Sunday, 15th December 2024

BBK 11: ಜಗದೀಶ್ ಎದೆ ಮೇಲೆ ಕಾಲಿಟ್ಟು ಮುಂಗಾರು ಮಳೆ ಸೀನ್ ರಿಕ್ರಿಯೇಟ್ ಮಾಡಿದ ಹಂಸ

Jagadish and Hamsa

ಬಿಗ್ ಬಾಸ್ ಕನ್ನಡ ಸೀಸನ್ 11 (Bigg Boss Kannada) ಶುರುವಾಗಿ ಒಂದು ವಾರ ಕಳೆದಿದೆ. ಈ ವರೆಗೆ ಮನೆಯಲ್ಲಿ ಹೆಚ್ಚು ಜಗಳಗಳನ್ನೇ ನೋಡುತ್ತಾ ಬಂದಿದ್ದ ಪ್ರೇಕ್ಷಕರು ಇದೀಗ ನಗುವಿನ ಅಲೆಯಲ್ಲಿ ತೇಲಲು ಶುರುಮಾಡಿದ್ದಾರೆ. ದೊಡ್ಮನೆಯಲ್ಲಿ ಈಗ ಟಾಸ್ಕ್, ಜಗಳಗಳ ಜೊತೆ ಫನ್ ಲವ್ ಸ್ಟೋರಿ ಕೂಡ ಶುರುವಾಗಿದೆ. ಧರ್ಮ ಹಾಗೂ ಐಶ್ವರ್ಯಾ ನಡುವಿನ ಲವ್​ಸ್ಟೋರಿ ಒಂದುಕಡೆ ಸೌಂಡ್ ಮಾಡುತ್ತಿದ್ದರೆ ಇದೀಗ ಮತ್ತೊಂದು ಕಡೆ ಲಾಯರ್ ಜಗದೀಶ್ ಅವರು ಕ್ಯಾಪ್ಟನ್ ಹಂಸ ಅವರಿಗೆ ಕಣ್ಣು ಹಾಕುತ್ತಿದ್ದಾರೆ.

ಕಳೆದ ವಾರ ಎಲ್ಲರನ್ನೂ ಎದುರು ಹಾಕಿಕೊಂಡು ಬೇಕಂತಲೇ ಜಗಳಕ್ಕೆ ಇಳಿಯುತ್ತಿದ್ದ ಜಗದೀಶ್ ವೀಕೆಂಡ್​ನಲ್ಲಿ ಸುದೀಪ್ ಬಂದ ನಂತರ ಫುಲ್ ಚೇಂಜ್ ಆದಂತೆ ಕಾಣುತ್ತಿದೆ. ಲಾಯರ್ ಜಗದೀಶ್ ಲವ್ಸ್ ಹಂಸ ಎನ್ನುವ ಕಾನ್ಸೆಪ್ಟ್ ಬಿಗ್​ಬಾಸ್ ಮನೆಯಲ್ಲಿ ಶುರುವಾಗಿದ್ದು ಇಬ್ಬರು ಕೂಡಾ ಕಿತ್ತಾಡುತ್ತಲೇ ಹತ್ತಿರವಾಗುತ್ತಿರುವಂತೆ ಕಾಣಿಸುತ್ತಿದೆ.

ಕ್ಯಾಪ್ಟನ್ ಆದ ಬಳಿಕ ಗುರ್… ಎನ್ನುತ್ತಿದ್ದ ಹಂಸ ಇದೀಗ ಜದೀಶ್ ಕಾಟವನ್ನ ಕಾಮಿಡಿ ಆಗಿ ತೆಗೆದುಕೊಂಡು ಮನೆಯವರನ್ನು ಹಾಗೂ ಪ್ರೇಕ್ಷಕರನ್ನು ರಂಚಿಸುತ್ತಿದ್ದಾರೆ. ಹಂಸ ಅವರನ್ನ ‘ಹಮ್ಸ್‌’ ಎಂದು ಜಗದೀಶ್ ಕರೆಯುತ್ತಿದ್ದಾರೆ. ಇದರ ಜೊತೆಗೆ ಐ ಲವ್ ಯು ಕ್ಯಾಪ್ಟನ್ ಅಂತಲೇ ಪ್ರಪೋಸ್ ಕೂಡ ಮಾಡಿದ್ದಾರೆ

ಇದಿಷ್ಟೆ ಅಲ್ಲದೆ ಬಿಗ್ ಬಾಸ್ ಮನೆಯಲ್ಲಿ ಮುಂಗಾರು ಮಳೆ ಸಿನಿಮಾದ ಸೀನ್ ಒಂದು ರಿಕ್ರಿಯೇಟ್ ಆಗಿದೆ. ಪೂಜಾ ಗಾಂಧಿ ತರ ಹಂಸ ಅವರು ಜಗದೀಶ್ ಎದೆಗೆ ಕಾಲಿಟ್ಟು ಫೇಮಸ್ ಸೀನ್ ಅನ್ನು ರಿಕ್ರಿಯೇಟ್ ಮಾಡಿದ್ದಾರೆ. ಇಂದಂತು ದೊಡ್ಮೆನೆಯಲ್ಲಿ ನಗುವಿನ ಮಳೆ ಬೀಳಲಿದ್ದು, ಎಪಿಸೋಡ್​ಗಾಗಿ ಪ್ರೇಕ್ಷಕರು ಕಾದು ಕುಳಿತಿದ್ದಾರೆ.

ಏಕವಚನದಲ್ಲಿ ಜಗದೀಶ್ ಬೆವರಿಳಿಸಿದ ಕ್ಯಾಪ್ಟನ್ ಹಂಸ:

ಈ ಎಲ್ಲ ಘಟನೆ ನಡೆಯುವ ಮುನ್ನ ಹಂಸ ಹಾಗೂ ಜಗದೀಶ್ ನಡುವೆ ದೊಡ್ಡ ಜಗಳ ನಡೆದಿದೆ. ಜಗದೀಶ್ ಅವರು ಹಂಸ ಬಳಿ ‘ನನಗೆ ತಲೆ ನೋವು, ಮಾತ್ರೆ ಬೇಕು’ ಎಂದು ಕೇಳಿದ್ದಾರೆ. ಇದಕ್ಕೆ ಕ್ಯಾಪ್ಟನ್ ನೀವು ಕ್ಯಾಮೆರಾ ಮುಂದೆ ಬಿಗ್​ ಬಾಸ್​ನ ಕೇಳಿ ಎಂದಿದ್ದಾರೆ. ಆಗ ಜಗದೀಶ್ ಅವರು, ನೀವು ಯಾಕೆ ಕ್ಯಾಪ್ಟನ್ ಆಗಿದ್ದೀರಾ? ಆಗಲ್ಲ ಅಂತ ಬರೆದುಕೊಟ್ಟು ಹೋಗಿ, ನೀನೇನು ಡಾನ್ ಅಲ್ಲ, ಡಾನ್​ಗಳನ್ನ ನಾನು ತುಂಬಾ ನೋಡಿದ್ದೇನೆ ಎಂದರು. ಇದಕ್ಕೆ ಹಂಸ ಸರಿಯಾಗಿ ತಿರುಗೇಟು ನೀಡಿದ್ದಾರೆ.

ನೀವು ಹೇಳಿದ್ದನ್ನು ತರಿಸಿಕೊಡಲು ಆಗಲ್ಲ ಎಂದು ನೇರವಾಗಿ ಹೇಳಿದ್ದಾರೆ. ಇಲ್ಲಿಗೆ ಸುಮ್ಮನಾಗದ ಜಗದೀಶ್, ನಿನಗೆ ಆ ಕೆಪಾಸಿಟಿ ಇಲ್ಲ ಅಂದ್ರೆ ಬಿಗ್ ಬಾಸ್​ಗೆ ಬರೆದುಕೊಟ್ಟು ಹೊರಗೆ ಹೋಗಿ ಎಂದಿದ್ದಾರೆ. ಜಗದೀಶ್ ಮಾತಿಂದ ಮತ್ತಷ್ಟು ಕೋಪಗೊಂಡ ಹಂಸ, ನೀನ್ ಯಾವನೋ ಹೇಳೋಕೆ ಎಂದು ಏಕವಚನದಲ್ಲೇ ಜಗಳವಾಡಿದ್ದಾರೆ.

BBK 11: ಬಿಗ್ ಬಾಸ್ ಮನೆಯಲ್ಲಿ ಉಗ್ರಂ ಮಂಜುವಿನ ಬಾಯಿಮುಚ್ಚಿಸಿದ ಧನರಾಜ್ ಆಚಾರ್: ಏನಾಯಿತು?