ಬೆಂಗಳೂರು: ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ (Kiccha Sudeepa) ನಟನೆಯ ಆ್ಯಕ್ಷನ್ ಥ್ರಿಲ್ಲರ್ ʼಮ್ಯಾಕ್ಸ್ʼ (Max) ಚಿತ್ರ ಮಂದಿರದಲ್ಲಿ ಅಬ್ಬರಿಸುತ್ತಿದೆ. ಸುಮಾರು ಎರಡೂವರೆ ವರ್ಷಗಳ ಬಳಿಕ ಬೆಳ್ಳಿ ಪರದೆ ಮೇಲೆ ಕಾಣಿಸಿಕೊಂಡ ಸುದೀಪ್‌ಗೆ ಭರ್ಜರಿ ಸ್ವಾಗತ ಸಿಕ್ಕಿದೆ. ಡಿ. 25ರಂದು ಕ್ರಿಸ್‌ಮಸ್ ಪ್ರಯುಕ್ತ ತೆರೆಕಂಡ ಸಿನಿಮಾದ ಕಲೆಕ್ಷನ್ ದಿನದಿಂದ ದಿನಕ್ಕೆ ಹೆಚ್ಚಾಗುತ್ತದೆ. ಆ ಮೂಲಕ ಸ್ಯಾಂಡಲ್‌ವುಡ್‌ಗೆ ಡಿಸೆಂಬರ್ ಮತ್ತೊಮ್ಮೆ ಲಕ್ಕಿ ತಿಂಗಳು ಎನಿಸಿಕೊಂಡಿದೆ (Max Box Office Collection).
ಕಾಲಿವುಡ್ ನಿರ್ದೇಶಕ ವಿಜಯ್ ಕಾರ್ತಿಕೇಯನ್ (Vijay Karthikeyaa) ಮೊದಲ ಬಾರಿ ಆ್ಯಕ್ಷನ್ ಕಟ್ ಹೇಳಿರುವ ʼಮ್ಯಾಕ್ಸ್ʼ ಪಕ್ಕಾ ಮಾಸ್ ಆಗಿ ಮೂಡಿ ಬಂದಿದೆ. ಸುದೀಪ್ ಮತ್ತೊಮ್ಮೆ ಖಾಕಿ ಧರಿಸಿದ್ದು, ಅವರ ಖಡಕ್ ಡೈಲಾಗ್, ಅಭಿಮಯಕ್ಕೆ ಫ್ಯಾನ್ಸ್ ಫಿದಾ ಆಗಿದ್ದಾರೆ. ಒಂದೇ ರಾತ್ರಿಯಲ್ಲಿ ನಡೆಯುವ ಕಥೆಯಾದರೂ ನಿರ್ದೇಶಕ ವಿಜಯ್ ಕಾರ್ತಿಕೇಯನ್ ಅದನ್ನು ರೋಚಕವಾಗಿ ಕಟ್ಟಿಕೊಡಿರುವ ರೀತಿಯೇ ಗಮನ ಸೆಳೆಯುತ್ತಿದೆ. ಹೀಗಾಗಿಯೇ ಬಾಕ್ಸ್ ಆಫೀಸ್‌ನಲ್ಲಿ ಕಲೆಕ್ಷನ್ ದಿನ ಕಳೆದಂತೆ ಹೆಚ್ಚಾಗುತ್ತಿದೆ.
Supppaa happy to join you all at the theater tmrw morn along wth the team of #MaxTheMovie .
— Kichcha Sudeepa (@KicchaSudeep) December 30, 2024
Frankly, I still haven't seen a full run-through of the film post the 1st copy. Excited to be watching in between all you friends.
Be there.
TMORROW
NARTAKI
10.30AM
L&H's ♥️🤗
K pic.twitter.com/nbm4RUvQTE
5 ದಿನಗಳ ಗಳಿಕೆ ಎಷ್ಟು?
ʼಮ್ಯಾಕ್ಸ್ʼ ಚಿತ್ರ ತೆರೆಕಂಡು 5 ದಿನ ಕಳೆದಿದೆ. ಈ 5 ದಿನಗಳ ಒಟ್ಟು ಕಲೆಕ್ಷನ್ 27.50 ಕೋಟಿ ರೂ.ಗೆ ತಲುಪಿದೆ. ಕನ್ನಡ ಜತೆಗೆ ವಿವಿಧ ಭಾಷೆಗಳಲ್ಲಿ ತೆರೆಕಂಡಿರುವುದು ಚಿತ್ರಕ್ಕೆ ಪ್ಲಸ್ ಪಾಯಿಂಟ್ ಆಗಿದೆ. 5ನೇ ದಿನವಾದ ಭಾನುವಾರ (ಡಿ. 29) ಸಿನಿಮಾ 5.50 ಕೋಟಿ ರೂ. ಗಳಿಸಿದೆ ಎಂದು ವರದಿಯೊಂದು ತಿಳಿಸಿದೆ.
ಪ್ರತಿದಿನದ ಗಳಿಕೆಯ ವಿವರ
ಚಿತ್ರ ತೆರೆಕಂಡ ಮೊದಲ ದಿನ 8.7 ಕೋಟಿ ರೂ. ಬಾಚಿಕೊಂಡರೆ, 2ನೇ ದಿನ 3.85 ಕೋಟಿ ರೂ. ಗಳಿಸಿದೆ. 3ನೇ ದಿನ 4.7 ಕೋಟಿ ರೂ., 4ನೇ 4.75 ಕೋಟಿ ರೂ. ಮತ್ತು 5ನೇ ದಿನ 5.50 ಕೋಟಿ ಹರಿದು ಬಂದಿದೆ. ವರ್ಷಾಂತ್ಯ, ಕ್ರಿಸ್‌ಮಸ್ ಹೀಗೆ ಸಾಲು ಸಾಲು ರಜೆ ಇರುವುದು, ಪಾಸಿಟಿವ್ ಪ್ರತಿಕ್ರಿಯೆ ಕೂಡ ಚಿತ್ರತಂಡಕ್ಕೆ ನೆರವಾಗಿದೆ. ಶೀಘ್ರದಲ್ಲೇ ಚಿತ್ರ 50 ಕೋಟಿ ರೂ. ಕ್ಲಬ್ ಸೇರಲಿದೆ ಎಂದು ವಿಶ್ಲೇಷಕರು ಭವಿಷ್ಯ ನುಡಿದಿದ್ದಾರೆ.
2022ರಲ್ಲಿ ರಿಲೀಸ್ ಆದ ಅನೂಪ್ ಭಂಡಾರಿ ನಿರ್ದೇಶನದ ʼವಿಕ್ರಾಂತ್ ರೋಣʼ ಸಿನಿಮಾದ ಬಳಿಕ ತೆರೆಕಂಡ ಸುದೀಪ್ ಅಭಿನಯದ ಚಿತ್ರ ಇದಾಗಿದ್ದು, ಈ ಕಾರಣಕ್ಕೆ ಆರಂಭದಲ್ಲೇ ಕುತೂಹಲ ಮೂಡಿಸಿತ್ತು. ಅಲ್ಲದೆ ಸುದೀಪ್ ಮತ್ತೊಮ್ಮೆ ಖಾಕಿ ತೊಟ್ಟಿರುವುದು ಚಿತ್ರದ ಮೇಲಿನ ನಿರೀಕ್ಷೆಯನ್ನು ದುಪ್ಪಟ್ಟುಗೊಳಿಸಿತ್ತು. ಅದಕ್ಕೆ ತಕ್ಕಂತೆ ಚಿತ್ರತಂಡ ಹೊರ ತಂದಿದ್ದ ಟೀಸರ್, ಪೋಸ್ಟರ್, ಹಾಡುಗಳು ಗಮನ ಸೆಳೆದಿದ್ದವು. ತಮಿಳಿನ ವರಲಕ್ಷ್ಮೀ ಶರತ್ ಕುಮಾರ್, ಉಗ್ರಂ ಮಂಜು, ಸಂಯುಕ್ತಾ ಹೊರನಾಡು, ಸುಕೃತಾ ವಾಗ್ಲೆ, ಸುಧಾ ಬೆಳವಾಡಿ ಮತ್ತಿತರರು ನಟಿಸಿದ್ದಾರೆ. ಅಜನೀಶ್ ಲೋಕನಾಥ್ ಅವರು ಸಂಗೀತದ ಮೋಡಿ ಮಾಡಿದ್ದಾರೆ.
ಈ ಸುದ್ದಿಯನ್ನೂ ಓದಿ: Max Movie Collection: ‘ಮ್ಯಾಕ್ಸ್’ ಮನೋರಂಜನೆ ನೀಡಿದ ಕಿಚ್ಚ; ಸುದೀಪ್ ಚಿತ್ರ ಮೊದಲ ದಿನ ಗಳಿಸಿದ್ದೆಷ್ಟು?