ನವದೆಹಲಿ: ನಟಿ ಕೃತಿ ಕರಬಂಧ (Kriti Kharbanda) ಕನ್ನಡಿಗರಿಗೆ ತುಂಬಾನೇ ಚಿರಪರಿಚಿತ. ಗೂಗ್ಲಿ, ಚಿರು ಚಿತ್ರದ ಮೂಲಕ ಕನ್ನಡ ಪ್ರೇಕ್ಷಕರ ಮನೆಗೆದ್ದಿದ್ದ ನಟಿ ಅಪಾರ ಅಭಿಮಾನಿಗಳನ್ನು ಗಳಿಸಿದ್ದಾರೆ. ಜೊತೆಗೆ ಸಾಮಾಜಿಕ ಜಾಲತಾಣದಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದಾರೆ. ಇತ್ತೀಚೆಗಷ್ಟೇ ತಮ್ಮಇನ್ಸ್ಟಾಗ್ರಾಮ್ ಖಾತೆಯಲ್ಲಿ ನಟಿ ಸ್ಕ್ವೀಝ್ಡ್ ಆರೆಂಜ್ ಜ್ಯೂಸ್ ಅನ್ನು ತಯಾರಿಸಿ ಆಪ್ಲೋಡ್ ಮಾಡಿದ್ದಾರೆ
ಜೊತೆಗೆ ಇದು ಆರೋಗ್ಯಕರ ಜ್ಯೂಸ್ ಎಂದು ಸೋಷಿಯಲ್ ಮೀಡಿಯಾದಲ್ಲಿ ತಿಳಿಸಿದ್ದಾರೆ. ನಟಿ ಕೃತಿ “ಥಂಡಿ ಥಂಡಿ ಹವಾದಲ್ಲಿ ಸ್ಕ್ವೀಝ್ ಕಿತ್ತಳೆ ಜ್ಯೂಸ್ ಮಾಡುವ ಜೊತೆಗೆ ಕಿತ್ತಳೆ ಜ್ಯೂಸ್ ನ ಉಪಯೋಗದ ಕುರಿತು ಬರೆದುಕೊಂಡಿದ್ದಾರೆ. ಇದು ಪೌಷ್ಟಿಕಾಂಶದ ನೈಸರ್ಗಿಕ ಪಾನೀಯಗಳಲ್ಲಿ ಒಂದಾಗಿದ್ದು ಆರೋಗ್ಯ ಪ್ರಯೋಜನಗಳಿಗೆ ಹೆಸರುವಾಸಿಯಾಗಿದೆ. ಕಿತ್ತಳೆ ರಸದಲ್ಲಿ ವಿಟಮಿನ್ ಸಿ, ಫೋಲೇಟ್ ಮತ್ತು ಪೊಟ್ಯಾಸಿಯಮ್‌ನಂತಹ ಸೂಕ್ಷ್ಮ ಪೋಷಕಾಂಶ ಹೆಚ್ಚಿದೆ ಎಂದು ಶೀರ್ಷಿಕೆಯಲ್ಲಿ, ಕೃತಿ ಕರಬಂಧ ಬರೆದಿದ್ದಾರೆ
ಈ ಹಣ್ಣಿನ ಜ್ಯೂಸ್ ನೋಡಿ ಅನೇಕರ ಬಾಯಲ್ಲಿ ನೀರು ಬರುತ್ತಿದ್ದು ಸಾಮಾಜಿಕ ಜಾಲತಾಣದಲ್ಲಿ ಈ ವಿಡಿಯೊ ಕಣ್ತುಂಬಿಕೊಂಡು ಅಭಿಮಾನಿಗಳು ನಾನಾ ರೀತಿಯ ಪ್ರತಿಕ್ರಿಯೆ ನೀಡಿದ್ದಾರೆ. ಕ್ಯೂಟ್ ವಿಡಿಯೊ, ಸಖತ್ ಟೇಸ್ಟಿ ಜ್ಯೂಸ್ ಎಂದು ಅಭಿಮಾನಿಗಳು ಕಾಮೆಂಟ್ ಮಾಡಿದ್ದಾರೆ.
2019ರಲ್ಲಿ ತೆಲುಗಿನ ‘ಬೋನಿ” ಚಿತ್ರದ ಮೂಲಕ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟ ನಟಿ 2010ರಲ್ಲಿ ದಿವಂಗತ ನಟ ಚಿರಂಜೀವಿ ಸರ್ಜಾ ಅವರ ಜೊತೆ ‘ಚಿರು’ ಚಿತ್ರದಲ್ಲಿ ನಟಿಸಿದ್ದರು. ರಾಕಿಂಗ್ ಸ್ಟಾರ್ ಯಶ್ ಜೊತೆ ನಟಿಸಿದ್ದ ‘ಗೂಗ್ಲಿ’ ಚಿತ್ರ ಕೃತಿಗೆ ಒಳ್ಳೆಯ ಹಿಟ್ ನೀಡಿತು. ಮಾಸ್ತಿ ಗುಡಿ, ದಳಪತಿ ಮುಂತಾದ ಸಿನಿಮಾಗಳಲ್ಲಿ ನಟಿಸಿರುವ ನಟಿ ಕೃತಿ ಕರಬಂಧ ಇತ್ತೀಚೆಗೆ ಪುಲ್ಕಿತ್ ಸಮರ್ಥ್ ಜತೆ ವಿವಾಹವಾಗಿದ್ದರು.ಕೃತಿ ಕರಬಂಧ ಬಾಲಿವುಡ್ ಸಿನಿಮಾಗಳಲ್ಲಿ ನಟಿಸಿದ್ದಾರೆ. ಆ ವೇಳೆ ಪುಲ್ಕಿತ್ ಸಮರ್ಥ್ ಹಾಗೂ ಕೃತಿ ಪಾಗಲ್‌ಪಂತಿ’ ಅನ್ನುವ ಸಿನಿಮಾದಲ್ಲಿ ನಟಿಸಿದ್ದು ಆ ವೇಳೆ ಇಬ್ಬರಿಗೂ ಪ್ರೀತಿ ಹುಟ್ಟಿಕೊಂಡು ಬಳಿಕ ಇಬ್ಬರು ಮದುವೆಯಾಗಿದ್ದಾರೆ
ಈ ಸುದ್ದಿಯನ್ನೂ ಓದಿ: Health Tips: ಜೇನುತುಪ್ಪದೊಂದಿಗೆ ಬೆಳ್ಳುಳ್ಳಿಯನ್ನು ಸೇರಿಸಿ ತಿನ್ನುವುದರಿಂದ ಏನೆಲ್ಲ ಲಾಭಗಳಿವೆ ನೋಡಿ