Saturday, 14th December 2024

ಆದಿಪುರುಷ್ ಚಿತ್ರಕ್ಕೆ ಸೀತೆಯಾಗಿ ನಟಿ ಕೃತಿ

ಮುಂಬೈ: ಪ್ರಭಾಸ್‌ ನಟಿಸುತ್ತಿರುವ ಚಿತ್ರ ಆದಿಪುರುಷ್ ದಲ್ಲಿ ಸೀತೆಯ ಪಾತ್ರಕ್ಕೆ ನಟಿ ಕೃತಿ ಸನೋನ್‌ ಆಯ್ಕೆಯಾಗಿದ್ದಾರೆ.

ಓಂ ರಾವುತ್‌ ನಿರ್ದೇಶನದ ಈ ಚಿತ್ರದಲ್ಲಿ ಪ್ರಭಾಸ್‌ ರಾಮನ ಪಾತ್ರಕ್ಕೆ ಬಣ್ಣ ಹಚ್ಚಲಿದ್ದಾರೆ. ಅಂದ ಹಾಗ, ಚಿತ್ರಕ್ಕಾಗಿ, ವಿಶೇಷವಾಗಿ ಕತ್ತಿವರಸೆ ಹಾಗೂ ಇನ್ನಿಯರ ಯುದ್ದೋಪಕರಣಗಳ ತರಬೇತಿ ಪಡೆಯುತ್ತಿದ್ದಾರೆ. ಕುತೂಹಲದ ವಿಷಯವೆಂದರೆ, ರಾವಣ(ಲಂಕೇಶ್‌) ಪಾತ್ರಕ್ಕೆ ಸೈಫ್ ಅಲಿ ಖಾನ್ ಜೀವ ತುಂಬುತ್ತಿರುವುದು.

ಕೃತಿ ಸನೋನ್‌ ಗೂ ಮುನ್ನ ಸೀತೆಯ ಪಾತ್ರಕ್ಕೆ ಬಾಹುಬಲಿ ಖ್ಯಾತಿಯ ಅನುಷ್ಕಾ ಶೆಟ್ಟಿ, ಅನುಷ್ಕಾ ಶರ್ಮ (ಕ್ರಿಕೆಟರ್‌ ಕೊಹ್ಲಿ ಪತ್ನಿ), ಕಿಯಾರಾ ಅಡ್ವಾನಿ ಹಾಗೂ ಕೀರ್ತಿ ಸುರೇಶ್‌ ಅವರನ್ನು ಆಯ್ಕೆ ಮಾಡುವ ಯೋಚನೆ ಇತ್ತು ಎಂದು ಹೇಳಲಾಗುತ್ತಿತ್ತು. ನಟಿಯನ್ನು ಆಯ್ಕೆ ಮಾಡಲು, ಹಿಂದಿ ಮತ್ತು ತೆಲುಗು ಚಿತ್ರರಂಗದ ನಟಿಯರನ್ನು ಅಳೆದು ತೂಗಿ ನೋಡಿರುವುದು ಚಿತ್ರಕಥೆ ಎಷ್ಟು ಮಹತ್ವ ಹೊಂದಿದೆ ಎಂದು ತಿಳಿಯಬಹುದು.

ಆದರೆ, ವರದಿ ಪ್ರಕಾರ, ಕೃತಿ ಸನೋನ್ ರನ್ನು ಅಂತಿಮಗೊಳಿಸಲಾಗಿದೆ. ಕೃತಿಗೆ ಪೌರಾಣಿಕ ಪಾತ್ರ ಹೊಸದು ಹಾಗೂ ಚಾಲೆಂಜಿಂಗ್‌ ಆಗಿರಲಿದೆ. ಹೀರೋಪಂತಿ, ದಿಲ್ವಾಲೆ ಮುಂತಾದ ಚಿತ್ರಗಳಲ್ಲಿ ನಟಿಸಿದ್ದ ಕೃತಿಗೆ ಆದಿ ಪುರುಷ್ ಪಾತ್ರ ವಿಭಿನ್ನ ಅನುಭವ ನೀಡಲಿದೆ. ಓಂ ರಾವುತ್ ಅವರು, ತನ್ಹಾಜೀ, ದಿ ಅನ್ಸಂಗ್‌ ವಾರಿಯರ್‌ ಚಿತ್ರಕ್ಕೆ ಮೊದಲ ಬಾರಿ ಆಕ್ಷನ್‌ ಕಟ್ ಹೇಳಿದ್ದರು.

ಸದ್ಯ ಕೃತಿ ಸನೋನ್, ಹಮ್ ದೋ ಹಮಾರೇ ದೋ ಚಿತ್ರೀಕರಣದಲ್ಲಿ ವ್ಯಸ್ತರಾಗಿದ್ದು, ಬಳಿಕ ಜನವರಿಯಲ್ಲಿ ಅಕ್ಷಯ್ ಕುಮಾರ್‌ ನಟನೆಯ ಬಚ್ಚನ್‌ ಪಾಂಡೆ ಹಾಗೂ ಭೇಡಿಯೆ ಚಿತ್ರದಲಿ ವರುಣ್ ಧವನ್‌ ಗೆ ನಾಯಕಿಯಾಗಿ ನಟಿಸುತ್ತಿದ್ದಾರೆ. ಒಟ್ಟಿನಲ್ಲಿ, 2021ರ ವರ್ಷದ ಆರಂಭದಲ್ಲೆ ಕೃತಿ ಫುಲ್‌ ಬಿಜಿ.