Friday, 27th December 2024

BBK 11: ಗೌತಮಿ ಜೊತೆ ಆಡಿ ನಾನು ಕ್ಯಾಪ್ಟನ್ ಆಗಲ್ಲ: ಕ್ಯಾಪ್ಟನ್ಸಿ ರೇಸ್​ನಿಂದ ಮೋಕ್ಷಿತಾ ಔಟ್

Gowthami and Mokshitha

ಬಿಗ್ ಬಾಸ್ ಕನ್ನಡ ಸೀಸನ್ 11 (Bigg Boss Kannada 11) ಸಾಕಷ್ಟು ರೋಚಕತೆ ಸೃಷ್ಟಿಸುತ್ತಿದೆ. ಟಾಸ್ಕ್ ಕಠಿಣವಾಗುತ್ತಾ ಸಾಗಿದ್ದು, ಉಳಿವಿಗಾಗಿ ಎಲ್ಲ ಸ್ಪರ್ಧಿಗಳು ಮೈಚಳಿ ಬಿಟ್ಟು ಆಡಲು ಶುರುಮಾಡಿಕೊಂಡಿದ್ದಾರೆ. ಈ ವಾರ ಬಿಗ್ ಬಾಸ್ ಮನೆ ಎರಡು ಟಿವಿ ವಾಹಿನಿಯಾಗಿ ಪರಿವರ್ತನೆಯಾಯಿತು. ಇದು ಬಿಗ್ ಬಾಸ್ ಇತಿಹಾಸದಲ್ಲೇ ಮೊಟ್ಟ ಮೊದಲ ಬಾರಿಯ ಪ್ರಯುತ್ನ. ಎಂಎಂ ಟಿವಿ ಮತ್ತು ಡಿಡಿ ಚಾನೆಲ್​ ಪೈಕಿ ಯಾರು ಹೆಚ್ಚು ಮನೋರಂಜನೆ ನೀಡುತ್ತಾರೆ ಆ ತಂಡ ಕ್ಯಾಪ್ಟನ್ಸಿ ಟಾಸ್ಕ್​ಗೆ ಅರ್ಹತೆ ಪಡೆಯುತ್ತಾರೆ.

ಎಂಎಂ ಟಿವಿಯಲ್ಲಿ ಧನರಾಜ್​​, ಹನುಮಂತ, ಶಿಶಿರ್​​, ರಜತ್​​, ಮೋಕ್ಷಿತಾ, ಚೈತ್ರಾ ಇದ್ದರೆ, ಡಿಡಿ ಟಿವಿಯಲ್ಲಿ ಐಶ್ವರ್ಯಾ, ಸುರೇಶ್​, ತ್ರಿವಿಕ್ರಮ್​​, ಭವ್ಯ, ಗೌತಮಿ ಮಂಜಣ್ಣ ಇದ್ದರು. ಈ ಟಾಸ್ಕ್​ನಲ್ಲಿ ಎಂಎಂ ಟಿವಿ (ಮಸ್ತ್ ಮಜಾ ಟಿವಿ) ಗೆಲುವು ಸಾಧಿಸಿದ್ದು, ತಂಡದ ಸದಸ್ಯರು ಕ್ಯಾಪ್ಟನ್ಸಿ ರೇಸ್‌ಗೆ ಎಂಟ್ರಿ ಪಡೆದಿದ್ದಾರೆ.

ಕ್ಯಾಪ್ಟನ್ಸಿ ಓಟದಲ್ಲಿರುವ ಸ್ಪರ್ಧಿಗಳು ಮನೆಯ ಉಳಿದ ಸ್ಪರ್ಧಿಗಳನ್ನ ತಮ್ಮ ಸಹಾಯಕರಾಗಿ ಆಡುವಂತೆ ಮನವೊಲಿಸಬೇಕು ಎಂಬ ಆದೇಶ ಬಿಗ್ ಬಾಸ್ ಕಡೆಯಿಂದ ಬರುತ್ತದೆ. ಇದಾದ್ಮೇಲೆ ಎಲ್ಲರೂ ಅವರವರ ಸಹಾಯಕರನ್ನ ಆಯ್ಕೆ ಮಾಡಿಕೊಂಡಿದ್ದಾರೆ. ಆದರೆ, ಕೊನೆಗೆ ಸೋತ ತಂಡದಲ್ಲಿದ್ದ ಗೌತಮಿ ಉಳಿದಂತೆ ಇದೆ. ಅತ್ತ ಕ್ಯಾಪ್ಟನ್ಸಿ ಟಾಸ್ಕ್ ಆಡುವ ಸದಸ್ಯರಲ್ಲಿ ಮೋಕ್ಷಿತಾ ಪೈ ಮಾತ್ರ ಉಳಿದುಕೊಂಡಿದ್ದಾರೆ.

ಮೋಕ್ಷಿತಾ-ಗೌತಮಿ ಜಗಳ ಎಲ್ಲರಿಗೂ ಗೊತ್ತು. ಹೀಗಾಗಿ ಮೋಕ್ಷಿತಾ ನಾನು ಗೌತಮಿ ಬಳಿ ಹೋಗಿ ಕೇಳಲ್ಲ ಅಂತ ಹಠ ಹಿಡಿದಿದ್ದಾರೆ. ಮೋಕ್ಷಿತಾ ಅವರು ಗೌತಮಿಯನ್ನು ಮನವೊಲಿಸಲು ಒಪ್ಪಿಕೊಳ್ಳುವುದಿಲ್ಲ. ನಾನು ಗೌತಮಿ ಹತ್ತಿರ ಕೇಳಲ್ಲ. ಅವರಿಂದ ನಾನು ಕ್ಯಾಪ್ಟನ್ ಆಗಬೇಕು ಅಂತಿದ್ದರೆ ನಾನು ಆಡೋದೇ ಇಲ್ಲ. ನನಗೆ ಆತ್ಮ ಗೌರವದ ಮುಂದೆ ಯಾವುದೂ ದೊಡ್ಡದಲ್ಲ. ನನ್ನ ಕಳಿಸಿದ್ರೆ ನಾಳೆಯೇ ಹೋಗ್ತೇನೆ ಎಂದು ಹೇಳಿದ್ದಾರೆ.

ಮೋಕ್ಷಿತಾ ಅವರ ಈ ನಿರ್ಧಾರ ಕೇಳಿ ಬಿಗ್ ಬಾಸ್ ಒಂದು ಶಾಕ್ ಕೂಡ ಕೊಟ್ಟಿದ್ದಾರೆ. ದೊಡ್ಡ ನಿರ್ಧಾರ ತೆಗೆದುಕೊಂಡರೆ ಅದಕ್ಕೆ ದೊಡ್ಡ ಬೆಲೆನೂ ಕಟ್ಟಬೇಕಾಗುತ್ತದೆ ಎಂದು ಹೇಳಿದ್ದಾರೆ. ಈ ಮೂಲಕ ಮೋಕ್ಷಿತಾ ಕ್ಯಾಪ್ಟನ್ಸಿ ಟಾಸ್ಕ್​ನಿಂದ ಬಹುತೇಕ ಔಟ್ ಆಗಿದ್ದಾರೆ. ಸದ್ಯ ಮೋಕ್ಷಿತಾ ವಿರುದ್ಧ ಬಿಗ್ ​​ಬಾಸ್ ಯಾವ ರೀತಿಯ ಕ್ರಮ ತೆಗೆದುಕೊಳ್ಳುತ್ತಾರೆ ಎಂಬ ಕುತೂಹಲ ಹೆಚ್ಚಾಗಿದೆ.

BBK 11: ಮೋಕ್ಷಿತಾಗೆ ಸೈಕೋ ಅಂದ್ರಾ ತ್ರಿವಿಕ್ರಮ್?: ಸಂಚಲನ ಮೂಡಿಸಿದ ಚೈತ್ರಾ ಹೇಳಿಕೆ