ಬಿಗ್ ಬಾಸ್ (Bigg Boss) ಮನೆಯಲ್ಲಿ ಈ ವಾರ ಈಗೋ ದೊಡ್ಡ ಮಟ್ಟದಲ್ಲಿ ಸದ್ದು ಮಾಡಿತು. ಎಷ್ಟರ ಮಟ್ಟಿಗೆ ಎಂದರೆ ಮೋಕ್ಷಿತಾ ಪೈ ಕ್ಯಾಪ್ಟನ್ಸಿ ಎಂಬ ಮಹತ್ವದ ಟಾಸ್ಕ್ ಅನ್ನೇ ತ್ಯಜಿಸಿದರು. ಜನರ ಅಭಿಮಾನಕ್ಕೂ ಬೆಲೆ ಕೊಡದೆ ತಮ್ಮಿಷ್ಟದಂತೆ ನಡೆದುಕೊಂಡರು. ಇದು ಎಲ್ಲರ ಕೆಂಗಣ್ಣಿಗೆ ಗುರಿಯಾಗಿದೆ. ಈ ಕುರಿತು ಇಂದು ಸುದೀಪ್ ಅವರು ವಾರದ ಕತೆ ಕಿಚ್ಚನ ಜೊತೆ ಎಪಿಸೋಡ್ನಲ್ಲಿ ಚರ್ಚೆ ನಡೆಸುವ ಸಾಧ್ಯತೆ ಇದೆ. ಮುಖ್ಯವಾಗಿ ಜನರ ತೀರ್ಪಿಗೇ ಮತ್ತೊಮ್ಮೆ ಧಕ್ಕೆ ತಂದ ಬಗ್ಗೆ ಮಾತನಾಡಲಿದ್ದಾರೆ.
ಆಗಿದ್ದೇನು?:
ಈ ವಾರ ಬಿಗ್ ಬಾಸ್ ಮನೆ ಎರಡು ಟಿವಿ ವಾಹಿನಿಯಾಗಿ ಪರಿವರ್ತನೆಯಾಯಿತು. ಎಂಎಂ ಟಿವಿಯಲ್ಲಿ ಧನರಾಜ್, ಹನುಮಂತ, ಶಿಶಿರ್, ರಜತ್, ಮೋಕ್ಷಿತಾ, ಚೈತ್ರಾ ಇದ್ದರೆ, ಡಿಡಿ ಟಿವಿಯಲ್ಲಿ ಐಶ್ವರ್ಯಾ, ಸುರೇಶ್, ತ್ರಿವಿಕ್ರಮ್, ಭವ್ಯ, ಗೌತಮಿ ಮಂಜಣ್ಣ ಇದ್ದರು. ಈ ಟಾಸ್ಕ್ನಲ್ಲಿ ಎಂಎಂ ಟಿವಿ (ಮಸ್ತ್ ಮಜಾ ಟಿವಿ) ಗೆಲುವು ಸಾಧಿಸಿ, ತಂಡದ ಸದಸ್ಯರು ಕ್ಯಾಪ್ಟನ್ಸಿ ರೇಸ್‌ಗೆ ಎಂಟ್ರಿ ಕೊಟ್ಟರು. ಈ ಗೆಲುವಿಗೆ ಜಿಯೋ ಆ್ಯಪ್ ಮೂಲಕ ಜನರು ಕೂಡ ಕೊಡುಗೆ ನೀಡಿದ್ದರು. ಕ್ಯಾಪ್ಟನ್ಸಿ ಓಟದಲ್ಲಿರುವ ಸ್ಪರ್ಧಿಗಳು ಮನೆಯ ಉಳಿದ ಸ್ಪರ್ಧಿಗಳನ್ನ ತಮ್ಮ ಸಹಾಯಕರಾಗಿ ಆಡುವಂತೆ ಮನವೊಲಿಸಬೇಕು ಎಂಬ ಆದೇಶ ಬಿಗ್ ಬಾಸ್ ಕಡೆಯಿಂದ ಬರುತ್ತದೆ.
ಹೀಗಾಗಿ ಎಂಎಂಟಿವಿಯ ಎಲ್ಲರೂ ಅವರವರ ಸಹಾಯಕರನ್ನ ಆಯ್ಕೆ ಮಾಡಿಕೊಳ್ಳುತ್ತಾರೆ. ಆದರೆ, ಅತ್ತ ತಂಡದಲ್ಲಿದ್ದ ಸದಸ್ಯರು ಯಾರೂ ಮೋಕ್ಷಿತಾ ಅವರಿಗೆ ಇಷ್ಟವಿಲ್ಲ. ಒಂದಲ್ಲ ಒಂದು ವಿಚಾರಕ್ಕೆ ಮನಸ್ತಾಪವಿದೆ. ಅಲ್ಲದೆ ಸೋತ ತಂಡದಲ್ಲಿ ಕೊನೆಗೆ ಗೌತಮಿ ಮಾತ್ರ ಉಳಿದುಕೊಂಡಿದ್ದರು. ಹೀಗಾಗಿ ಮೋಕ್ಷಿತಾ ಪೈ ನಾನು ಗೌತಮಿ ಬಳಿ ಹೋಗಿ ಕೇಳಲ್ಲ ಅಂತ ಹಠ ಹಿಡಿದು ಕ್ಯಾಪ್ಟನ್ಸಿ ಟಾಸ್ಕ್ ಆಡಲ್ಲ ಎಂದರು.
ಮೋಕ್ಷಿತಾ ಅವರ ಈ ನಿರ್ಧಾರ ಕೇಳಿ ಬಿಗ್ ಬಾಸ್, ದೊಡ್ಡ ನಿರ್ಧಾರ ತೆಗೆದುಕೊಂಡರೆ ಅದಕ್ಕೆ ದೊಡ್ಡ ಬೆಲೆನೂ ಕಟ್ಟಬೇಕಾಗುತ್ತದೆ ಎಂದು ಹೇಳಿದ್ದಾರೆ. ಈ ಮೂಲಕ ಮೋಕ್ಷಿತಾ ಕ್ಯಾಪ್ಟನ್ಸಿ ಟಾಸ್ಕ್ನಿಂದ ಔಟ್ ಆದರು. ಜನರು ವೋಟ್ ಮಾಡಿ ಈ ತಂಡವನ್ನು ಗೆಲ್ಲಿಸಿದರೂ ಅದಕ್ಕೆ ಬೆಲೆ ಕೊಡದೆ ಹಿಂದೆ ಸರಿದಿದ್ದಾರೆ. ಮನೆಯ ಕ್ಯಾಪ್ಟನ್ ಆಗಿದ್ದ ಧನರಾಜ್ ಆಚಾರ್ ಎಷ್ಟೇ ಮನವೊಲಿಸಿದರು ಬಗ್ಗಲಿಲ್ಲ.
ಇದೇ ವಿಚಾರವಾಗಿ ಇಂದು ಸುದೀಪ್ ಅವರು ಮೋಕ್ಷಿತಾಗೆ ಕ್ಲಾಸ್ ತೆಗೆದುಕೊಳ್ಳುವ ಸಾಧ್ಯತೆ ಇದೆ. ಕಳೆದ ವಾರ ಕೂಡ ಬಿಗ್ ಬಾಸ್ ಮನೆಯೊಳಗೆ ಸ್ಪರ್ಧಿ ಶೋಭಾ ಶೆಟ್ಟಿ ಜನರ ನಿರ್ಧಾರಕ್ಕೆ ಬೆಲೆ ಕೊಡದೆ ಹೊರಗೆ ಬಂದಿದ್ದರು. ಜನರು ಇವರನ್ನು ಎಲಿಮಿನೇಷನ್ನಿಂದ ಸೇವ್ ಮಾಡಿದ್ದರೂ ನಾನು ಕ್ವಿಟ್ ಮಾಡುತ್ತೇನೆ ಎಂದರು. ಬಳಿಕ ಸುದೀಪ್ ಕರ್ನಾಟಕದ ಜನತೆಗೆ ಕ್ಷಮೆ ಕೇಳಿದ ಘಟನೆ ಕೂಡ ನಡೆದಿತ್ತು. ಇದೀಗ ಮತ್ತೊಮ್ಮೆ ಜನರು ಅಭಿಪ್ರಾಯ ಕಡೆಗಣಿಸಿರುವ ಮೋಕ್ಷಿತಾಗೆ ಏನಾಗುತ್ತೆ ಎಂಬುದು ನೋಡಬೇಕಿದೆ.
BBK 11: ಈ ವಾರದ ಎಲಿಮಿನೇಷನ್ನಲ್ಲಿ ಬಿಗ್ ಟ್ವಿಸ್ಟ್ ಕೊಟ್ಟ ಬಿಗ್ ಬಾಸ್: ಏನಾಗಲಿದೆ?