ಬಿಗ್ ಬಾಸ್ (Bigg Boss) ಮನೆಯಲ್ಲಿ ಸ್ನೇಹ-ಪ್ರೀತಿ, ಅಣ್ಣ-ತಂಗಿ ಸಂಬಂಧ ಹುಟ್ಟಿಕೊಳ್ಳುವುದು ಕಾಮನ್. ಆದರೆ, ಅದು ಆಟದ ಮೇಲೆ ಯಾವುದೇ ಪರಿಣಾಮ ಬೀಳಬಾರದು. ಮುಖ್ಯವಾಗಿ ಪ್ರೀತಿಯಲ್ಲಿ ಬಿದ್ದವರು ಅವರದ್ದೇ ಲೋಕದಲ್ಲಿ ಮುಳುಗಿ ಹೋಗಿ ಮನೆಗೆ ಬಂದ ಉದ್ದೇಶವನ್ನೇ ಮರೆತು ಹೋದರೆ ಆಗ ಇವರನ್ನು ಎಚ್ಚರಿಸಲು ಒಂದು ಖಡಕ್ ಮಾತು ಬೇಕಾಗುತ್ತದೆ. ಈಗ ಅಂತಹದೆ ಕೆಲಸವನ್ನು ಕಿಚ್ಚ ಸುದೀಪ್ ಕಳೆದ ವೀಕೆಂಡ್ನಲ್ಲಿ ಒಬ್ಬರಿಗೆ ಮಾಡಿದ್ದಾರೆ.
ಬಿಗ್ ಬಾಸ್ ಪ್ರಾರಂಭ ಆದ ಹೊಸತರಲ್ಲಿ ಐಶ್ವರ್ಯ ಅವರು ಧರ್ಮ ಅವರ ಜೊತೆ ಸಖತ್ ಕ್ಲೋಸ್ ಆಗಿದ್ದರು. ಬಳಿಕ ಧರ್ಮಾ ಅವರು ಅನುಷಾ ಜೊತೆ ಸೇರಿದರು. ಬಳಿಕ ಐಶ್ವರ್ಯಾ ಅವರು ಶಿಶಿರ್ ಜೊತೆ ಹೆಚ್ಚು ಕಾಣಿಸಿಕೊಂಡರು. ಬಿಗ್ ಬಾಸ್ ಮನೆಯಲ್ಲಿರುವ ಐಶ್ವರ್ಯ ಹಾಗೂ ಶಿಶಿರ್ ಮಧ್ಯ ಲವ್ ಪ್ರಾರಂಭವಾಗಿದೆ ಎಂಬ ಗಾಸಿಪ್ ಕೂಡ ಹರಿದಾಡಿತ್ತು. ಕೆಲ ವಾರಗಳ ಹಿಂದೆ ಕೂಡ ಐಶ್ವರ್ಯ ಹಾಗೂ ಶಿಶಿರ್ ಒಂದೇ ಬೆಡ್ ಶೀಟ್ ಹೊದ್ದುಕೊಂಡು ಒಂದೇ ಕಾಫಿ ಕಪ್ ನಲ್ಲಿ ಜೊತೆಯಲ್ಲಿಯೇ ಕಾಫಿ ಕುಡಿದಿರುವ ದೃಶ್ಯ ವೈರಲ್ ಆಗಿತ್ತು.
ಶಿಶಿರ್ ಅವರು ಐಶ್ವರ್ಯಾ ಜೊತೆಗೆನೇ ಹೆಚ್ಚಾಗಿ ಕಾಣಿಸಿಕೊಂಡಿದ್ದರಿಂದ ಟಾಸ್ಕ್ನಲ್ಲಿ ಭಾಗವಹಿಸುವಿಕೆ ಕಮ್ಮಿ ಆಗಿತ್ತು. ಈ ಕುರಿತು ಕಿಚ್ಚ ಸುದೀಪ್ ವಾರದ ಕತೆಯಲ್ಲಿ ಒಂದು ಉದಾಹರಣೆ ಕೊಟ್ಟು ಇವರಿಗೆ ಎಚ್ಚರಿಕೆ ನೀಡಿದ್ದಾರೆ. ಶಿಶಿರ್ ಕಳೆದ ವಾರ ಸುದೀಪ್ರ ಕೆಂಪೇಗೌಡ ಸಿನಿಮಾ ಮಾದರಿಯಂತೆ ಮೀಸೆ ಬಿಟ್ಟಿದ್ದರು. ಇದನ್ನು ನೋಡಿದ ಸುದೀಪ್, ಕೆಂಪೇಗೌಡ ಸಿನಿಮಾದಲ್ಲಿ ನಿಮಗೆ ಇಷ್ಟವಾಗಿದ್ದು ಏನು? ಎಂದು ಪ್ರಶ್ನಿಸಿದರು. ಅದಕ್ಕೆ ಶಿಶಿರ್, ಕೆಂಪೇಗೌಡನ ಗತ್ತು ಇಷ್ಟವಾಯ್ತು ಎಂದರು.
ಇದಕ್ಕೆ ಸುದೀಪ್ ಅವರು ಆ ಸಿನಿಮಾದಲ್ಲಿ ಆಕ್ಷನ್ ಎಷ್ಟಿತ್ತು, ರೊಮ್ಯಾನ್ಸ್ ಎಷ್ಟಿತ್ತು? ಎಂದರು. 80% ಆಕ್ಷನ್ ಇತ್ತು, 20% ರೊಮ್ಯಾನ್ಸ್ ಇತ್ತು ಎಂದರು ಶಿಶಿರ್. ಒಂದು ವೇಳೆ ಕೆಂಪೇಗೌಡ ಸಿನಿಮಾದಲ್ಲಿ 80% ರೊಮ್ಯಾನ್ಸ್, 20% ಆಕ್ಷನ್ ಇದ್ದರೆ ನಿಮಗೆ ಇಷ್ಟವಾಗುತ್ತಾ ಎಂದು ಪ್ರಶ್ನೆ ಮಾಡಿದರು. ಅದಕ್ಕೆ ಇಲ್ಲ ಎಂದರು ಶಿಶಿರ್. ನಿಮ್ಮ ಕತೆಯೂ ಈಗ ಅದೇ ರೀತಿ ಆಗಿದೆ. ನಿಮ್ಮ ರೊಮ್ಯಾನ್ಸ್ ಹೆಚ್ಚಾಗಿದೆ ಆಕ್ಷನ್ ಕಡಿಮೆ ಆಗಿದೆ ಎಂದು ಹೇಳಿದ್ದಾರೆ.
ಈ ವಾರ ಬಿಗ್ ಬಾಸ್ ಮನೆಯಲ್ಲಿ ನಿಮ್ಮ ಆಟ ಎಲ್ಲೂ ಕಾಣಲಿಲ್ಲ. ಯಾಕೆ ಈ ತರ ಆಯ್ತು. ಅದು ಮೀಸೆ ಬಿಟ್ಟ ಮೇಲೆ ಆಟ ಬದಲಾಗಿದೆ. ಎಲ್ಲೂ ನಿಮ್ಮ ಆಟ ಕಾಣ್ತಿಲ್ಲ ಎಂದು ಸುದೀಪ್ ಶಿಶಿರ್ಗೆ ಹೇಳಿದ್ದಾರೆ. ಐಶ್ವರ್ಯಾ ಅವರಿಗೂ ಹೇಳಿದ ಸುದೀಪ್, ನೀವು ಗೇಮ್ ಅನ್ನು ಮರೆತೇ ಬಿಟ್ಟಿದ್ದೀರಿ. ನೀವು ಅದೆಷ್ಟು ನಿಮ್ಮಲ್ಲೆ ಕಳೆದುಹೋಗಿದ್ದೀರಿ ಎಂದರೆ ಚೈತ್ರಾ ಅವರು ನಿಮ್ಮ ಕಣ್ಣೆದುರೇ ನಿಮ್ಮ ಹಣ ತೆಗೆದುಕೊಂಡು ಹೋದರು ಆದರೆ ನಿಮಗೆ ಅದು ಗೊತ್ತಾಗಿಲ್ಲ. ಎಲ್ಲರಿಗೂ ಒಂದು ಕಂಫರ್ಟ್ ಜೋನ್ ಬೇಕು, ಒಬ್ಬೊಬ್ಬರು ಒಬ್ಬರೊಟ್ಟಿಗೆ ಆತ್ಮೀಯತೆ ಬೆಳೆಸಿಕೊಳ್ಳುತ್ತಾರೆ ಆದರೆ ಅದು ಅತಿಯಾಗಬಾರದು ಎಂದು ಮಾತಿನ ಚಾಟಿ ಬೀಸಿದ್ದಾರೆ.
BBK 11: ಎಂಟನೇ ವಾರಕ್ಕೆ ಬಿಗ್ ಬಾಸ್ ಪ್ರಯಾಣ ಕೊನೆಗೊಳಿಸಿದ ಹೃದಯವಂತ ಧರ್ಮಾ