Friday, 29th November 2024

BBK 11: ವೀಕೆಂಡ್​ನಲ್ಲಿ ಚೈತ್ರಾರ ಮೈಚಳಿ ಬಿಡಿಸಿದ ಸುದೀಪ್ ಎಪಿಸೋಡ್​ಗೆ ದಾಖಲೆಯ ಟಿಆರ್​​ಪಿ

BBK 11 TRP

ಬಿಗ್ ಬಾಸ್ ಕನ್ನಡ ಸೀಸನ್ 11 (Bigg Boss Kannada 11) ಅರ್ಧಶತಕ ಪೂರೈಸಿ ಮುನ್ನುಗ್ಗುತ್ತಿದೆ. ಪ್ರತೀ ವೀಕೆಂಟ್ ಕಿಚ್ಚ ಸುದೀಪ್ ಬಂದು ವಾರದ ಕತೆಯನ್ನು ಮಾತನಾಡುತ್ತಾರೆ. ಆದರೆ, ಕಳೆದ ಕೆಲವು ವಾರಗಳಿಂದ ವಾರದ ಕತೆ ಕಿಚ್ಚ ಜೊತೆ ಹಾಗೂ ಭಾನುವಾರ ನಡೆಯುವ ಸೂಪರ್ ಸಂಡೇ ವಿಥ್ ಸುದೀಪ್ ಎಪಿಸೋಡ್​ಗೆ ದೊಡ್ಡ ಮಟ್ಟದ ಟಿಆರ್​ಪಿ ಇರಲಿಲ್ಲ. ಆದರೀಗ ಬಿಗ್ ಬಾಸ್ ಭರ್ಜರಿ ಕಮ್​ಬ್ಯಾಕ್ ಮಾಡಿದೆ. 47ನೇ ವಾರದ ಡೇಟಾ ಮಾಹಿತಿ ಹೊರಬಿದ್ದಿದ್ದು, ಬಿಗ್ ಬಾಸ್​ಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ.

ಬಿಗ್ ಬಾಸ್​ಗೆ ಈ ಹಿಂದೆ 46ನೇ ವಾರದ ಟಿಆರ್​ಪಿ ಡೌನ್ ಆಗಿತ್ತು. ವಾರದ ದಿನಗಳಲ್ಲಿ ಈ ಶೋಗೆ 6.6 ಟಿಆರ್‌ಪಿ ಸಿಕ್ಕಿದ್ದರೆ, ಶನಿವಾರ 8.0 ಮತ್ತು ಭಾನುವಾರ 8.5 ಟಿವಿಆರ್‌ ಪಡೆದುಕೊಂಡಿತ್ತು. ಈ ಮೂಲಕ ಕಿಚ್ಚನ ಪಂಚಾಯ್ತಿಗೆ ಕೊಂಚ ಡಿಮಾಂಡ್‌ ಕಡಿಮೆ ಆದಂತೆ ಕಂಡುಬಂತು. ಆದರೆ, ಇದೀಗ 47ನೇ ವಾರದಲ್ಲಿ ಬಿಗ್ ಬಾಸ್ ಪಿಕ್-ಅಪ್ ಕಂಡಿದೆ.

ಈ ವಾರ ಚೈತ್ರಾ ಅವರು ಅನಾರೋಗ್ಯದ ಕಾರಣ ಹೊರ ಹೋಗಿದ್ದರು. ಆಸ್ಪತ್ರೆಯಿಂದ ಅವರು ಕೆಲ ವಿಚಾರ ತಿಳಿದುಕೊಂಡು ಬಂದು ಮನೆಮಂದಿಗೆ ಹೇಳಿದ್ದರು. ಇದು ಸುದೀಪ್ ಅವರಿಗೆ ಕೋಪವನ್ನು ತರಿಸಿತ್ತು. ವೀಕೆಂಡ್​ನಲ್ಲಿ ಈ ವಿಚಾರವಾಗಿ ಸುದೀಪ್ ಚೈತ್ರಾ ಅವರಿಗೆ ಸರಿಯಾಗಿ ಕ್ಲಾಸ್ ತೆಗೆದುಕೊಂಡಿದ್ದರು. ಇಡೀ ಸಂಪೂರ್ಣ ಎಪಿಸೋಡ್ನ ಅವರ ವಿಚಾರವೇ ತುಂಬಿತ್ತು. ಆ ವಾರದ ದಿನಗಳಲ್ಲಿ 8 (ನಗರ ಭಾಗ), ಶನಿವಾರ 9.5 (ನಗರ ಭಾಗ) ಹಾಗೂ ಭಾನುವಾರ 10.0 (ನಗರ ಭಾಗ) ಸಿಕ್ಕಿದೆ. ಇದು ಸುದೀಪ್ ಅವರ ನಿರೂಪಣೆಗೆ ಇರುವ ಗತ್ತು ಏನು ಎಂಬುದು ಸಾಬೀತಾಗಿದೆ.

ಇನ್ನು ಧಾರಾವಾಹಿ ವಿಚಾರಕ್ಕೆ ಬರೋದಾದರೆ ಪುಟ್ಟಕ್ಕನ ಮಕ್ಕಳು ಧಾರಾವಾಹಿಗೆ ಮತ್ತದೆ ಬಿಗ್ ಶಾಕ್ ಆಗಿದೆ. ಎರಡನೇ ಸ್ಥಾನಕ್ಕೆ ಕುಸಿದಿದ್ದ ಈ ಧಾರಾವಾಯಿ ಮೇಲೆದ್ದಿಲ್ಲ. ಸಮಯ ಬದಲಾವಣೆಯ ನಂತರ ಟಿಆರ್​ಪಿ ಕುಸಿಯುತ್ತಾ ಬರುತ್ತಿದೆ. 47ನೇ ವಾರದಲ್ಲಿ 8.4 ಟಿಆರ್‌ಪಿ  ಟಿವಿಆರ್ ಸಿಕ್ಕಿದೆಯಷ್ಟೆ. ಲಕ್ಷ್ಮೀ ನಿವಾಸ ಧಾರಾವಾಹಿ ಮೊದಲ ಸ್ಥಾನದಲ್ಲಿ ಭದ್ರವಾಗಿದೆ. ಇದು 8.9 ಟಿಆರ್‌ಪಿ ಪಡೆದುಕೊಂಡಿದೆ. ಜೀ ಕನ್ನಡದಲ್ಲಿ ಪ್ರಸಾರ ಆಗುವ ಅಮೃತಧಾರೆ ಸೀರಿಯಲ್ ಸಹ ವೀಕ್ಷಕರನ್ನು ಸೆಳೆಯುತ್ತಿದೆ. ಈ ಸೀರಿಯಲ್‌ ಈ ವಾರ 8.3 ಟಿಆರ್‌ಪಿ ಪಡೆದುಕೊಳ್ಳುವ ಮೂಲಕ ಟಾಪ್‌ 10ರಲ್ಲಿ ಮೂರನೇ ಸ್ಥಾನದಲ್ಲಿದೆ.

BBK 11: ಬಿಗ್ ಬಾಸ್​ನಲ್ಲಿ ಬಿಗ್ ಟ್ವಿಸ್ಟ್: ಕ್ಯಾಪ್ಟನ್ಸಿ ಓಟದಿಂದ ರಜತ್-ತ್ರಿವಿಕ್ರಮ್ ಔಟ್