Friday, 25th October 2024

Mr Rani Teaser : ಇದು ಏಕಪಾತ್ರಾಭಿನಯ; ಮಿಸ್ಟರ್ ರಾಣಿ ಟೀಸರ್ ಬಿಡುಗಡೆ

ಬೆಂಗಳೂರು: ಮಿಸ್ಟರ್ ರಾಣಿ (Mr Rani Teaser) ಸಿನಿಮಾದ ಪೋಸ್ಟರ್ ಕ್ರಿಯೆಟಿವಿಯಿಂದಾಗಿ ಸಖತ್ ವೈರಲ್‌ ಆಗಿತ್ತು. ಪೋಸ್ಟರ್ ಮೂಲಕವೇ ಅದು ಟ್ರೆಂಡ್ ಸೆಟ್ ಮಾಡಿತ್ತು.ಈಗ ಸಿನಿಮಾದ ಟೀಸರ್ ರೀಲಿಸ್ ಮಾಡಿದ್ದಾರೆ. ಸದ್ಯದ ಕ್ರೈಮ್, ಥ್ರಿಲರ್, ಹಾರರ್, ಲವ್ ಸ್ಟೋರಿ ಎಲ್ಲವನ್ನು ಬದಿಗಿಟ್ಟು ವಿನೂತನ ಶೈಲಿಯ ಕಾಮಿಡಿ ಎಂಟರ್ ಟೈನರ್ ಚಿತ್ರ ಸಿದ್ದಗೊಂಡಿದೆ. ಸೆಲ್ಫಿ ಮಮ್ಮಿ ಗೂಗಲ್ ಡ್ಯಾಡಿ ಖ್ಯಾತಿಯ ನಿರ್ದೇಶಕ ಮಧುಚಂದ್ರ ಮಾಡಿದ್ದಾರೆ.

“ ಹೀರೋ ಆಗ್ಬೇಕು ಅಂತ ಸಿನಿಮಾ ರಂಗಕ್ಕೆ ಬಂದ ಹುಡುಗ ಆಕಸ್ಮಿಕವಾಗಿ ಹೀರೋಯಿನ್ ಆಗಿಬಿಡ್ತಾನೆ ಅನ್ನೋದೆ ಸಿನಿಮಾದ ಕತೆ ಎಂಬಂತಿದೆ ಟೀಸರ್. ಒನ್ ಲೈನ್ ಸ್ಟೋರಿಯಲ್ಲೇ ಸಿನಿಮಾ ಎಷ್ಟು ಢಿಫರೆಂಟಾಗಿದೆ ಮತ್ತು ಮಜಾವಾಗಿದೆ ಅನ್ನೋದು ಗೊತ್ತಾಗುತ್ತದೆ.

ಲಕ್ಷ್ಮಿ ನಿವಾಸ ಸೀರಿಯಲ್‌ನಲ್ಲಿ ಜಯಂತ್ ಪಾತ್ರದ ಮೂಲಕ ಸಿಕ್ಕಾಪಟ್ಟೆ ಫೇಮಸ್ ಆಗಿರೋ ದೀಪಕ್ ಸುಬ್ರಹ್ಮಣ್ಯ ಈ ಚಿತ್ರದ ಹೀರೋ(ಯಿನ್!?) ರಾಣಿ ರೋಲ್ ಮಾಡಿರೋದು ದೀಪಕ್ ಸುಬ್ರಹ್ಮಣ್ಯ ಅಂತ ಗೊತ್ತಾದಾಗ ತುಂಬಾ ಜನ ಅಚ್ಚರಿಗೆ ಒಳಗಾಗಿದ್ದಾರೆ. ಒಬ್ಬ ಹೊಸ ಹುಡುಗ ಈ ಲೆವೆಲ್ ನಲ್ಲಿ ಹುಡುಗಿ ಥರ ಚೇಂಜ್ ಓವರ್ ಮಾಡೋಕೆ ಸಾಧ್ಯಾನಾ ಅಂತ ಎಲ್ಲಾರೂ ಅಚ್ಚರಿ ಪಟ್ಟಿದ್ದಾರೆ.

ರಾಣಿ ಪೋಸ್ಟರ್ ನೋಡಿ ನಮಗೆ ಇನ್ನೊಬ್ಬಳು ಹೀರೋಯಿನ್ ಕಾಂಪಿಟೇಷನ್ ಮಾಡೋಕೆ ಬಂದಳಲ್ಲ ಅಂತ ತುಂಬಾ ಜನ ಹೀರೋಯಿನ್ ಕೂಡ ಹೊಟ್ಟೆ ಉರಿ ಪಟ್ಟುಕೊಂಡಿದ್ದರಂತೆ. ಆದ್ರೆ ಟೀಸರ್ ನೋಡಿ ಅಯ್ಯೋ ರಾಣಿ ಹುಡುಗಿ ಅಲ್ಲ, ಹುಡುಗ ಅಂತ ಗೊತ್ತಾಗಿ ಬೇಸ್ತು ಬಿದ್ದಿದ್ದಾರೆ.

ಇದನ್ನೂ ಓದಿ: BBK 11: ‘ಮೆಟ್ಟು ತಗೊಂಡು ಹೊಡಿತೀನಿ’: ಸುದೀಪ್ ಮಾತಿಗೆ ಸ್ವಲ್ಪವೂ ಬೆಲೆ ಕೊಡದ ಚೈತ್ರಾ ಕುಂದಾಪುರ

ಇನ್ನು ಟೀಸರ್ ನೋಡಿದರೆ ಚಿತ್ರ ತಾಂತ್ರಿಕವಾಗಿ ಉತ್ತಮವಾಗಿ ಮೂಡಿ ಬಂದಿರುವ ಲಕ್ಷಣ ಕಾಣುತ್ತಿದೆ. ಟೀಸರ್ ಒಪನಿಂಗ್‌ನಲ್ಲಿ ಬರುವ ಅನಿಮೇಷನ್‌ ನೋಡಿದಾಗ ಇದು ಯಾವುದೋ ಹಾಲಿವುಡ್ ಚಿತ್ರವಿರಬೇಕೆಂದು ಅನ್ನಿಸುವುದರಲ್ಲಿ ಯಾವುದೇ ಸಂಶಯ ಇಲ್ಲ.

ಇದೊಂದು ವಿಭಿನ್ನ ರೀತಿಯ ಥಿಯೇಟರ್ ಎಕ್ಸ್ ಪೀರಿಯೆನ್ಸ್ ಕೊಡುವಂತ ಚಿತ್ರ ಎನಿಸುತ್ತಿದೆ. ಕಂಪ್ಲೀಟ್ ಕಾಮಿಡಿ ಪ್ಯಾಕೇಜ್ ಇರುವ ಈ ಚಿತ್ರದ ಟೀಸರ್ ಯೂಟ್ಯೂಬ್ ನಲ್ಲಿದೆ.