ಒಂಬತ್ತನೇ ವಾರ ನಡೆಯುತ್ತಿರುವ ಬಿಗ್ ಬಾಸ್ ಕನ್ನಡ ಸೀಸನ್ 11 (Bigg Boss Kannada 11) ಸಖತ್ ಕುತೂಹಲ ಕೆರಳಿಸಿದೆ. ಸದ್ಯ ಮನೆಯೊಳಗೆ 13 ಮಂದಿ ಇದ್ದು, ಆಟ ರೋಚಕತೆ ಸೃಷ್ಟಿಸಿದೆ. ಕಳೆದ ವೀಕೆಂಡ್ನಲ್ಲಿ ಕಿಚ್ಚ ಸುದೀಪ್ ಕೂಡ ಇನ್ಮುಂದೆ ಟಾಸ್ಕ್ಗಳು ಕಠಿಣವಾಗುತ್ತಾ ಸಾಗುತ್ತದೆ ಎಂಬ ಮಾತನ್ನು ಹೇಳಿದ್ದರು. ಅದರಂತೆ ಸೋಮವಾರ ಬಿಗ್ ಬಾಸ್ ಮನೆ ಬಿಗ್ ಬಾಸ್ ಸಾಮ್ರಾಜ್ಯವಾಗಿ ಬದಲಾಗಿದ್ದು, ಈ ವಾರದ ಕ್ಯಾಪ್ಟನ್ ಉಗ್ರಂ ಮಂಜು ರಾಜನಾಗಿ ಆಳುತ್ತಿದ್ದಾರೆ. ಆದರೀಗ ಇದರಲ್ಲೊಂದು ಟ್ವಿಸ್ಟ್ ಕೊಟ್ಟಿದ್ದಾರೆ.
ಬಿಗ್ ಬಾಸ್ ಮನೆಯ ಬಿಗ್ ಬಾಸ್ ಸಾಮ್ರಾಜ್ಯದಲ್ಲಿ ಉಗ್ರಂ ಮಂಜು ಅವರ ಉಗ್ರಾವತಾರದ ದರ್ಬಾರ್ಗೆ ಬ್ರೇಕ್ ಬೀಳುವ ಎಲ್ಲ ಲಕ್ಷಣ ಕಾಣುತ್ತಿದೆ. ಯಾಕೆಂದರೆ ಮನೆಗೆ ಈಗ ಯುವರಾಣಿಯ ಆಗಮನವಾಗಿದೆ. ಬಿಗ್ ಬಾಸ್ ಕನ್ನಡ ಸೀಸನ್ 11ರಲ್ಲಿ ಮಂಜು ಅವರು ರಾಜನಾಗಿದ್ದರು. ಈಗ ಇವರಿಗೆ ವಿರೋಧಿ ಬಣ ಒಂದು ಹುಟ್ಟಿಕೊಂಡಿದೆ. ಮೋಕ್ಷಿತಾ ಪೈ ಅವರು ಯುವರಾಣಿ ಆಗಿದ್ದಾರೆ. ಸಾಮ್ರಾಜ್ಯಕ್ಕಾಗಿ ಇಬ್ಬರ ಮಧ್ಯೆ ಕಿತ್ತಾಟ ನಡೆದಿದೆ. ಇಡೀ ಮನೆ ಇಬ್ಭಾಗವಾಗಿದೆ.
ಹೌದು, ಯುವರಾಣಿ ಆಗಿ ಮೋಕ್ಷಿತಾ ಪೈ ಎಂಟ್ರಿಕೊಟ್ಟಿದ್ದಾರೆ. ಯುವರಾಣಿಯ ಆಗಮನ ಆಗಿರೋದ್ರಿಂದ ಸಾಮ್ರಾಜ್ಯದಲ್ಲಿ ಅಲ್ಲೋಲ ಕಲ್ಲೋಲ ಸೃಷ್ಟಿಯಾಗಿದೆ. ಮಹಾರಾಜನ ಕುರ್ಚಿಗೆ ಕಂಟಕ ಎದುರಾಗಿದೆ. ಅಧಿಕಾರಕ್ಕಾಗಿ ಮಂಜು ಹಾಗೂ ಮೋಕ್ಷಿತಾ ಪೈ ಮಧ್ಯೆ ಮಹಾಯುದ್ಧ ಶುರುವಾಗಿದೆ. ಮಂಜಣ್ಣ ಅವರ ಅಧಿಕಾರವನ್ನು ಕಸಿದುಕೊಳ್ಳಲು ಬರುತ್ತಿದ್ದಾರೆ ಅಂತಾ ಬಿಗ್ಬಾಸ್ ಧ್ವನಿ ಕೇಳಿಸಿದೆ. ಇದರ ಬೆನ್ನಲ್ಲೇ ಮಂಜು ಅಧಿಕಾರ ನಮ್ಮದೇ ಎಂದು ತೊಡೆ ತಟ್ಟಿದ್ದಾರೆ.
ಇತ್ತ ಮೋಕ್ಷಿತಾ ಈ ಸಾಮ್ರಾಜ್ಯದ ಯುವರಾಣಿ ನಾನು ಎಂದು ಘೋಷಣೆ ಮಾಡಿಕೊಂಡಿದ್ದಾರೆ. ಅದೇ ರೀತಿ ಪ್ರಜೆಗಳಿಂದ ಯುವರಾಣಿ ಅವರಿಗೆ ಜಯವಾಗಲಿ ಎಂಬ ಘೋಷಣೆ ಕೂಡ ಮೊಳಗಿದೆ. ಅಷ್ಟರಲ್ಲೇ ಮೋಕ್ಷಿತಾ ಕ್ಯಾಪ್ಟನ್ಸಿ ರೂಮ್ ಒಳಗೆ ಹೋಗುವ ಅಧಿಕಾರ ನನಗೆ ಇದೆ ಎಂದು ನುಗ್ಗಿದ್ದಾರೆ. ಆಗ ಅಧಿಕಾರ ನಿಮಗೆ ಇಲ್ಲ. ಬಾಗಿಲು ಕ್ಲೋಸ್ ಮಾಡಿ ಎಂದು ಮಂಜು ಹೇಳಿದ್ದಾರೆ. ನಂತರ ಮತ್ತೆ ಖುರ್ಚಿ ವಿಚಾರಕ್ಕೆ ಮೋಕ್ಷಿತಾ ಮತ್ತು ಮಂಜು ನಡುವೆ ಹೋರಾಟ ನಡೆದಿದೆ.
BBK 11: ಬಿಗ್ ಬಾಸ್ನಲ್ಲಿ ಪಡೆದ ಸಂಭಾವನೆ ಬಗ್ಗೆ ಮನಬಿಚ್ಚಿ ಮಾತನಾಡಿದ ಧರ್ಮಾ