ಬಿಗ್ ಬಾಸ್ (Bigg Boss Kannada 11) ಮನೆಯಲ್ಲಿ ಈ ವಾರ ಅನೇಕ ಬೆಳವಣಿಗೆಗಳು ನಡೆದಿವೆ. ಮೊದಲಿಗೆ ಎರಡು ತಂಡಗಳ ಟಿವಿ ಚಾನೆಲ್ ಮೂಲಕ ಶುರುವಾರ ವಾರ ಕೊನೆಯಲ್ಲಿ ಸೋತ ತಂಡದ ಸದಸ್ಯೆ ಮನೆಯ ಕ್ಯಾಪ್ಟನ್ ಆಗುವ ಮೂಲಕ ಕೊನೆಗೊಂಡಿತು. ಬಹಶಃ ಬಿಗ್ ಬಾಸ್ ಇತಿಹಾಸದಲ್ಲಿ ಈ ರೀತಿ ನಡೆದಿದ್ದು ಇದೇ ಮೊದಲಿರಬೇಕು. ಇದೀಗ ವಾರದ ಪಂಚಾಯಿತಿ ನಡೆಸಲು ಇಂದು ಕಿಚ್ಚ ಸುದೀಪ್ ವಾರದ ಕತೆ ಕಿಚ್ಚನ ಜೊತೆ ಮೂಲಕ ಬಂದಿದ್ದಾರೆ.
ಪಂಚಾಯಿತಿಗೆ ಶುರುವಾಗುವುದಕ್ಕು ಮುನ್ನವೇ ಕಿಚ್ಚ ಸುದೀಪ್ ಇಬ್ಬರು ಸ್ಪರ್ಧಿಗಳ ಬಗ್ಗೆ ಮಾತನಾಡಿದ್ದು, ಇವರಿಬ್ಬರಿಗೆ ಖಡಕ್ ಕ್ಲಾಸ್ ತೆಗೆದುಕೊಳ್ಳುವುದು ಖಚಿತವಾಗಿದೆ. ವೇದಿಕೆಗೆ ಖಡಕ್ ಆಗಿ ಎಂಟ್ರಿ ಕೊಟ್ಟಿರುವ ಸುದೀಪ್, ತಮ್ಮ ಇಂಟ್ರೋದಲ್ಲಿ ಈ ವಾರ ಚರ್ಚೆ ಆಗಲಿರುವ ವಿಚಾರಗಳ ಬಗ್ಗೆ ವೀಕ್ಷಕರಿಗೆ ಸುಳಿವು ಕೊಟ್ಟಿದ್ದಾರೆ.
‘ಅರ್ಥ ಆಯ್ತಾ, ಅರ್ಥ ಆಯ್ತಾ ಎಂದು ಊರಿಗೆಲ್ಲ ಕೇಳ್ತಿರೋ ಒಬ್ಬರಿಗೆ ಇನ್ನೂ ಬಿಗ್ಬಾಸ್ ಅನ್ನೋ ರಿಯಲ್ ಗೇಮ್ ಅರ್ಥ ಆಗಿಲ್ಲ. ಈ ಗೇಮ್ನ ತುಂಬಾ ಚೆನ್ನಾಗಿ ಅರ್ಥ ಮಾಡಿಕೊಂಡಿದ್ದೀನಿ ಅಂತಾ ಬ್ರಮೆಯಲ್ಲಿ ಇರೋರಿಗೆ.., ಬಿಗ್ಬಾಸ್ ಮೇಲಿನ ನಿರ್ಧಾರಗಳ ಮೇಲೆ ರೆಸ್ಪೆಕ್ಟ್ ಇಲ್ಲ ಎಂದು ಸುದೀಪ್ ಹೇಳಿದ್ದಾರೆ. ಇಲ್ಲಿ ಸುದೀಪ್ ಅವರು ಮೊದಲಿಗೆ ಮೋಕ್ಷಿತಾ ಪೈ ಬಗ್ಗೆ ಮಾತನಾಡಿದ್ದಾರೆ. ನಂತರ ವಾರದ ಮಧ್ಯೆ ಗೌತಮಿ ಜೊತೆ ತ್ರಿವಿಕ್ರಮ್ ಮಾತನಾಡಿದ ಕೆಲ ವಿಚಾರಗಳ ಬಗ್ಗೆ ಹೇಳಿದ್ದಾರೆ.
ಅರ್ಥಗಳ ನಡುವೆಯೂ ಗೊಂದಲ!
— Colors Kannada (@ColorsKannada) December 7, 2024
ವಾರದ ಕತೆ ಕಿಚ್ಚನ ಜೊತೆ | ಇಂದು ರಾತ್ರಿ 9#BiggBossKannada11 #BBK11 #HosaAdhyaya #ColorsKannada #BannaHosadaagideBandhaBigiyaagide #ಕಲರ್ಫುಲ್ಕತೆ #colorfulstory #Kicchasudeepa #BBKPromo pic.twitter.com/8DFmZLMD3R
ಮೋಕ್ಷಿತಾ ಪೈ ಕ್ಯಾಪ್ಟನ್ಸಿ ಟಾಸ್ಕ್ ಕ್ವಿಟ್ ಮಾಡಿದ ಬಗ್ಗೆ ಸುದೀಪ್ ಇಂದು ಚರ್ಚೆ ಮಾಡಲಿದ್ದಾರೆ. ಮುಖ್ಯವಾಗಿ ಗೌತಮಿ ಮತ್ತು ಮಂಜು ವಿಚಾರವನ್ನು ವೈಯಕ್ತಿಕವಾಗಿ ತೆಗೆದುಕೊಂಡು ಜನರ ವೋಟ್ಗೆ ಬೆಲೆ ಕೊಡದೆ ಹೊರಗುಳಿದಿದ್ದು ಸುದೀಪ್ಗೆ ಕೋಪ ತರಿಸಿದಂತಿದೆ. ಇನ್ನೊಂದೆಡೆ ಕಳೆದ ವಾರ ಶೋಭಾ ಶೆಟ್ಟಿ ಶೋ ಕ್ವಿಟ್ ಮಾಡಿ ಹೊರ ಹೋಗಿದ್ದರು. ಈ ವೇಳೆ ತ್ರಿವಿಕ್ರಮ್ ಆಡಿರುವ ಮಾತುಗಳಿಗೂ ಸುದೀಪ್ ಕೆರಳಿ ಕಂಡವಾದಂತಿದೆ. ಬಿಗ್ ಬಾಸ್ ಬಗ್ಗೆ ಹಗುರವಾಗಿ ಮಾತನಾಡಿರುವ ತ್ರಿವಿಕ್ರಮ್ಗೂ ಇಂದು ಕ್ಲಾಸ್ ತೆಗೆದುಕೊಳ್ಳಲಿದ್ದಾರೆ.
BBK 11: ಜನರ ತೀರ್ಪಿಗೆ ಮತ್ತೊಮ್ಮೆ ಧಕ್ಕೆ: ಇಂದು ಮೋಕ್ಷಿತಾಗೆ ಕಿಚ್ಚನ ಕ್ಲಾಸ್ ಖಚಿತ