ಹೈದರಾಬಾದ್: ನಟ ನೆಡುಮುಡಿ ವೇಣು(73) ಅವರು ಸೋಮವಾರ ಮಧ್ಯಾಹ್ನ ನಿಧನರಾದರು.
ತಿರುವನಂತಪುರಂನ ಖಾಸಗಿ ಆಸ್ಪತ್ರೆಗೆ ದಾಖಲಾದ ಹಿರಿಯ ನಟ ತೀವ್ರ ನಿಗಾ ಘಟಕದಲ್ಲಿದ್ದರು. ವಾಣಿಜ್ಯ ಮತ್ತು ಕಲಾ ಸಿನೆಮಾದಲ್ಲಿ ಅಸಾಧಾರಣ ಅಭಿನಯಕ್ಕೆ ಹೆಸರುವಾಸಿಯಾದ ನೆಡುಮುಡಿ, ಅನೇಕ ಪಾತ್ರಗಳನ್ನು ನಿರ್ವಹಿಸಿದ್ದಾರೆ.
ಹಿರಿಯ ಮಲಯಾಳಂ ನಟನನ್ನು ತಿರುವನಂತಪುರಂನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ನಟ ಈ ಹಿಂದೆ ಕೋವಿಡ್-19 ರಿಂದ ಚೇತರಿಸಿಕೊಂಡಿ ದ್ದರು. ಅ.10ರ ಭಾನುವಾರ ವೇಣು ಅನಾರೋಗ್ಯಕ್ಕೆ ತುತ್ತಾಗಿದ್ದರು.
ಕೇಶವನ್ ವೇಣುಗೋಪಾಲ, ನೆಡುಮುಡಿ ವೇಣು 500ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿದ್ದಾರೆ. ಮಲಯಾಳಂ ಮತ್ತು ಕೆಲವು ತಮಿಳಿನಲ್ಲಿ ನಟಿಸಿದ್ದಾರೆ. ಅವರು ಮೂರು ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಗಳು, ಆರು ಕೇರಳ ರಾಜ್ಯ ಚಲನಚಿತ್ರ ಪ್ರಶಸ್ತಿಗಳ ವಿಜೇತರಾಗಿದ್ದಾರೆ.
ಪತ್ರಕರ್ತರಾಗಿ ತಮ್ಮ ವೃತ್ತಿಜೀವನ ಪ್ರಾರಂಭಿಸಿದ ವೇಣು ಜನಪ್ರಿಯ ರಂಗಭೂಮಿ ವ್ಯಕ್ತಿಯಾಗಿದ್ದರು. ನಂತರ ಚಲನಚಿತ್ರಗಳಿಗೆ ಪ್ರವೇಶಿಸಿದರು. ಮೂರು ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಗಳು, ಆರು ರಾಜ್ಯ ಚಲನಚಿತ್ರ ಪ್ರಶಸ್ತಿಗಳ ವಿಜೇತರಾದ ವೇಣು ಸಂತೋಷದ ಸ್ವಭಾವದಿಂದಾಗಿ ಅಪಾರ ಜನಪ್ರಿಯರಾಗಿದ್ದರು.
ಚಿತ್ರಂ, ಭಾರತಂ, ತೆನ್ಮಾವಿನ್ ಕೊಂಬಾತ್, ವಂಡಾನಮ್, ಮಣಿಚಿತ್ರಥಾಜು, ಚಂದ್ರಲೇಖ, ದೇವಸುರಾಮ್, ಇಷ್ಠಮ್, ಪವಿತ್ರಂ, ಒಪ್ಪಂ, ಹಿಸ್ ಹೈನೆಸ್ ಅಬ್ದುಲ್ಲಾ ಅವರ ಕೆಲವು ಜನಪ್ರಿಯ ಚಿತ್ರಗಳು.