ಬಿಗ್ ಬಾಸ್ ಕನ್ನಡ ಸೀಸನ್ 11ರ (Bigg Boss Kannada) ಮನೆ ಎರಡನೇ ವಾರ ಕೂಡ ರಣರಂಗವಾಗಿದೆ. ಇಡೀ ಮನೆಯ ಸದಸ್ಯರು ನಾಮಿನೇಟ್ ಆಗಿದ್ದು, ಮನೆಯ ಪರಿಸ್ಥಿತಿ ಬೂದಿ ಮುಚ್ಚಿದ ಕೆಂಡದಂತಿದೆ. ಕೆಲವರು ನಿಯಮ ಉಲ್ಲಂಘಿಸಿದ್ದಕ್ಕಾಗಿ ಇಡೀ ಮನೆ ಅನುಭವಿಸುತ್ತಿದೆ. ಇದೀಗ ಎರಡನೇ ವಾರದ ಮೂರನೇ ದಿನ ಕೂಡ ದೊಡ್ಮೆನೆಯಲ್ಲಿ ದೊಡ್ಡ ಜಗಳ ನಡೆದಿದೆ. ಚೈತ್ರಾ ಕುಂದಾಪುರ ಹಾಗೂ ಲಾಯರ್ ಜಗದೀಶ್ ಅವರು ಕ್ಯಾಪ್ಟನ್ ಹಂಸ ತೆಗೆದುಕೊಂಡು ನಿರ್ಧಾರದಿಂದ ಕೆಂಡಾಮಂಡಲರಾಗಿದ್ದಾರೆ.
ಮನೆಯ ಸದಸ್ಯರಿಗೆ ಬಿಗ್ ಬಾಸ್ ಒಂದು ಟಾಸ್ಕ್ ನೀಡಿದ್ದಾರೆ. ಇದರ ಹೆಸರು ಗೊಬ್ಬರದ ಅಬ್ಬರ. ಗಾರ್ಡರ್ ಏರಿಯಾದಲ್ಲಿ ಗೇಮ್ಗೆ ಸೆಟ್ ನಿರ್ಮಿಸಲಾಗಿದೆ. ಈ ಸೆಟ್ ಒಳಗಡೆ ಸಗಣಿ ಹಾಕಲಾಗಿದೆ. ಇಲ್ಲಿ ಸ್ಪರ್ಧಿಗಳ ಕೈ ಮತ್ತು ಕಾಲುಗಳಿಗೆ ಟೇಪ್ ಕಟ್ಟಿರಲಾಗುತ್ತದೆ. ಅವರು ತಮ್ಮ ಬಣ್ಣದ ಚೆಂಡುಗಳನ್ನು ಈ ಸೆಟ್ನ ಒಳಗಡೆಯಿಂದ ದೂಡಿಕೊಂಡು ತಂದು ತಮಗೆ ಮೀಸಲಿಡುವ ಸ್ಟ್ಯಾಂಡ್ನಲ್ಲಿ ಇಡಬೇಕು. ಇದರ ಉಸ್ತುವಾರಿಯನ್ನು ಹಂಸ ವಹಿಸಿಕೊಂಡಿದ್ದಾರೆ.
ಈ ಟಾಸ್ಕ್ ನಡೆಯುವ ವೇಳೆ ಕ್ಯಾಪ್ಟನ್ ಹಂಸ ಮತ್ತು ಚೈತ್ರಾ ಕುಂದಾಪುರ-ಲಾಯರ್ ಜಗದೀಶ್ ನಡುವೆ ದೊಡ್ಡ ಜಗಳ ಆಗಿದೆ. ಸ್ವರ್ಗ ನಿವಾಸಿ ಆಗಿರುವ ಧನರಾಜ್ ಆಚಾರ್ ಜಿಗಿಯುತ್ತಾ ಬಂದಿರುವುದು ನರಕ ನಿವಾಸಿಗಳ ಅಸಮಾಧಾನಕ್ಕೆ ಕಾರಣವಾಗಿದೆ. ತೆವಳಿಕೊಂಡು ಬರಬೇಕೆಂದು ಇರೋದಲ್ವಾ? ಜಂಪ್ ಮಾಡೋಕೆ ಅವಕಾಶ ಕೊಡಂಗಿಲ್ಲ ಎನ್ನುತ್ತಾರೆ ನರಕ ನಿವಾಸಿಗಳು. ಕಣ್ಣಿಲ್ವಾ ನಿಮಗೆ ನೋಡೋಕೆ ಎಂದು ಜಗದೀಶ್ ಅವರು ಕ್ಯಾಪ್ಟನ್ಗೆ ಬೈದಿದ್ದಾರೆ. ಯಾವ ಸೀಮೆ ಕ್ಯಾಪ್ಟನ್ ರೀ ನೀವು ಎಂದು ಚೈತ್ರಾ ಕುಂದಾಪುರ ಸಿಟ್ಟಾಗಿದ್ದಾರೆ.
ಪ್ರೊಮೋದ ಕೊನೆಯಲ್ಲಿ ಗೋಲ್ಡ್ ಸುರೇಶ್ ಅವರು ಕ್ಯಾಮೆರಾ ಬಳಿ ಬಂದು ನಾವು ಇನ್ಮೇಲೆ ಯಾವ ಗೇಮೂ ಆಡಲ್ಲ. ಮೋಸ, ಅನ್ಯಾಯ ಎಂದಿದ್ದು, ಎಲ್ಲ ನರಕ ನಿವಾಸಿಗಳು ಮೋಸ ಮೋಸ ಎನ್ನುತ್ತಾ ಕಿರುಚಾಡಿದ್ದಾರೆ.
ಮನೆಯಲ್ಲಿ ಗೊಬ್ಬರ, ಮನಸ್ಸುಗಳೂ ಗೊಬ್ಬರ!?
— Colors Kannada (@ColorsKannada) October 9, 2024
ಬಿಗ್ ಬಾಸ್ ಕನ್ನಡ ಸೀಸನ್ 11 | ಸೋಮ-ಶುಕ್ರ 9:30#BiggBossKannada11 #BBK11 #HosaAdhyaya #ColorsKannada #BannaHosadaagideBandhaBigiyaagide #ಕಲರ್ಫುಲ್ಕತೆ #colorfulstory #Kicchasudeepa pic.twitter.com/a4c8mt510Z
ಇಡೀ ಮನೆ ನಾಮಿನೇಟ್:
ಬಿಗ್ ಬಾಸ್ ಮನೆಯಲ್ಲಿ ಟಾಸ್ಕ್‌ಗೆ ತಯಾರಿ ಮಾಡಿಕೊಳ್ಳುವಾಗ ಪರದೆಯನ್ನು ಇಳಿಸಲಾಗುತ್ತದೆ. ಆಗ ಸ್ಪರ್ಧಿಗಳು ಅದನ್ನು ತೆಗೆದು ಅಥವಾ ಇಣುಕಿ ನೋಡುವಂತಿಲ್ಲ. ಆದರೆ, ಇದೀಗ ಇದನ್ನು ಕೆಲ ಸ್ಪರ್ಧಿಗಳು ಕದ್ದು ಮುಚ್ಚಿ ನೋಡಿದ್ದಾರೆ. ಮೊದಲಿಗೆ ಇಣುಕಿ ಬಂದ ಮಾನಸ ಅವರು, ಶಿಶಿರ್ ಬಳಿ ಬೆಲ್ಟ್ ಕಟ್ಟಿಕೊಂಡು ಓಡೋ ಥರ ಇದೆ ಎಂದಿದ್ದಾರೆ. ಇದು ಬಿಗ್ ಬಾಸ್ ಗಮನಕ್ಕೆ ಬಂದಿದ್ದು, ಈ ಕ್ಷಣದಿಂದ ಮನೆಯ ಎಲ್ಲಾ ಸದಸ್ಯರನ್ನು ಬಿಗ್ ಬಾಸ್ ನಾಮಿನೇಟ್ ಮಾಡುತ್ತಿದ್ದಾರೆ ಎಂದು ಹೇಳಿದ್ದಾರೆ.
Bigg Boss Kannada: ಎಲ್ಲ ಮ್ಯಾಚ್ ಫಿಕ್ಸಿಂಗ್: ಬಿಗ್ ಬಾಸ್ ಮನೆಯಲ್ಲಿ ಮತ್ತೆ ಧ್ವನಿ ಎತ್ತಿದ ಜಗದೀಶ್