Friday, 13th December 2024

ಲವ್ ಮಾಕ್‌ಟೇಲ್‌ ಬೆಡಗಿಗೆ ಹುಟ್ಟುಹಬ್ಬದ ಸಂಭ್ರಮ

ಬೆಂಗಳೂರು: ನಟಿ ಮಿಲನಾ ನಾಗರಾಜ್ ಭಾನುವಾರ ತಮ್ಮ 32ನೇ ಹುಟ್ಟುಹಬ್ಬದ ಸಂಭ್ರಮದಲ್ಲಿದ್ದಾರೆ.

ಮಿಲನಾ ನಾಗರಾಜ್ 2013ರಂದು ‘ನಮ್ ದುನಿಯಾ ನಮ್ ಸ್ಟೈಲ್’ ಚಿತ್ರದ ಮೂಲಕ ತಮ್ಮ ಸಿನಿಪಯಣ ಆರಂಭಿಸಿ ದರು. 2020 ರಂದು ಡಾರ್ಲಿಂಗ್ ಕೃಷ್ಣ ಜೊತೆ ನಟಿಸಿದ ‘ಲವ್ ಮಾಕ್‌ಟೇಲ್‌’ ಚಿತ್ರದ ಮೂಲಕ ಸಾಕಷ್ಟು ಜನಪ್ರಿ ಯತೆ ಪಡೆದರು.

ಇತ್ತೀಚೆಗಷ್ಟೇ ಡಾರ್ಲಿಂಗ್ ಕೃಷ್ಣ ಅವರೊಂದಿಗೆ ಮಿಲನಾ ನಾಗರಾಜ್ ವೈವಾಹಿಕ ಬದುಕಿಗೆ ಕಾಲಿಟ್ಟಿದ್ದಾರೆ. ಮಿಲನಾ ನಾಗರಾಜ್ 1989 ಏಪ್ರಿಲ್ ‍25ರಂದು ಹಾಸನದಲ್ಲಿ ಜನಿಸಿದರು.

ಸಾಮಾಜಿಕ ಜಾಲತಾಣದಲ್ಲಿ ಸಿನಿತಾರೆಯರಿಂದ ಹಾಗೂ ಅವರ ಅಭಿಮಾನಿಗಳಿಂದ ಮಿಲನಾ ನಾಗರಾಜ್ ಗೆ ಶುಭಾಶಯಗಳ ಮಹಾಪೂರವೇ ಹರಿದುಬಂದಿದೆ.