Thursday, 31st October 2024

Malaika Arora: ಆತ್ಮಕ್ಕೆ ಸ್ಪರ್ಶ ಜೀವನದ ಕೊನೇ ತನಕ; ಮಲೈಕಾ ಅರೋರಾ ಇನ್‌ಸ್ಟಾ ಸ್ಟೋರಿ ಯಾರಿಗೆ?

Malaika Arora

ನಟ ಅರ್ಜುನ್ ಕಪೂರ್ (Actor Arjun Kapoor) ಜೊತೆಗೆ ಬ್ರೇಕಪ್ ಮಾಡಿಕೊಂಡ ಬಳಿಕ ನಟಿ ಮಲೈಕಾ ಅರೋರಾ (Malaika Arora) ಮೊದಲ ಬಾರಿಗೆ ಎಲ್ಲರ ಹೃದಯ ಸ್ಪರ್ಶಿಸುವ ಪೋಸ್ಟ್ ವೊಂದನ್ನು ಇನ್‌ಸ್ಟಾಗ್ರಾಮ್‌ನಲ್ಲಿ ಹಂಚಿಕೊಂಡಿದ್ದಾರೆ. ಇದು ಸಾಕಷ್ಟು ವೈರಲ್ (Viral News) ಆಗಿದೆ. 2018ರಿಂದ ಅರ್ಜುನ್ ಕಪೂರ್ ಮತ್ತು ಮಲೈಕಾ ಡೇಟಿಂಗ್‌ನಲ್ಲಿದ್ದು, ಇತ್ತೀಚೆಗೆ ಅವರ ಬ್ರೇಕಪ್ ಸುದ್ದಿಗಳು ಸಾಮಾಜಿಕ ಜಾಲತಾಣದಲ್ಲಿ ಸದ್ದು ಮಾಡತೊಡಗಿತ್ತು.

ಮುಂಬರಲಿರುವ ಸಿಂಗ್‌ಹ್ಯಾಮ್ ಚಿತ್ರದ ಪ್ರಚಾರದ ವೇಳೆ ಅರ್ಜುನ್ ಕಪೂರ್ ತಾವು ಒಬ್ಬಂಟಿಯಾಗಿರುವುದಾಗಿ ಹೇಳಿಕೊಂಡು ಮಲೈಕಾ ಜೊತೆಗೆ ಬ್ರೇಕಪ್ ಮಾಡಿಕೊಂಡಿರುವುದನ್ನು ಸ್ಪಷ್ಟಪಡಿಸಿದ್ದರು. ಇದಾಗಿ ಕೆಲವು ಗಂಟೆಗಳ ಬಳಿಕ ಮಲೈಕಾ ತಮ್ಮ ಇನ್‌ಸ್ಟಾಗ್ರಾಮ್‌ನಲ್ಲಿ ಪ್ರೀತಿ, ಪ್ರಣಯ ಮತ್ತು ಸಂಬಂಧದ ಬಗ್ಗೆ ರಹಸ್ಯ ಸಂದೇಶವನ್ನು ಹೊಂದಿರುವ ಪೋಸ್ಟ್‌ವೊಂದನ್ನು ಹಂಚಿಕೊಂಡಿದ್ದಾರೆ.

ಎಲ್ಲರಿಗೂ ಗುಡ್ ಮಾರ್ನಿಂಗ್ ಎಂದು ಹೇಳಿ “ಒಂದು ನಿಮಿಷ ಹೃದಯವನ್ನು ಸ್ಪರ್ಶಿಸಿದರೂ ಆತ್ಮದ ಸ್ಪರ್ಶ ಜೀವಿತಾವಧಿಯವರೆಗೆ ಉಳಿಯುತ್ತದೆ”. (Touching a heart for a second can touch a soul for a lifetime) ಎನ್ನುವ ಸಂದೇಶವನ್ನು ತಮ್ಮ ಪೋಸ್ಟ್‌ನಲ್ಲಿ ಮಲೈಕಾ ಹಂಚಿಕೊಂಡಿದ್ದಾರೆ.

Malaika Arora

ಮುಂಬೈನಲ್ಲಿ ನಡೆದ ದೀಪಾವಳಿ ಕಾರ್ಯಕ್ರಮದಲ್ಲಿ ಪಾಲ್ಗೊಂಡ ಅಲ್ಲಿ ಪ್ರೇಕ್ಷಕರನ್ನು ಉದ್ದೇಶಿಸಿ ಅರ್ಜುನ್ ಕಪೂರ್ ಮಾತನಾಡಿದ್ದರು. ಆಗ ಸುತ್ತಲಿನ ಜನರು ಮಲೈಕಾ ಹೆಸರು ಕೂಗುತ್ತಿದ್ದಂತೆ ನಾನು ಈಗ ಒಬ್ಬಂಟಿ ಎಂದು ಅವರು ಹೇಳಿದರು.

ಅರ್ಜುನ್ ಕಪೂರ್ ಮತ್ತು ಮಲೈಕಾ ಅರೋರಾ 2018ರಲ್ಲಿ ಡೇಟಿಂಗ್ ಮಾಡಲು ಪ್ರಾರಂಭಿಸಿದ್ದರು. ಈ ಕುರಿತು ಜೋಡಿ ಸಾಮಾಜಿಕ ಮಾಧ್ಯಮದಲ್ಲಿ ಬಹಿರಂಗವಾಗಿ ಅವರು ತಮ್ಮ ಪ್ರೀತಿಯ ಬಗ್ಗೆ ಹೇಳಿಕೊಂಡಿದ್ದರು. ಇತ್ತೀಚೆಗೆ ಅವರು ದೂರವಾಗಿರುವುದನ್ನು ಬಹಿರಂಗವಾಗಿ ಹೇಳಿಕೊಳ್ಳದೇ ಇದ್ದರೂ ಸಾಮಾಜಿಕ ಜಾಲತಾಣದಲ್ಲಿ ವದಂತಿಗಳು ಹುಟ್ಟಿಕೊಂಡಿತ್ತು.

Actor Darshan: ಇಂದಿನಿಂದಲೇ ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ನಟ ದರ್ಶನ್‌ಗೆ ಚಿಕಿತ್ಸೆ ಆರಂಭ

ಇವರಿಬ್ಬರ ಸಂಬಂಧ ಮುರಿದು ಬಿದ್ದ ಬಳಿಕ ಇಬ್ಬರೂ ಮಾಧ್ಯಮದ ಮುಂದೆ ತಮ್ಮ ಪ್ರೀತಿಯ ಬಗ್ಗೆ ಮಾತನಾಡುವುದು, ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡುವುದನ್ನು ನಿಲ್ಲಿಸಿದ್ದರು. ಬಳಿಕ ಇವರ ಸಂಬಂಧ ಮುರಿದು ಬಿದ್ದಿರುವ ಕುರಿತು ಉಹಾಪೋಹಗಳು ಹುಟ್ಟಿಕೊಂಡಿತ್ತು.