪೈ ಹೇಳಿದ್ದರು. ಇದರ ಬಗ್ಗೆಯೂ ಇಂದು ಟಾಕ್ ನಡೆಯಲಿದೆ.
ಜೊತೆಗೆ ಮನೆಯ ಲಕ್ಷುರಿ ಬಜೆಟ್ ಟಾಸ್ಕ್ನಲ್ಲಿ ಉಗ್ರಂ ಮಂಜು ಅವರು ಪಕ್ಷಪಾತ ಮಾಡಿದ್ದಾರೆ ಎಂದು ಶಿಶಿರ್, ತ್ರಿವಿಕ್ರಮ್ ಹಾಗೂ ಭವ್ಯಾ ಆರೋಪಿಸಿದ್ದರು. ಈ ಸುದ್ದಿಯನ್ನು ಸುದೀಪ್ ಎತ್ತಬಹುದು. ಇದುಬಿಟ್ಟರೆ ಈ ವಾರ ಮನೆಯಲ್ಲಿ ಅನೇಕ ಎಮೋಷನಲ್ ಘಟನೆ ನಡೆಯಿತು. ಸ್ಪರ್ಧಿಗಳಿಗೆ ಮನೆಯಿಂದ ಪತ್ರ ಬಂದಿತ್ತು. ಹಾಗೆಯೆ ತಮ್ಮ ಮನದಾಳದ ಮಾತಿನ ಬಗ್ಗೆ ಹೇಳಲು ಬಿಗ್ ಬಾಸ್ ಒಂದು ಅವಕಾಶ ನೀಡಿದ್ದರು. ಈ ಕುರಿತು ಸುದೀಪ್ ಮಾತನಾಡುವ ಸಂಭವವಿದೆ.
12 ಮಂದಿ ನಾಮಿನೇಷನ್:
ಈ ವಾರ ಕೇವಲ ಇಬ್ಬರು ಸ್ಪರ್ಧಿಗಳು ಮಾತ್ರ ಸೇಫ್ ಆಗಿದ್ದಾರೆ. ಉಳಿದ 12 ಸದಸ್ಯರು ನಾಮಿನೇಟ್ ಆಗಿದ್ದು, ಇದರಲ್ಲಿ ಕ್ಯಾಪ್ಟನ್ ಹನುಮಂತ ಹೆಸರು ಕೂಡ ಇದೆ. ಗೌತಮಿ ಮತ್ತು ತ್ರಿವಿಕ್ರಮ್ ಬಿಟ್ಟು ಭವ್ಯಾ ಗೌಡ, ಚೈತ್ರಾ ಕುಂದಾಪುರ, ಮೋಕ್ಷಿತಾ ಪೈ, ತುಕಾಲಿ ಮಾನಸ, ಉಗ್ರಂ ಮಂಜು, ಅನುಷಾ ರೈ, ಧರ್ಮ ಕೀರ್ತಿರಾಜ್, ಐಶ್ವರ್ಯಾ, ಧನರಾಜ್, ಶಿಶರ್ ಶಾಸ್ತ್ರಿ ನಾಮಿನೇಟ್ ಆಗಿದ್ದಾರೆ. ಹಾಗೆಯೆ ಕ್ಯಾಪ್ಟನ್ ಹನುಮಂತ ಆಯ್ಕೆಯ ಅನುಸಾರ ಗೋಲ್ಡ್ ಸುರೇಶ್ ಅವರು ನೇರ ನಾಮಿನೇಟ್ ಆಗಿದ್ದರು. ಜೊತೆಗೆ ಮನೆಯಿಂದ ಹೊರಹೋಗುವಾಗ ವಿಶೇಷ ಅಧಿಕಾರದಿಂದ ಹಂಸಾ ಅವರು ಹನುಮಂತ ಅವರನ್ನು ನಾಮಿನೇಟ್ ಮಾಡಿದ್ದ ಕಾರಣಕ್ಕೆ ಅವರು ಕೂಡ ಈ ಲಿಸ್ಟ್ನಲ್ಲಿ ಇದ್ದಾರೆ.
BBK 11: ಬಿಗ್ ಬಾಸ್ ಮನೆಯಲ್ಲಿ ಮೋಕ್ಷಿತಾಗೆ ಬಂತು ವಿಡಿಯೋ ಮೆಸೇಜ್: ಸ್ಪರ್ಧಿಗಳು ಶಾಕ್